ಸಿದ್ಧಕಟ್ಟೆ : ಸಂಗಬೆಟ್ಟು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಜುಲೈ 18ರಂದು ನಡೆದಿದ್ದು, ಈ ಸಭೆಯ ನಿರ್ಣಯ ನಂ.50/2017-18 ಅನ್ವಯ ಆ.15 ಮಂಗಳವಾರ ನಡೆಯುವ ಸಿದ್ಧಕಟ್ಟೆಯ ಹಫ್ತೆವಾರು ಮಾರುಕಟ್ಟೆಯನ್ನು ರದ್ದುಪಡಿಸಿದೆ.
ಮಾರುಕಟ್ಟೆಯ ನಿರ್ವಹಣೆಯನ್ನು ಗ್ರಾಮ ಪಂಚಾಯತ್ ಟೆಂಡರ್ ಮೂಲಕ ಖಾಸಗಿಯವರಿಗೆ ನೀಡಲಾಗಿದೆ. ಪ್ರತಿ ಮಂಗಳವಾರ ಸಿದ್ಧಕಟ್ಟೆಯಲ್ಲಿ ಹಫ್ತೆವಾರು ಮಾರುಕಟ್ಟೆ ನಡೆಯುತ್ತಿದ್ದು, ಆ. 15 ಮಂಗಳವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಿದ್ಧಕಟ್ಟೆಯ ಹಫ್ತೆವಾರು ಮಾರುಕಟ್ಟೆಯನ್ನು ಗ್ರಾ.ಪಂ. ಆಡಳಿತ ರದ್ದುಪಡಿಸಿದೆ.

??????????????????????????????? ???????????????????????????????
ಹಲವು ವರ್ಷಗಳಿಂದ ಸಿದ್ಧಕಟ್ಟೆಯ ಕೇಂದ್ರ ಮೈದಾನದ ಸಮೀಪದಲ್ಲಿ ಮಾರುಕಟ್ಟೆ ನಿರ್ಮಾಣವಾಗಿದ್ದು, ಇಲ್ಲಿನ ಸುತ್ತಮುತ್ತಲಿನ ಊರಿಗೆ ಇದೇ ದೊಡ್ಡ ಮಾರುಕಟ್ಟೆಯಾಗಿದೆ.ಪ್ರತಿ ಮಂಗಳವಾರದಂದು ಹಣ್ಣು,ತರಕಾರಿ,ದಿನ ಬಳಕೆ ಸಾಮಾಗ್ರಿಗಳು ಮಾರಾಟ ನಡೆಯುತ್ತಿದ್ದು, ಪ್ರತ್ಯೇಕವಾಗಿ ಮೀನು ಹಾಗೂ ಮಾಂಸ ಮಾರಾಟಕ್ಕೂ ಮಾರುಕಟ್ಟೆಯನ್ನು ಸಹ ಹೊಂದಿದೆ.
ಹಲವು ಬಾರಿ ಹಫ್ತೆವಾರು ಮಾರುಕಟ್ಟೆ ರದ್ದು :
ಮಾರುಕಟ್ಟೆಯು ಕೇಂದ್ರ ಮೈದಾನಕ್ಕೆ ಸಮೀಪದಲ್ಲಿದೆ. ಹಲವು ಬಾರಿ ಮೈದಾನದಲ್ಲಿ ನಡೆಯುವ ನಾನಾ ಸಂಘ-ಸಂಸ್ಥೆಗಳ ಬೃಹತ್ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸುವವರಿಗೆ ಆಸನ ವ್ಯವಸ್ಥೆ ಮಾಡಲು ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣದಿಂದ ಕಾರ್ಯಕ್ರಮದ ಆಯೋಜಕರ ಮನವಿಯಂತೆ ಗ್ರಾ.ಪಂ. ಆಡಳಿತ ಮೊದಲೇ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಮಂಗಳವಾರ ನಡೆಯುವ ಹಫ್ತೆವಾರು ಮಾರುಕಟ್ಟೆ ರದ್ದು ಪಡಿಸಿದ ಪ್ರಸಂಗ ಹಲವು ಬಾರಿ ನಡೆದಿದೆ ಎನ್ನುತ್ತಾರೆ ಸ್ಥಳೀಯರು.

By Suddi9

Leave a Reply

Your email address will not be published. Required fields are marked *