ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ, ಕೈಕಂಬ ಇಲ್ಲಿ ವನಮಹೋತ್ಸವ ಆಚರಣೆ ನಡೆಯಿತು. ಆಡಳಿತ ಮಂಡಳಿ ಮುಖ್ಯಸ್ಥರಾದ ವಾಲ್ಟರ್ ಸ್ಟೀಫನ್ ಮೆಂಡಿಸ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾದ ಕಂದಾವರ ಪಂಚಾಯತಿಯ ಅಭಿವೃಧ್ದಿ ಅಧಿಕಾರಿ ರೋಹಿಣಿ ವನಮಹೋತ್ಸವದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮಂಡಿಸ್, ಮುಖೋಪಾದ್ಯಾಯ ಮಹೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ರೂಪಕ, ನೃತ್ಯ ಮತ್ತು ಭಾಷಣ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಅತಿಥಿಗಳು ಶಾಲಾ ಆವರಣದ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟರು. ನತಾಲಿಮಾ ಆಲಿಸ್ ಕಾರ್ಯಕ್ರಮ ನಿರೂಪಿಸಿದರು. ನಿವೇದಿತಾ ವಂದಿಸಿದರು.

