ಉಸ್ತುವಾರಿ ಸಚಿವರಾದ ರಮಾನಾಥ ರೈಗಳು ತಮ್ಮ ಮಾತಿನಲ್ಲಿ ಹಿಡಿತ ತಪ್ಪುವುದು ಜನಪ್ರತಿನಿದಿಗೆ ಶೋಭೆಯಲ್ಲ. ಉಡುಪಿ ಸಂಸದರಾದ ಶೋಭಾ ಕರಂದ್ಲಾಜೆಯವರೇನು ಲೆಕ್ಕ ಕೊಡದ ಬೇನಾಮಿ ಆಸ್ತಿ ಮಾಡಿದ್ದಾರ? ಬೇನಾಮಿ ಆಸ್ತಿ ಇದ್ದರೆ ನಿಮ್ಮದೆ ಸರಕಾರ ಇದೆ ತನಿಖೆ ನಡೆಸಬಹುದಲ್ಲ. ಆಸ್ತಿ ಖರೀದಿಸಿದ್ದರೆ ಅದಕ್ಕೆ ಹಣದ ಮೂಲವನ್ನು ತೋರಿಸಬೇಕಲ್ಲ. ಇಷ್ಟು ಸಾಮಾನ್ಯ ಜ್ಞಾನವು ನಿಮಗಿಲ್ಲವೆ? ಯಾರನ್ನು ಮೆಚ್ಚಿಸಲು ಈ ನಾಟಕ ಮಾಡುತ್ತಿದೀರಿ? ನೀವು ಬಂಟ್ವಾಳ ಕ್ಷೇತ್ರಕ್ಕೆ ಶಾಸಕರಾದರು ಇಡಿ ರಾಜ್ಯಕ್ಕೆ ಸಚಿವರಾಗಿದ್ದಿರಿ ಇಂತಹ ವ್ಯಕ್ತಿ ಒಬ್ಬ ಮಹಿಳಾ ಜನಪ್ರತಿನಿದಿಯನ್ನು ಏಕವಚನದಲ್ಲಿ ವೈಯಕ್ತಿಕವಾಗಿ ನಿಂದಿಸಿರುವುದು ತೀರಾ ಖಂಡನೀಯ. ನೀವು ಕೂಡ ಶ್ರೀ ರಾಮ ಶಾಲೆಯಲ್ಲಿ ಕಲಿಯುತ್ತಿದ್ದರೆ ನಿಮಗೂ ಕೂಡ ಮತ್ತೊಬ್ಬರನ್ನು ಗೌರವಿಸುವ ಸಂಸ್ಕಾರ ಸಿಗುತಿತ್ತು. ನಿಮ್ಮ ಶ್ರೀಮಂತಿಕೆಯ ಅಹಂಕಾರವನ್ನು ಸಾರ್ವಜನಿಕವಾಗಿ ಪ್ರಕಟಪಡಿಸಿದಿರಿ. ನೀವು ಪಡೆದ ಸಂಸ್ಕಾರ ಶಾಶ್ವತ. ಶ್ರೀಮಂತಿಕೆ ಯಾವತ್ತು ಶಾಶ್ವತವಲ್ಲ. ವಿರೋದ ಪಕ್ಷದವರಿಗೆ ಕೈ ತೋರಿಸುವ ಮುಂಚೆ ನಿಮ್ಮ ಒಟ್ಟಿಗೆ ಇರುವ ನಿಮ್ಮದೆ ಪಕ್ಷದವರ ಆಸ್ತಿಗಳ 10 ವರ್ಷದ ಬೆಳವಣಿಗೆ ಲೆಕ್ಕಹಾಕಿ. ನಿಮ್ಮ ಮತಬೇಟೆಗಾಗಿ ಒಂದು ವರ್ಗದ ಓಲೈಕೆ ರಾಜಕಾರಣ ಕೈಬಿಡಿ. ನಿಮಗೆ ತಾಕತ್ ಇದ್ರೆ ಜಲೀಲ್ ಹತ್ಯಾ ಆರೋಪಿ ನಿಮ್ಮದೆ ಪಕ್ಷದ ಗ್ರಾ ಪಂ ಸದಸ್ಯನನ್ನು ಬಂದಿಸಿ. ನೀವು ಮೊನ್ನೆ ಪತ್ರಿಕಗೋಷ್ಟಿಯಲ್ಲಿ ನಮ್ಮ ಪಕ್ಷದವರು ಯಾರು ಕೊಲೆ ಕೃತ್ಯದಲ್ಲಿ ಬಾಗವಹಿಸಿಲ್ಲ ಅ ರೀತಿ ಯಾರಾದರು ನಮ್ಮ ಪಕ್ಷದಲ್ಲಿದ್ದರೆ ನಾನು ರಾಜಿನಾಮೆ ಕೊಡ್ತೇನೆ ಅಂತ ಹೇಳಿದ್ದೀರಿ ಹಾಗಾದ್ರೆ ಉಸ್ಮಾನ್ ಕರೋಪಾಡಿಯವರು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ ಗ್ರಾಮ ಪಂಚಾಯತ್ ಸದಸ್ಯ ಯಾರು? ಅವರನ್ನು ಇಷ್ಟರತನಕ ಬಂಧಿಸಲು ಯಾಕೆ ಸಾಧ್ಯವಾಗಿಲ್ಲ? ಈಗ ಹೇಳಿ ನೀವು ರಾಜಿನಾಮೆ ಯಾವಾಗ ಕೊಡುತ್ತೀರಿ? ಇಲ್ಲದಿದ್ದರೆ ಬಂಟ್ವಾಳದ ಮತದಾರರೆ ಮುಂದಿನ ಚುನಾವಣೆಯಲ್ಲಿ ಉತ್ತರಿಸ್ತಾರೆ. ನೀವು ಒಂದು ವರ್ಗದ ಮತವನ್ನು ಕೇಂದ್ರೀಕರಿಸುವುದಕೋಸ್ಕರ ಶ್ರೀ ರಾಮ ಶಾಲೆಯ ಸಾವಿರಾರು ಮಕ್ಕಳಿಗೆ ಅನ್ನದಾನವನ್ನು ಸ್ಥಗಿತಗೊಳಿಸಿರುವುದು ಸಾವಿರಾರು ಮಂದಿಗೆ ಅನ್ನ ನೀಡಿದ ನಿಮ್ಮ ಮನೆತನಕ್ಕು ಶೋಭೆಯಲ್ಲ. ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡಿ. ಒಳ್ಳೆಯ ಕೆಲಸದಲ್ಲಿ ರಾಜಕೀಯ ಮಾಡಬೇಡಿ. ವೈಯಕ್ತಿಕ ದ್ವೇಷ ಸಾದಿಸಲು ಹಿಂದುಳಿದ ವರ್ಗದ ಬಡ ಮಕ್ಕಳ ಹೊಟ್ಟೆಗೆ ಹೊಡೆಯುವುದು ಯಾವ ನ್ಯಾಯ? ಈ ರೀತಿಯ ದ್ವೇಷದ ರಾಜಕೀಯ ತಲೆದಿರುವುದು ಸರ್ವಥ ಖಂಡನೀಯ. ಹಿಂದು ದೇವಸ್ಥಾನಗಳನ್ನು ರಾಜಕೀಯಗೊಳಿಸಿ ಹಿಂದು ವರ್ಗವನ್ನು ಒಡೆಯುತ್ತ, ಮತ್ತೊಂದು ಕಡೆಯಲ್ಲಿ ಕೋಮುವಾದಿಗಳನ್ನು ಬೆಂಬಲಿಸಿ ಹಿಂದು ನಾಯಕರುಗಳ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಿ ಬಂದಿಸುವ ನಿಮ್ಮ ನೀಚ ರಾಜಕೀಯವನ್ನು ಕ್ಷೇತ್ರದ ಪ್ರಜ್ಞಾವಂತ ಜನತೆ ಸಹಿಸುವುದಿಲ್ಲ. ಅತಿ ಹೆಚ್ಚು ಕೊಲೆಗಳು, ಮರಕಳ್ಳತನ, ಮರಳು ಮಾಫಿಯ, ಕೋಮುಗಲಭೆ, ಪ್ರತಿಭಟನೆಗಳು ನಿಮ್ಮ ಕ್ಷೇತ್ರದಲ್ಲಿಯೆ ನಡೆಯುತ್ತಿದೆ ಯಾಕೆ? ಸೌಹಾರ್ದತೆಯಲ್ಲಿದ್ದ ಕಲ್ಲಡ್ಕದಲ್ಲಿ ಸಾಮರಸ್ಯ ಸಮಾವೇಶದ ಮೂಲಕ ಗಲಭೆ ಸೃಷ್ಟಿಸಿದವರು ಯಾರು? ಈ ಕೋಮುಗಲಬೆಗಳಿಂದ ಮರಳು ಮಾಫಿಯಕ್ಕೆ ಮಾತ್ರ ಲಾಭ. ಪೋಲಿಸರು ಶಾಂತಿ ಕಾಪಾಡಲು ಪ್ರಯತ್ನಿಸುತ್ತಿದ್ದಾಗ ರಾಷ್ಟ್ರಿಯ ಹೆದ್ದಾರಿಯಲ್ಲಿ ಎಗ್ಗಿಲ್ಲದೆ ಸಾಗಿದ್ದು ಮರಳು ಲಾರಿಗಳು ಮಾತ್ರ. ಈ ಬಗ್ಗೆ ಯಾವುದೆ ಚಿಂತೆ ಮಾಡದ ನೀವು ವೈಯಕ್ತಿಕ ನಿಂದನೆಗೆ ಹೊರಟಿರುವುದನ್ನು ಯಾವುದೇ ಕಾರಣಕ್ಕು ಸಹಿಸಲು ಸಾಧ್ಯವಿಲ್ಲ. ನಿಮ್ಮಲ್ಲಿರುವ ಹಿಂದು ವಿರೋದಿ ದೋರಣೆಯನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ಮುಂದೊಂದು ದಿನ ನೀವೂ ಕೂಡ ಪಶ್ಚಾತಾಪ ಪಡಬೇಕಾದೀತು. ಆದುದರಿಂದ ಓಲೈಕೆ ಮತ್ತು ದ್ವೇಷದ ರಾಜಕೀಯ ಬಿಟ್ಟು ಸಜ್ಜನಿಕೆಯ ಮತ್ತು ನೈತಿಕ ರಾಜಕಾರಣ ಮಾಡಿ ಎಂದು ಬಂಟ್ವಾಳ ಬಿಜೆಪಿ ಯುವಮೋರ್ಚಾವು ಆಗ್ರಹಿಸುತ್ತದೆ.
