ಪೊಳಲಿ :  ಇಲ್ಲಿನ ಸಮೀಪದ ಕಲ್ಕುಟ ತಾರಿಪಡ್ಪು ಎಂಬಲ್ಲಿ ಗಾಳಿಮಳೆಗೆ ಮನೆ ಭಾಗಶಃ ಕುಸಿದಿದ್ದು ಪ್ರಾಣಾಪಾಯದ ಜೀವನ ನಡೆಸುವ ಪ್ರಮೇಯ ಎದುರಾಗಿದೆ. ತಿಮ್ಮಪ್ಪ ಪೂಜಾರಿ ಮತ್ತು ರೇವತಿ ಎಂಬವರಿಗೆ ಸೇರಿದ ಮನೆ ಇದಾಗಿದ್ದು ಮನೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದಿದ್ದು ವಾಸಿಸಲು ಅಸಾಧ್ಯವಾಗಿ ಕುಟುಂಬಸ್ಥರನ್ನು ಸಂಕಟಕ್ಕೀಡು ಮಾಡಿದೆ.DSC_4402
ಮನೆಯ ಯಜಮಾನಿ ರೇವತಿ ಪೂಜಾರಿ ಮಾತನಾಡುತ್ತಾ ಮನೆಯ ಪರಿಸ್ಥಿತಿ ಬಹಳ ಶೋಚನೀಯವಾಗಿದ್ದು ತೀವ್ರ ಬಡತನದಿಂದ ಕೂಡಿದೆ. ಒಪ್ಪೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಇರುವಾಗ ಹೊಸ ಮನೆಯ ನಿರ್ಮಾಣ ಮಾಡುವುದು ಹೇಗೆ ಎಂದರು. ರಾತ್ರಿ ವೇಳೆಯಲ್ಲಿ ಮನೆಯಲ್ಲಿ ಮಲಗಲು ಸಹಾ ಭಯವಾಗುತ್ತಿದ್ದು ಮನೆ ಈಗಲೋ ಆಗಲೋ ಎಂಬಂತೆ ಬೀಳುವ ಪರಿಸ್ಥಿತಿಯಲ್ಲಿದೆ. ಜೊತೆಗೆ ಗಂಡನ ಅನಾರೋಗ್ಯ, ನಾಲ್ಕು ಮಕ್ಕಳಲ್ಲಿ ಮನೆಯ ಆಧಾರಸ್ಥಂಭದಂತಿದ್ದ ಇದ್ದೋಬ್ಬ ಮಗನೂ ನಾಲ್ಕು ತಿಂಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಕೆಲಸ ಮಾಡಲಾಗದಂತಹಾ ಸ್ಥಿತಿಯಲ್ಲಿದ್ದಾನೆ. ಜೊತೆಗೆ ಮೂರು ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು ಓರ್ವ ಅಳಿಯ ಎರಡು ಮಗಳು ತೀರಿಕೋಂಡಿದ್ದಾರೆ ಇದ್ದೊಬ್ಬ ಮಗಳು ತಾಯಿಯ ಮನೆಯಲ್ಲಿದ್ದುಕೊಂಡೇ ಬೀಡಿ ಕಟ್ಟುತ್ತಾ ಆರ್ಥಿಕವಾಗಿ ನೆರವಾಗುತ್ತಿದ್ದಾರೆ ಎಂದರು. ನಮ್ಮ ಬಡತನದ ಬಗ್ಗೆ ಮತ್ತು ಮನೆಯ ಶೋಚನೀಯ ಸ್ಥಿತಿಯ ಬಗ್ಗೆ ಪಂಚಾಯತ್‍ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಕಳೆದ ಒಂದುವರೆ ವರ್ಷದಿಂದ ನಮಗೆ ಸರಕಾರಿ ಪಡಿತರ ಸಾಮಗ್ರಿಗಳೂ ದೊರಕುತ್ತಿಲ್ಲ . ನಮ್ಮ ಕಷ್ಟವನ್ನು ಕಂಡ ಪ್ರೇಮ್ ಪೊಳಲಿ ಇವರು ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಾಗ್ರಿಗಳನ್ನು ದಾನವಾಗಿ ನೀಡಿದ್ದರು ಎಂದರು.  ಈ ಬಗ್ಗೆ ಪಂಚಾಯತ್ ಅಧ್ಯಕ್ಷರ ಬಳಿ ಹಾಗೂ ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಅವಲತ್ತುಕೊಂಡರು. ಜೊತೆಗೆ ಸರಕಾರದ ವತಿಯಿಂದ ಯಾವುದಾದರೂ ಕಾರ್ಯಕ್ರಮದ ಮೂಲಕ ನಮಗೆ ತಾತ್ಕಾಲಿಕವಾಗಿ ಬದಲಿ ವ್ಯವಸ್ಥೆ ಮಾಡಿಕೊಡಿ ಎಂದು ವಿನಂತಿಸಿಕೊಳ್ಳುವ ದೃಶ್ಯ ಮನಕಲಕುವಂತಿತ್ತು.4
ಈ ಬಗ್ಗೆ ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ್ ಪೊಳಲಿ ಬಳಿ ವಿಚಾರಿಸಿದಾಗ ಅವರು “ನಾನು ಈ ವಿಚಾರವನ್ನು ಈಗಾಗಲೇ ಕರಿಯಂಗಳ ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಿಗರ ಗಮನಕ್ಕೆ ತಂದಿದ್ದೇನೆ ಮತ್ತು ಸರಕಾರದ ಯಾವುದಾದರೂ ಯೋಜನೆಯ ಮುಖಾಂತರ ಬದಲಿ ವ್ಯವಸ್ಥೆಗೆ ಪ್ರಯತ್ನಿಸುತ್ತಿದ್ದೇನೆ” ಎಂದರು.
ಕರಿಯಂಗಳ ಗ್ರಾಮ ಪಂಚಾಯತ್ ಗ್ರಾಮ ಕರಣಿಕರಾದ ಪ್ರಶಾಂತ್ ಬಳಿ ಮಾತನಾಡಿದಾಗ ಅವರು ” ನಾನು ಖುದ್ದಾಗಿ ತೆರಳಿ ಮನೆಯ ಸ್ಥಿತಿಯನ್ನು ಪರಿಶೀಲಿಸಿ ಬಂದಿದ್ದೇನೆ ಜೊತೆಯಲ್ಲಿ ಮನೆಯವರಲ್ಲಿ ಪಂಚಾಯತ್ಗೆ ಒಂದು ಮನವಿ ಪತ್ರ ಮತ್ತು ಅರ್ಜಿಯನ್ನು ನೀಡುವಂತೆ ತಿಳಿಸಿರುತ್ತೇನೆ ಜೊತೆಗೆ ಪ್ರಾಕೃತಿಕ ವಿಕೋಪ ನಿಧಿಯಿಂದ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದೇನೆ” ಎಂದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾವತಿಯವರ ಬಳಿ ಮಾತನಾಡಿದಾಗ ಅವರು ಆಶ್ರಯ ಯೋಜನೆಯಡಿಯಲ್ಲಿ ಬದಲಿ ಮನೆಯ ವ್ಯವಸ್ಥೆಗೆ ಅರ್ಜಿಯನ್ನು ತಾಲೂಕು ಪಂಚಾಯತ್‍ಗೆ ಸಲ್ಲಿಸಿರುತ್ತೇನೆ ಆದರೆ ಇನ್ನೂ ದೃಢೀಕೃತ ಪ್ರತಿ ನನ್ನ ಕೈ ಸೇರಿಲ್ಲ ಎಂದರು.DSC_4402

 ಈ ವಿಷಯದ ಕುರಿತಾದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

By Suddi9

Leave a Reply

Your email address will not be published. Required fields are marked *