BySuddi9

Aug 5, 2017

ಂಟ್ವಾಳ : ಕರ್ನಾಟಕ ರಾಜ್ಯದಲ್ಲಿ ಶೇ. 22 ಅಂಶ ಅರಣ್ಯ ಸಂಪತ್ತಿದ್ದು ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಶನಿವಾರ ಲೊರೆಟ್ಟೊ ಪದವಿನ ಲೊರೆಟ್ಟೊ ಮಾತಾ ಸಭಾಭವನದಲ್ಲಿ ನಡೆದ ಕೃಷಿ ಅರಣ್ಯ ಪೆÇ್ತ್ಸಾಹ ಯೋಜನೆಗೆ ಚಾಲನೆ ಮತ್ತು ವೃತ್ತ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.KAR_7539
ಪ್ರಸ್ತುತ ಇರುವ ಅರಣ್ಯವನ್ನು ಉಳಿಸಿಕೊಂಡು ಭವಿಷ್ಯದಲ್ಲಿ ಅದನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರವು ಜಮೀನು ಇರುವಂತಹ ರೈತರಿಗೆ ಮೂರು ವರ್ಷದ ಹಂತದಲ್ಲಿ ಪ್ರತೀ ಗಿಡಕ್ಕೆ ನೂರು ರೂ. ನೀಡುವ ಮೂಲಕ ಪೆÇ್ರೀತ್ಸಾಹಿಸುತ್ತಿದೆ. ಒಬ್ಬ ವ್ಯಕ್ತಿ ಒಂದು ಸಾವಿರ ಗಿಡವನ್ನು ನೆಟ್ಟು ಮೂರು ವರ್ಷದ ತನಕ ಸಾಯದಂತೆ ಬೆಳೆಸಿ ಉಳಿಸಿದರೆ ಅವನಿಗೆ ಒಂದು ಲಕ್ಷ ರೂ. ದೊರೆಯಲಿದೆ ಎಂದರು.
ಅರಣ್ಯ ಸಂರಕ್ಷಣೆ ಕೇವಲ ಒಂದು ಇಲಾಖೆ ಮಾಡುವ ಕೆಲಸವಲ್ಲ. ಎಲ್ಲರ ಪಾಲ್ಗೊಳ್ಳುವಿಕೆ ಬೇಕು. ಇದಕ್ಕಾಗಿ ಇಂತಹ ಜನಜಾಗೃತಿ ಮಾಡುವುದಾಗಿದೆ. ಇದನ್ನು ಶಾಲಾ ಕಾಲೇಜುಗಳಲ್ಲಿ, ಸಂಘಸಂಸ್ಥೆಗಳಲ್ಲಿ ಮಾಡುವ ಮೂಲಕ ಪರಿಸರ ಉಳಿಸಿ ಬೆಳೆಸುವ ಕೆಲಸ ಆಗಬೇಕು. ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಸುತ್ತಮುತ್ತಲಿನ ಕಾಡು ಪ್ರದೇಶದ ಮಂದಿಗೆ ಅಡುಗೆ ಅನಿಲ ವಿತರಿಸುವ ಯೋಜನೆಯು ಕಾರ್ಯಗತವಾಗಿದ್ದು ಕಟ್ಟಿಗೆಗಾಗಿ ಅರಣ್ಯವನ್ನು ಅವಲಂಬಿಸುವ ಒತ್ತಡ ಕಡಿಮೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಬಂಟ್ವಾಳ ವಲಯ ಧರ್ಮಗುರು ಅ| ವಂ| ಮ್ಯಾಕ್ಸಿಂ ಎಲ್. ನೊರೊನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಅರಣ್ಯ ನಮ್ಮ ಬದುಕನ್ನು ರೂಪಿಸಿದೆ. ಗಿಡಮರ ಹಸುರು ಹೊದಿಕೆ ಇಲ್ಲದಿದ್ದರೆ ಭೂಮಿ ಬರಡಾಗಬಹುದು. ಕಥೋಲಿಕ್ ಸಭಾ ಇಂತಹ ಒಳ್ಳೆಯ ಕೆಲಸಗಳಿಗೆ ಸದಾ ಪೆÇ್ರೀತ್ಸಾಹ ನೀಡುತ್ತಿದೆ ಎಂದರು.
ಪ್ರಮುಖವಾಗಿ ಸಂಘಸಂಸ್ಥೆಗಳು ಗಿಡವನ್ನು ನೆಡುವ ಬೆಳೆಸುವ ಹೊಣೆಗಾರಿಕೆಯನ್ನು ವಹಿಸಬೇಕು. ಒಂದು ಮಗುವಿಗೆ ಶಿಕ್ಷಣ ನೀಡುವಷ್ಟೆ ಮುಖ್ಯವಾಗಿ ಪ್ರತೀ ಮಗುವಿನ ಹೆಸರಲ್ಲಿ ವರ್ಷಂಪ್ರತಿ ಗಿಡವನ್ನು ನೆಟ್ಟು ಅದನ್ನು ಬದುಕಿಸಿ ಬೆಳೆಸುವುದು ಮುಖ್ಯವಾಗಿದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಸದಸ್ಯ ಪಿಯೂಸ್ ಎಲ್.ರೊಡ್ರಿಗಸ್ , ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಲೊರೆಟ್ಟೊ ಚರ್ಚ್ ಧರ್ಮಗುರು ವಂ| ಎಲಿಯಾಸ್ ಡಿಸೋಜ, ಅಗ್ರಾರ್ ಚರ್ಚ್ ಧರ್ಮಗುರು ವಂ| ಗ್ರೆಗರಿ ಡಿಸೋಜ ಮಾತನಾಡಿದರು.ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಅಮ್ಟಾಡಿ ತಾ.ಪಂ. ಸದಸ್ಯೆ ಮಲ್ಲಿಕಾ ಶೆಟ್ಟಿ, ಬೇಬಿ ಕೃಷ್ಣಪ್ಪ, ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಮಂಗಳೂರು ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕರಿಕಲನ್, ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ರಿಚ್ಚರ್ಡ್ ಮಿನೇಜಸ್, ಲಯನ್ಸ್ ಅಧ್ಯಕ್ಷ ರೋಯ್ ಕಾರ್ಲೊ, ಅಗ್ರಾರ್ ಕಥೋಲಿಕ್ ಅಧ್ಯಕ್ಷ ಆ್ಯಂಟನಿ ಸಿಕ್ವೇರಾ, ಉದಯ ಕುಮಾರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಪುರಸಭಾ ಸದಸ್ಯ ಜಗದೀಶ ಕುಂದರ್,ಮುಖ್ಯಶಿಕ್ಷಕಿ ಸಿ| ಶಾಂತಿ ವೇದಿಕೆಯಲ್ಲಿದ್ದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಸಂಜಯ್ ಎಸ್. ಬಿಜ್ಜೂರ್ ಪ್ರಸ್ತಾವಿಸಿದರು. ಕಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಅಧ್ಯಕ್ಷ ಸ್ಟಾನಿ ಕಾರ್ಲೊ ಸ್ವಾಗತಿಸಿ, ಶಿಕ್ಷಕಿ ಸ್ಟಾನಿ ಕಾರ್ಲೊ ವಂದಿಸಿದರು. ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *