ಕುಪ್ಪೆಪದವು : ಪ್ರೌಢಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ಕೊಡಮಾಡಲ್ಪಡುವ ಸೈಕಲ್ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಾದ ಮೋಹಿಯುದ್ದೀನ್ ಬಾವಾ ಅವರು ಜೆಡಿಎಸ್ ನ ಪ್ರತಿಭಟನೆ ಎದುರಿಸಬೇಕಾದ ಪ್ರಮೇಯ ಎದುರಾಯಿತು.ಇತ್ತಿಚೆಗೆ ಶಾಸಕರ ಅನುದಾನ ನಿಧಿಯಿಂದ ರಸ್ತೆಯೊಂದರ ಕಾಮಾಗಾರಿಗೆ 4.5 ಲಕ್ಷ ರುಪಾಯಿಗಳನ್ನು ಮಂಜೂರು ಮಾಡಲಾಗಿತ್ತು ಆದರೆ ಆ ರಸ್ತೆಯಲ್ಲಿ ಕೇವಲ ಗ್ರಾಮ ಪಂಚಾಯತ್ ಅಧ್ಯಕ್ಷನ ಮನೆ ಬಿಟ್ಟರೆ ಬೇರಾವ ಮನೆಯೂ ಇಲ್ಲ ಆದುದರಿಂದ ಆ ಅನುದಾನವನ್ನು ಹಿಂದೂ ರುದ್ರಭೂಮಿಯ ರಸ್ತೆಯ ಅಭಿವೃದ್ಧೀಗೆ ಬಳಸಬಹುದಿತ್ತು ಎಂದು ಮನವಿ ಸಲ್ಲಿಸಲು ಹೋದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮತುಕತೆ ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸೂಚನೆಯನ್ನರಿತ ಕಾಂಗ್ರೆಸ್ ಕಾರ್ಯಕರ್ತರು ಬಾವಾರನ್ನು ಕಾರಿನಲ್ಲಿ ಕುಳ್ಳಿರಿಸಿ ಅವರ ಕಾರ್ಯಕ್ರಮಕ್ಕೆ ಎಡೆಮಾಡಿಕೊಟ್ಟರು.
ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಕುಪ್ಪೆಪದವು ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಡೆದಿದ್ದರೆ ಉಪಾದ್ಯಕ್ಷ ಸ್ಥಾನವನ್ನು ಜೆಡಿಎಸ್ ಹಂಚಿಕೊಂಡು ದೋಸ್ತಿ ರಾಜಕೀಯ ಮಾಡಿಕೋಂಡಿವೆ ಆದರೆ ಇಂದಿನ ಈ ಬೆಳವಣಿಗೆ ದೋಸ್ತಿಗೆ ಪೆಟ್ಟು ನೀಡುವುದೇ ಎಂದು ಕಾದು ನೋಡಬೇಕಾಗಿದೆ.ತದನಂತರ ಪಂಚಾಯತ್ ಕಾರ್ಯಲಯದಲ್ಲಿ ಮಾತನಾಡಿದ ಶಾಸಕರು ” ಈ ಕ್ಷೇತ್ರಕ್ಕೆ ನಾನು ಹಲವಾರು ಬಾರಿ ಭೇಟಿ ನೀಡುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ ಆದರೆ ಲೋಕಸಭಾ ಸದಸ್ಯರು ಈ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪರೋಕ್ಷ ಟಾಂಗ್ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
