ಆಷಾಧ ಮಾಸದ ಅಮವಾಸ್ಯೆಯಂದು ರೋಗನಿರೋಧಕ ಶಕ್ತಿಯನ್ನು ನೀಡುವ ಹಾಲೇ ಮರದ ತೊಗಟೆಯ ಕಷಾಯ ಸೇವಿಸುತ್ತಾರೆ .ಆದ್ರೆ ಸ್ವಾಮಿ ಬೆಳಿಗ್ಗೆ ಬೇಗ ತೊಗಟೆ ತೆಗೆಯಲು ಹೋಗುವುದರಿಂದ ಹಾಲೇ ಮರದ ಬದಲು ಹಾಲೇ ಮರದ ಬದಲು ಬೇರೋಂದು ಮರದ ಕೆತ್ತೆ ತಂದು ಜಿವಕ್ಕೆ ಅಪಾಯ ತಂದುಕೋಳ್ಳುವ ಪ್ರಮೇಯವೇ ಜಾಸ್ತಿ ಇರುವುದರಿಂದ ಜಾಗರೂಕತೆ ಬಹಲ ಮುಖ್ಯ
ಏಕೆ ಹಾಲ ಮರದ ತೊಗಟೆ ಕಷಾಯ ಕುಡಿಯಬೇಕು ? ಅದರಲ್ಲೇನು ವಿಷೇಶ??
ಹಾಲೇ ಮರದಲ್ಲಿ ವಾದಿಕ್ಷಮತ್ವ ಹೆಚ್ಚಿಸುವ ಗುಣ ಅಂದರೆ ಇಮ್ಯುನೋ ಮಾಡಿಲೇಟರ್ ವೈರಾಣು ನಿರೋಧಕ ಮತ್ತು ಕ್ಯಾನ್ಸರ್ ಗಡ್ಡೆಯ ಗಾತ್ರ ಕಡಿಮೆ ಮಾಡುವ ºಗುಣ (ಹೆಬಾಟೋ ಪ್ರೊಟೆಕ್ಟಿವ್ ಲಿವರ್ ಮೇಲೆ ಜಂಡಿಸ್ ಕಡಿಮೆ ಮಾಡಿ ರಕ್ಷಿಸುವ ಗುಣ ಅಇಸಾರ ನಿರೋಧಕ ಗುಣ ಜ್ವರ ತಾಪ ಕಡಿಮೆ ಮಾಡುವ ಗುಣ ಹೊಂದಿದೆ.ಈ ಮೇಲೆ ಇತಳಿಸಿದ ಎಲ್ಲಾ ಗುಣಗಳು ವೈಜ್ಞಾನಿಕವಾಗಿ ಧ್ರಡಪಡಿಸಲಾಗಿದೆ ಎನ್ನುತ್ತಾರೆ ಮಣಿಪಾಲ ಮುನಿಯಾಲು ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ.aati amavasye
ಯಾವ ಮುಹೂರ್ತದಲ್ಲಿ ತೊಗಟೆಯನ್ನು ಸಂಗ್ರಹಿಸುವುದು ಉತ್ತಮ ?
ಆಯುರ್ವೇದ ಶಾಸ್ತ್ರದಲ್ಲಿ ಕಚ್ಚಾವಸ್ತುಗಳನ್ನು ಸಂಗ್ರಹಿಸುವಾಗ ಬ್ರಾಹ್ಮೀ ಮುಹೂರ್ತದಲ್ಲಿ ಸೂರ್ಯೋದಯಕ್ಕೆ ಅಭಿಮುಖವಾಗಿ ಹೋಗಿ ಸಮಗ್ರಹಿಸಬೇಕೆಂದು ಉಲ್ಲೇಖವಿದೆ. ಈ ಹೊತ್ತಿನಲ್ಲಿ ವಸ್ತುವಿನ ಗುಣಕಾರತ್ವ ಹೆಚ್ಚಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಹೇಳುವುದಿದೆ.
ಮಾಸ ಯಾ ಋತುಧರ್ಮ
ದ್ರವ್ಯಸಾರ ಸಿದ್ದಾಂತದಲ್ಲಿ ಒಂದೊಂದು ಬಗೆಯನ್ನು ಒಂದೊಂದು ಕಾಲದಲ್ಲಿ ಸಂಗ್ರಹ ಮಾಡಬೇಕೆಂಬ ಉಲ್ಲೇಖವಿದೆ. ಆಷಾಢ ಶಾವಣ ಮಾಸ ಪೂರ್ತಿ ಹಾಲೆ ಮರದಲ್ಲಿ ಗರಿಷ್ಠ ಗುಣಣಕಾರತ್ವವಿರುತ್ತದೆ ಎನ್ನುವುದೂ ವೈಜಾನಿಕವಾಗಿ ದೃಢಪಟ್ಟಿರುವ ವಿಚಾರ . ಪರ್ವಕಾಲ ಎಂಬ ಹಿನ್ನೆಲೆಯಲ್ಲಿ ಅಮವಾಸ್ಯೆಯಂದು ಹಾಲೇ ಮರದ ತೊಗಟೆಯನ್ನು ಕಷಾಯ ಮಾಡಿ ಸೇವಿಸುವ ಪರಿಪಾಠ ಇರಬಹುದೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು??ತೊಗಟೆಯನ್ನು ನೀರು ಮಿಶ್ರಣ ಮಾಡಿ ಜಜ್ಜಿ ರಸ ತೆಗೆದು ಸ್ವೀಕರಿಸುತ್ತಾರೆ. ಈ ರಸವನು ವ್ಯಕ್ತಿಯೋಬ್ಬ ಗರಿಷ್ಠ 25 ಮಿ.ಲೀ ಸೇವಿಸಬಹುದು. ಆದರೆ ಕುದಿಸಿ ಕಷಾಯ ಮಾಡುವುದಾದರೆ 50 ಮಿ.ಲೀವರೆಗೂ ಸೇವಿಸಬಹುದು. ಕೆಲವರು ಬೆಳ್ಳುಳ್ಳಿ, ಜೀರಿಗೆ, ಓಮಸತ್ವ ಅರಶಿಣ ಮಿಶ್ರಣ ಮಾಡುವುದೂ ಇದೆ..

ತೊಗಟೆ ಸಂಗ್ರಹಿಸುವಾಗ ಎಚ್ಚರಿಕೆ ಇರಲಿ

ಬೆಳಗ್ಗೆ ಬೇಗ ತೊಗಟೆ ಸಂಗ್ರಹಿಸಲು ಹೋಗುವ ಕಾರಣ ಕತ್ಲಿನಲ್ಲಿ ಹಾಲೆ ಮರದ ತೊಗಟೆ ಬದಲು ಈ ಮರದ ರೀತಿಯೇ ಕಾಣುವ ಕಾಸರಕ ಮರದ ತೊಗಟೆಯನ್ನು ತಂದು ಜೀವಕ್ಕೆ ಅಪಾಯ ಮಾಡಿಕೊಂಡಿರುವುದೂ ಇದೆ, ಆದ್ದರಿಂದ ತೊಗಟೆ ಸಂಗ್ರಹಿಸುವಾಗ ಎಚ್ಚರಿಕೆ ಅತ್ಯಗತ್ಯ.

By suddi9

Leave a Reply

Your email address will not be published. Required fields are marked *