ಬಂಟ್ವಾಳ: ಚಲನಚಿತ್ರ ಕ್ಷೇತ್ರದಲ್ಲಿ ಇಂದು ‘ತಿನ್ ಫಿಲ್ಮ್ ಟೆಕ್ನೋಲಜಿ’ ಇಂದು ಬಳಕೆಯಾಗುತ್ತಿರುವುದು ಚಲನಚಿತ್ರಗಳ ಹೊಸ ಅವಿಷ್ಕಾರವಾಗಿದೆ ಎಂದು ಸಂತ ಅಲೋಸಿಯಸ್ ಕಾಲೇಜು ಮಂಗಳೂರು ಇಲ್ಲಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾದ ಶ್ರೀ ಚಂದ್ರಶೇಖರ ಶೆಟ್ಟಿ ಹೇಳಿದರು.

12bhphysics - Copy
ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ನಡೆದ ‘ತಿನ್ ಫಿಲ್ಮ್ ಟಿಕ್ನೋಲಜಿ’ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ತಂತ್ರಜ್ಞಾನದ ವ್ಯಾಪ್ತಿ ವಿಶಾಲವಾದುದು ಮತ್ತು ಬಳಕೆಗೆ ಅರ್ಹ. ಇಂದು ತಂತ್ರಜ್ಞಾನವು ಅತೀ ವೇಗದಲ್ಲಿ ಸಾಗುತ್ತಿದೆ. ಆವಿಷ್ಕರಿಸಿದ ತಂತ್ರಜ್ಞಾನ ಇದು ಪ್ರತಿಯೊಂದು ಹಂತದಲ್ಲೂ ಅಳವಡಿಕೆಯಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಮಾತನಾಡಿ ಆಧುನಿಕ ತಂತ್ರಜ್ಞಾನದ ಬೆಳವಣಿಗೆ ಕುರಿತ ತಿಳುವಳಿಕೆ ಅಗತ್ಯ ಈ ಕುರಿತು ಅರಿವನ್ನು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಶಿಕಲಾ ಎಂ.ಪಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುರಕ್ಷ ಕಾರ್ಯಕ್ರಮ ನಿರೂಪಿಸಿದರು. ನತಾಶಾ ಜಾಸ್ಮಿನ್ ಡಿ.ಸೋಜಾ ಸ್ವಾಗತಿಸಿದರು. ಜೂನಸ್ ರೋಜರ್ ರೋಡ್ರಿಗಸ್ ವಂದಿಸಿದರು.

 

By Suddi9

Leave a Reply

Your email address will not be published. Required fields are marked *