ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾಜಿ ಸೈನಿಕರಾದ ಜನಾರ್ಧನ್ ಕುಲಾಲ್ ಪೆರಾಜೆ, ಅವರು ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. “ ಭಾರತವು ಸಾಗರದಂತೆ ಹಲವು ಜಾತಿ , ಧರ್ಮ, ಮತಗಳಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು” ಎಂದು ಶಾಲಾ ಆಡಳಿತಾಧಿಕಾರಿ ಸಿ. ಶ್ರೀಧರ್‍ರವರು ಹೇಳಿದರು. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಲಕ್ಷ್ಮೀಯವರು ಮಾತನಾಡಿ “ ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ದೇಶ ಸೇವೆಗೆ ಹೋಗುವ ಅವಕಾಶವನ್ನು ಪೋಷಕರು ಕಲ್ಪಿಸಿಕೊಡುವಂತಾಗಬೇಕು” ಎಂದರು. ಶಾಲಾ ಸಂಚಾಲಕ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಜೆ.ಪ್ರಹ್ಲಾದ್ ಶೆಟ್ಟಿಯವರು ಮಾತನಾಡಿ “ ಇದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಆಚರಿಸುವ ಹಬ್ಬ, ನಾವು ನಮ್ಮ ನಾಡನ್ನಷ್ಟೇ ಅಲ್ಲದೆ, ಮಾತಾ-ಪಿತ ಹಾಗೂ ಗುರು ಹಿರಿಯರನ್ನು ಪೂಜಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೆ.ಬಾಲಕೃಷ್ಣ ಆಳ್ವ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ. ನಾರಾಯಣ ಶೆಟ್ಟಿ , ಮುಖ್ಯಶಿಕ್ಷಕಿಯರಾದ ವಿಜಯಲಕ್ಷ್ಮೀ ವಿ.ಶೆಟ್ಟಿ, ಹಾಗೂ ಗ್ರೇಸ್ ಪಿ ಸಲ್ಡಾನ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪೂಜಾ ರೈ ಸ್ವಾಗತಿಸಿ, ಶ್ರವಣ್ ಶೆಟ್ಟಿ ವಂದಿಸಿದರು. ಗಹನಶ್ರೀ ಹಾಗೂ ತಬ್ ಶೀರಾ ಫರಾಹತ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.



