ಬಂಟ್ವಾಳ : ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡಾಗ ಮನುಷ್ಯ ಪರಿಪೂರ್ಣವಾಗಿ ರೂಪುಗೊಳ್ಳುತ್ತಾನೆ . ಕೃಷ್ಣನ ಬದುಕಿನ ಧನಾತ್ಮಕ ವಿಚಾರಗಳನ್ನು ತಿಳಿಸುತ್ತಾ ಜನ್ಮಾಷ್ಟಮಿಯ ಮಹತ್ವದ ಬಗ್ಗೆ ಮಡಂತ್ಯಾರ್ ಸೆಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಮಧುಕರ್ ಮಲ್ಯ ನುಡಿದರು. ಅವರು ಬಿ.ಸಿ.ರೋಡ್ ರ ಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ 40ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಚ ಬಿ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ಎಂ.ಸತೀಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಬಿ.ಸಿ.ರೋಡ್ ಉಪಸ್ಥಿತರಿದ್ದರು. ಕೃಷ್ಣ ವೇಷ ಪ್ರದರ್ಶಿಸಿದ ಹಾಗೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗ¼ಗೆ ಬಹುಮಾನ ವಿತರಿಸಲಾಯಿತು. ಲ/ಲೋಕನಾಥ ಶೆಟ್ಟಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶ್ರೀಧರ ಶೆಣೈ ವಂದಿಸಿದರು. ಲಿಂಗಪ್ಪ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.
