ಬಡಗಬೆಳ್ಳೂರು; ಆದಿಶಕ್ತಿ  ದೇವಸ್ಥಾನ ಬಡಗಬೆಳ್ಳೂರು  ,ಆದಿಶಕ್ತಿ ಸೇವಾ ಸಮಿತಿ ಮತ್ತು ಆದಿಶಕ್ತಿ ಮಹಿಳಾ ಮಂಡಳಿ ಇದರ ವತಿಯಿಂದ ಬರುವ ಅಗಸ್ಟ 15ರಂದು ಸ್ವಾತಂತ್ರ ದಿನಾಚರಣೆ ಮತ್ತು ಮೊಸರು ಕುಡಿಕೆ ಉತ್ಸವ ಆದಿಶಕ್ತಿ ಚಾಮುಂಡೇಶ್ವರಿ ದೇವಾಲಯದ ವಠಾರದಲ್ಲಿ  ನಡೆಯಲಿರುವುದು ಎಂದು ಆದಿಶಕ್ತಿ   ಸೇವಾ ಸಮಿತಿ ಮತ್ತು ಆದಿಶಕ್ತಿ ಮಹಿಳಾ ಮಂಡಳಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಆಲ್ಬರ್ಟ ಡಿ ಸೋಜಾ ರವರು ಧ್ವಜಾರೋಹಣ ನಡೆಸಲಿರುವರು ಹಾಗೂ ಬೊಳ್ಳೂರುಗುತ್ತು ಕೃಷ್ಣಪ್ರಸಾದ್ ರೈ ವಿವಿಧ ಆಟೋಟ ಕಾರ್ಯಕ್ರಮಗಳ ಉದ್ಘಾಟಿಸಲಿರುವರು.
ಹಾಗೂ ಅದೇ ದಿನ ಸಂಜೆ 6 ಘಂಟೆಗೆ ಸಂಸದರ ಅನುದಾನ ನಿಧಿಯಿಂದ ಮಂಜೂರಾದ ಹೈಮಾಸ್ಟ ದೀಪವನ್ನು ಪ್ರಗತಿಪರ ಕೃಷಿಕರಾದ ರಾಜೇಶ್ ನಾಯ್ಕ ಉಳಿಪಾಡಿಗುತ್ತು ಇವರು ನೆರವೇರಿಸುವರು ಹಾಗೂ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಯೋಗೀಶ್ ಪೂಜಾರಿ ಸೂರ್ಲ ಇವರು ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವರು .

By Suddi9

Leave a Reply

Your email address will not be published. Required fields are marked *