Bysuddi9

Jul 22, 2017

ಬಂಟ್ವಾಳ; ವಿದ್ಯಾರ್ಥಿ ಕ್ರೀಡಾಪಟುಗಳು ಮಾನಸಿಕ ಹಾಗೂ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ,ಶಿವರಾಮಯ್ಯ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ , ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಎಸ್‍ವಿಎಸ್ ದೇವಳ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಬಂಟ್ವಾಳದ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ 2017-18 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.IMG_9521
ಕ್ರೀಡಾಕೂಟಗಳನ್ನು ಅರ್ಥಪೂರ್ಣವಾಗಿ ಆಯೋಜಿಸಿದಾಗ ಮಾತ್ರ ಕ್ರೀಡಾಪಟುಗಳ ನೈಜಪ್ರತಿಭೆಗಳು ಬೆಳಕಿಗೆ ಬರುತ್ತದೆ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಾ ಕ್ರೀಡಾಕೂಟ ಆಯೋಜಿಸುವಲ್ಲಿ ಸರ್ವರೂ ಶ್ರಮವಹಿಸುವಂತೆ ಅವರು ಕರೆ ನೀಡಿದರು. ಸ್ಫರ್ಧೆಗಳ ಸಂದರ್ಭ ಯಾವುದೇ ರೀತಿಯ ಅವ್ಯವಹಾರ, ಅಪಾದನೆ, ಆರೋಪಗಳು ಬಾರದೆ ಎಲ್ಲವೂ ನ್ಯಾಯೋಚಿತವಾಗಿ, ಯಶಸ್ವಿಯಾಗಿ ನಡೆಯಲಿ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಎಸ್. ದೇವಳದ ಮೊಕ್ತೇಸರರಾದ ದಾಮೋದರ ಪ್ರಭು ರವರು ಮಾತನಾಡಿ, ಎಸ್‍ವಿಎಸ್ ದೇವಳದ ವಿದ್ಯಾಸಂಸ್ಥೆಗೆ ಕ್ರೀಡಾಕೂಟದ ಆತಿಥ್ಯವಹಿಸುವ ಅವಕಾಶ ದೊರೆತಿದ್ದು, ಇದಕ್ಕೆ ಪೂರಕವಾಗಿ ಇಲಾಖೆಯ ಸಹಕಾರ ಬೇಕಿದೆ ಎಂದರು.
ಮುಂದಿನ ನವೆಂಬರ್ 15 ಮತ್ತು 16 ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಬಂಟ್ವಾಳದ ಎಸ್‍ವಿಎಸ್ ದೇವಳದ ಕ್ರೀಡಾಂಗಣದಲ್ಲಿ ಆಯೋಜಿಸುವ ಬಗ್ಗೆ ಎಸ್‍ವಿಎಸ್ ದೇವಳ ವಿದ್ಯಾಸಂಸ್ಥೆಯ ಸಂಚಾಲಕ ಬಿ.ಪುರುಷೋತ್ತಮ ಶೆಣೈ ಯವರು ಸಭೆಯಲ್ಲಿ ಘೋಷಿಸಿದರು.ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ರಘುನಾಥ, ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ನಾಯಕ್,ಗೌರವಾಧ್ಯಕ್ಷ ಗಂಗಾಧರ ರೈ, ದ.ಕ.ಜಿಲ್ಲಾ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ ಭಟ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸ್ಟೇನ್ಲಿ ತಾವ್ರೋ, ತಾಲೂಕು ಸಮನ್ವಯಾಧಿಕಾರಿ ರಾಜೇಶ್, ವಿವಿಧ ತಾಲೂಕುಗಳ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ರತ್ನಾವತಿ, ಲಕ್ಷ್ಮೀಶ ರೈ, ಸುಂದರ ಗೌಡ, ಯಶೋಧರ ಸುವರ್ಣ, ಗುರುನಾಥ ಬಾಗೇವಾಡಿ, ಉಷಾ, ಶಿವಾನಂದ ಕಾಯ್ಕಿಣಿ, ವಿವಿಧ ಶಿಕ್ಷಣ ಸಂಘಟನೆಗಳ ಪ್ರಮುಖರಾದ ಕಡ್ತಾಲ ಶೇಖರ, ಅಖಿಲ್ ಶೆಟ್ಟಿ, ತಾರೇಶ ನಾಯ್ಕ, ರಘು ಅಳಿಕೆ, ಶಿವಪ್ರಸಾದ್ ಶೆಟ್ಟಿ, ರಾಮಚಂದ್ರರಾವ್, ಚೆನ್ನಕೇಶವ, ಜೋಯಲ್ ಪಿಂಟೋ, ರಾಧಾಕೃಷ್ಣ ಅಡ್ಯಂತಾಯ, ಜಗದೀಶ ಕಲ್ಲಡ್ಕ, ವಲಯಸಂಯೋಜಕರಾದ ಪ್ರಕಾಶ ಮಂಚಿ, ಶ್ರೀಕಾಂತ್, ಸುಜಾತ ಆರ್ ಶೆಟ್ಟಿ, ಪುಷ್ಪಾ, ಎಸ್‍ವಿಎಸ್ ದೇವಳ ಆಂಗ್ಲಮಾಧ್ಯಮ ಶಾಲಾ ಮುಖ್ಯಗುರು ರೋಶನಿ ತಾರಾ ಡಿ.ಸೋಜ, ಕುಸುಮಾವತಿ, ನಂದಿನಿಬಾಯಿ, ಚಂದ್ರಕಲಾ, ವಾಮದಪದವ ಸರ್ಕಾರಿ ಪ.ಪೂ.ಕಾಲೇಜಿನ ಉಪಪ್ರಾಂಶುಪಾಲ ರಾಘವೇಂದ್ರ ಬಲ್ಲಾಳ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾಗಿ ನಿಯುಕ್ತಿಗೊಂಡ ವೈಶಿವರಾಮಯ್ಯ , ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ರಘುನಾಥ, ಬಂಟ್ವಾಳ ಶಿಕ್ಷಣಾಧಿಕಾರಿ ಲೋಕೇಶ್,, ಬಂಟ್ವಾಳ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರತ್ನಾವತಿ ಯವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಮಂಗಳೂರು ಉತ್ತರ ವಲಯಕ್ಕೆ ಬಂಟ್ವಾಳದಿಂದ ವರ್ಗಾವಣೆಗೊಂಡ ಗುರುನಾಥ ಬಾಗೇವಾಡಿಯವರನ್ನು ಸನ್ಮಾನ ಮೂಲಕ ಬೀಳ್ಕೊಡಲಾಯಿತು. ಇತ್ತೀಚೆಗೆ ನಿಧನರಾದ ದ.ಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಕೆ.ಬಿ.ಕೇಶವ ರವರಿಗೆ ಸಂತಾಪ ಸೂಚಿಸಿ ಮೌನಪಾರ್ಥನೆ ನಡೆಸಲಾಯಿತು.ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ ಸ್ವಾಗತಿಸಿದರು. ಬಂಟ್ವಾಳ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರತ್ನಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಕಿಣಿ ವಂದಿಸಿದರು . ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್ ಶೆಟ್ಟಿ, ಜಯರಾಮ್, ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *