ಮುಂಬಯಿ: ವಂದೇ ಮಾತರಂ ಹಾಡಲು ನಿರಾಕರಿಸಿದ ಅಸಾವುದ್ದೀನ್ ಓವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್ ಇ ಇತೇಹದುಲ್ ಮುಸಲ್ಮಿನ್ ( ಎಐಎಂಐಎಂ) ಪಕ್ಷದ ಇಬ್ಬರು ಕಾರ್ಪೋರೇಟರ್ಗಳ ವಿರುದ್ಧ ಬಿಜೆಪಿ ಹಾಗೂ ಶಿವಸೇನೆ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.ಔರಂಗಾಬಾದ್ನ ಪುರಸಭಾ ಕಾರ್ಪೊರೇಷನ್ನಲ್ಲಿ ನಡೆದ ಸಭೆಯಲ್ಲಿ ಇಬ್ಬರು ಕಾರ್ಪೊರೇಟರ್ ಗಳು ವಂದೇ ಮಾತರಂಗೆ ಎದ್ದು ನಿಲ್ಲಲು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಶಿವಸೇನೆ ಹಾಗೂ ಬಿಜೆಪಿ ಸದಸ್ಯರು ವಂದೇ ಮಾತರಂ ಹಾಡಿವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಹಾಡಲಾಗದಿದ್ದರೆ ದೇಶಬಿಟ್ಟು ತೊಲಗಿ ಎಂದು ಬೊಬ್ಬೆಯಿಟ್ಟಿದ್ದಾರೆ.
ಅಂತಿಮವಾಗಿ ಮೇಯರ್ ಭಗ್ವಾನ್ದಾಸ್ ಘಾಡಮೋದೆ ಇಬ್ಬರು ಕಾರ್ಪೋರೇಟರ್ಗಳನ್ನು ಒಂದು ದಿನದ ಕಾಲ ಸಭೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಕೆಲ ದಿನಗಳ ಹಿಂದೆ ವಂದೇ ಮಾತರಂ ಗೀತೆಯನ್ನು ಹಾಡುವುದು ಅಸಾಂವಿಧಾನಿಕ ಎಂದು ಎಂಐಎಂ ಪಕ್ಷದ ನಾಯಕ ಓವೈಸಿ ಹೇಳಿದ್ದರು.
