ಗುರುಪುರ : ಇಲ್ಲಿನ ಅಲಾೈಗುಡ್ಡೆಯಲ್ಲಿರುವ ಸರ್ಕಾರಿ ಹೋಮಿಯೋ ಚಿಕಿತ್ಸಾಲಯದಲ್ಲಿ ರಾಜ್ಯ ಸರ್ಕಾರ, ದ ಕ ಜಿ ಪಂ, ಆಯುಷ್ ಇಲಾಖೆ ವತಿಯಿಂದ ಮೂಡಬಿದ್ರೆಯ ಆಳ್ವಾಸ್ ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಗುರುಪುರ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಜುಲೈ 21ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಶಾಸಕ ಮೊೈದಿನ್ ಬಾವಾ ಸ್ಥಳೀಯ ನೂರಾರು ಮಂದಿಗೆ ಉಚಿತ ಹೋಮಿಯೋಪತಿ ಕಿಟ್ ವಿತರಣೆ ವಿತರಿಸಿದರು.mb-5
ಅಲೋಪತಿಗಿಂತಲೂ ಪರಿಣಾಮಕಾರಿ ಔಷಧಿ ಹೋಮಿಯೋಪತಿಯಲ್ಲಿದೆ. ಹಿಂದಿನವರು ಎಷ್ಟೇ ದೊಡ್ಡ ಕಾಯಿಲೆಯಾಗಿದ್ದರೂ ತಮ್ಮ ಸುತ್ತಮುತ್ತ ಲಭ್ಯವಿರುವ ಔಷಧೀಯ ಗಿಡ, ತೊಗಟೆ, ಕಾಂಡ, ಬೇರು, ಎಲೆ, ಕಾಯಿಗಳಿಂದ ಔಷಧಿ ತಯಾರಿಸಿ ಬಳಸಿಕೊಳ್ಳುತ್ತಿದ್ದರು. ಅಂತಹ ವ್ಯಕ್ತಿಗಳು ರೋಗಮುಕ್ತರಾಗಿ ನೂರು ವರ್ಷ ಬದುಕಿರುವುದನ್ನು ಈಗಲೂ ನಾವು ಕಾಣುತ್ತೇವೆ. ಆದ್ದರಿಂದ ಇನ್ನಾದರೂ ಸಾರ್ವಜನಿಕರು ಈ ಔಷಧೀಯ ಪ್ರಕಾರದ ಪ್ರಯೋಜನ ಪಡೆಯಬೇಕೆಂದು ಬಾವಾ ಹೇಳಿದರು.ಈ ಸಂದರ್ಭದಲ್ಲಿ ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ, ತಾ ಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾ ಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಸದಸ್ಯರಾದ ಸದಾಶಿವ ಶೆಟ್ಟಿ, ಯಶವಂತ ಶೆಟ್ಟಿ, ಮಾಜಿ ಸದಸ್ಯ ಪ್ರಶಾಂತ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ ದೇವದಾಸ್ ಕಾರ್ಯಕ್ರಮದ ಉದ್ದೇಶ ವಿವರಿಸಿದರು.

By suddi9

Leave a Reply

Your email address will not be published. Required fields are marked *