ಸುದ್ದಿಬೆಳ್ಮಣ್: ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ಮಂಗಳವಾರ ಸಂಜೆ ರಿಕ್ಷಾ ಚಾಲಕನೊಬ್ಬನಿಗೆ ಕಾರಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು, ಡಿಕ್ಕಿಗೆ ಹಲ್ಲೆ ನಡೆದಿದೆ. ಇದರಿಂದ ಸಚ್ಚರಿಪೇಟೆಯಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದ್ದು, ಘಟನೆ ಸಂಬಂಧಿಸಿದಂತೆ ಲಾಠಿ ಚಾಚರ್್ ನಡೆಸಿನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ ಪರಿಸರದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಇತ್ತೀಚೆಗೆ ಸಚ್ಚೇರಿ ಪೇಟೆಯ ರಿಕ್ಷಾ ಚಾಲಕನೋರ್ವನಿಗೆ ಅನ್ವರ್ ಎಂಬ ಮುಸ್ಲಿಂ ಯುವಕನೋರ್ವ ಬೈಕ್ನಲ್ಲಿ ಅಡ್ಡಗಟ್ಟಿ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದು,ಅದೇ ಯುವಕ ತನ್ನ ಸ್ನೇಹಿತ ನಯಾಸ್ ಜೊತೆ ನಿನ್ನೆ ಕಡಂದಲೆಯ ಮತ್ತೋರ್ವ ರಿಕ್ಷಾ ಚಾಲಕ ದಿನೇಶ್ ಎಂಬವರು ತನ್ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಎದುರುಗಡೆಯಿಂದ ತನ್ನ ಕಾರಿನಲ್ಲಿ ಅತೀ ವೇಗವಾಗಿ ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿ ಚರಂಡಿಗೆ ತನ್ನ ಕಾರನ್ನು ಹಾಕಿದ್ದ ಎನ್ನಲಾಗಿದೆ.ಇದರಿಂದ ಸಿಟ್ಟಿಗೆದ್ದ ದಿನೇಶ್ ತನ್ನ ರಿಕ್ಷಾದಿಂದ ಇಳಿದು ಈ ಬಗ್ಗೆ ಅನ್ವರ್ನನ್ನು ಪ್ರಶ್ನಿಸಿದ್ದಾರೆ.ಇದಕ್ಕೆ ಅನ್ವರ್ ಉಡಾಪೆಯಾಗಿ ವತರ್ಿಸಿದ್ದು,ಮಾತಿಗೆ ಮಾತು ಬೆಳೆದು ಅನ್ವರ್ಗೆ ದಿನೇಶ್ ತನ್ನ ಸ್ನೇಹಿತರೊಂದಿಗೆ ಹಲ್ಲೆ ನಡೆಸಿದ್ದನೆಂದು ದೂರಿ ಆಸ್ಪತ್ರೆಗೆ ದಾಖಲಾಗಿ ಪೋಲಿಸ್ ದೂರು ನೀಡಿದ್ದ.

ಉದ್ರಿಗ್ತರನ್ನು ಚದುರಿಸಲು ಕಾರ್ಕಳ ಪೋಲಿಸರು ಉಡುಪಿ ಜಿಲ್ಲಾ ಪೋಲಿಸ್ ಉಪ ಅಧೀಕ್ಷಕ ಅಣ್ಣಾ ಮಲೈ ನೇತೃತ್ವದಲ್ಲಿ ಪೋಲಿಸ್ ತುಕಡಿಗಳು ಉದ್ರಿಕ್ತರನ್ನು ಚದುರಿಸಿದ್ದಾರೆ.ಪ್ರಕರಣದಲ್ಲಿ ಒಟ್ಟು ನಾಲ್ಕು ಮಂದಿಯನ್ನು ಬಂದಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಕಾರ್ಕಳ ಗ್ರಾಮಾತರ ಠಾಣಾಧಿಕಾರಿ ಮಹಧೇವ ಸೆಟ್ಟಿ ಉಡುಪಿ ಎಎಸ್ಪಿ ಗೆ ಮಾಹಿತಿ ನೀಡಿ ಹೆಚ್ಚುವರಿ ಪೋಲಿಸ್ ತುಕುಡಿಗಳು ಆಗಮಿಸಿ ಲಾಠಿ ಚಾರ್ಜ ನಡೆಸಿ ಉದ್ರಿಗ್ತರನ್ನು ಚದುರಿಸಿದ್ದಾರೆ.ಮೂಡಬಿದ್ರೆ ಠಾಣಾಧಿಕಾರಿ ರಮೇಶ್ ಕುಮಾರ್ ಕೂಡ ಸ್ಥಳಕ್ಕಾಗಮಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ನೆರವಾದರು.ಘಟನಾ ಸ್ಥಳಕ್ಕೆ ಜಗದೀಶ್ ಅಧಿಕಾರಿ,ಕೆಪಿ ಸುಚರಿತ ಶೆಟ್ಟಿ ಸ್ಥಳಕ್ಕೆ ಆಗಮಿಸಿದರು.

04

01

02

03

 

By suddi9

Leave a Reply

Your email address will not be published. Required fields are marked *