ಮುಂಬಯಿ: ಸೈಂಟ್ ಪೀಟರ್’ಸ್ ಅಸೋಸಿಯೇಶನ್ ಬಾರ್ಕೂರು (ಮುಂಬಯಿ) ಸಂಸ್ಥೆಯು ತನ್ನ ಪೆÇೀಷಕಸಂತ ಸೈಂಟ್ ಪೀಟರ್ ಅವರ 30ನೇ ವಾರ್ಷಿಕ ಸಂತೋತ್ಸವ ಇಂದಿಲ್ಲಿ ಭಾನುವಾರ ಉಪನಗರ ಅಂಧೇರಿ ಪೂರ್ವದ ಮರೋಳ್ ವಿಜಯಾನಗರದ ಸೈಂಟ್ ವಿನ್ಸೆಂಟ್ ಪಲ್ಲೋಟ್ಟಿ ಇಗರ್ಜಿಯ ಸಭಾಗೃಹದಲ್ಲಿ ವಿಜೃಂಭನೆ ಯಿಂದ ಸಂಭ್ರಮಿಸಿತು. ಪಾಲ್ಲೋಟ್ಟಿ ಚರ್ಚ್‍ನ ಧರ್ಮಗುರು ರೆ| ಫಾ| ಜೆರಾಲ್ಡ್ ಡಿ’ಕೋಸ್ಟಾ ಮತ್ತು ರೆ| ಫಾ| ವಾಲ್ಟರ್ ಮಿನೇಜಸ್ ಸಂಭ್ರಮಿಕ ಕೃತಜ್ಞತಾ ಪೂಜೆ ನೆರವೇರಿಸಿ ಆಶೀರ್ವಚಿಸಿದರು.ಬಳಿಕ ಉಪಸ್ಥಿತ ಸದಸ್ಯರು ವಾರ್ಷಿಕ ಸಂತೋತ್ಸವ ಸಂಭ್ರಮಿಸಿದ್ದು ಅಸೋಸಿಯೇಶನ್‍ನ ಅಧ್ಯಕ್ಷ ಬೊನಿಫಸ್ ಸಿಕ್ವೇರಾ ದೀಪ ಪ್ರಜ್ವಲಿಸಿ ಉತ್ಸವಕ್ಕೆ ಚಾಲನೆಯನ್ನೀಡಿ ತನ್ನ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಸಿದರು ಹಾಗೂ ಸಂಸ್ಥೆಯ ವಿದ್ಯಾನಿಧಿಯಿಂದ ವಾರ್ಷಿಕವಾಗಿ ಕೊಡಮಾಡುವ ಶೈಕ್ಷಣಿಕ ದೇಣಿಗೆ, ಪ್ರತಿಭಾ ಪುರಸ್ಕಾರ ಮಕ್ಕಳಿಗೆ ಪ್ರದಾನಿಸಿ ಅಭಿನಂದಿಸಿದರು.St. Peter's Assn (Barkur) 18

St. Peter's Assn (Barkur) 12

St. Peter's Assn (Barkur) B2

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರುಗಳಾಗಿ ಚಲನಚಿತ್ರ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್, ಸಮಾಜ ಸೇವಕರುಗಳಾದ ಎಲಿಜಾಬೆತ್ ಕಾರ್ಡಿಲ್, ಫ್ರಾನ್ಸಿಸ್ ಒಲಿವೇರಾ, ಉದ್ಯಮಿಹ್ಯಾರಿ ಬಥೇಲ್ಲೊ ಉಪಸ್ಥಿತರಿದ್ದು ಅಧ್ಯಕ್ಷರು ಪುಷ್ಪಗುಪ್ಚವನ್ನಿತ್ತು ಗೌರವಿಸಿದರು. ಗಣ್ಯರು ಸರ್ವರಿಗೂ ಉತ್ಸವದ ಶುಭೇಚ್ಛ ಸಲ್ಲಿಸಿದರು.ಆದಿಯಲ್ಲಿ ಬೊನಿಫಸ್ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಅಸೋಸಿಯೇಶನ್‍ನ 12ನೇ ವಾರ್ಷಿಕ ಮಹಾಸಭೆ ನಡೆಸಲಾ ಯಿತು. ಉಪಾಧ್ಯಕ್ಷ ನೊರ್ಬರ್ಟ್ ಮಿನೇಜಸ್ ಮತ್ತು ತಿಮೋಥಿ ಜನ ಸಂಪರ್ಕ ಅಧಿಕಾರಿ ಜೋಲ್ವಿನ್ ಫುರ್ಟಾಡೋ, ಯೋಜನಾ ಸಂಯೋಜಕ ಐವಾನ್ ರೆಬೆಲ್ಲೋ, ಕಾರ್ಯಕ್ರಮ ವ್ಯವಸ್ಥಾಪಕ ಜೊೈಲನ್ ಫೆರ್ನಾಂಡಿಸ್ ವೇದಿಕೆಯಲ್ಲಿ ಆಸೀನರಾಗಿದ್ದು ಪ್ರಧಾನ ಕಾರ್ಯದರ್ಶಿ ಎರಿಕ್ ಕರ್ವಾಲೋ ಸಭಾ ಕಲಾಪ ನಡೆಸಿ ಕಾರ್ಯಕಾರಿ ಸಮಿತಿಯ ವಾರ್ಷಿಕ ವರದಿ ಸಭೆ ಮುಂದಿಟ್ಟರು. ಜೊತೆ ಕಾರ್ಯದರ್ಶಿ ಆರ್ಥರ್ ಮೆಂಡೋನ್ಸಾ ಗತವಾರ್ಷಿಕ ಮಹಾಸಭೆ ವರದಿ ಮಂಡಿಸಿದರು.St. Peter's Assn (Barkur) 20

ಕೋಶಾಧಿಕಾರಿ ಜೊನ್ ಗೊನ್ಸಾಲಿಸ್ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಪುರಸ್ಕೃತರ ಪಟ್ಟಿ ವಾಚಿಸಿದರು. ಮಾಜಿ ಅಧ್ಯಕ್ಷ ಫೆಲಿಕ್ಸ್ ಬಾರ್ನ್ಸ್ 2017-2020ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕ್ರಿಯೆ ನಡೆಸಿ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದರು. ಬಳಿಕ ನೂತನ ಅಧ್ಯಕ್ಷ ಐವಾನ್ ರೆಬೆಲ್ಲೋ ಅವರಿಗೆ ನಿರ್ಗಮನ ಅಧ್ಯಕ್ಷ ಬೊನಿಫಸ್ ಸಿಕ್ವೇರಾ ಪುಷ್ಪಗುಪ್ಚ ನೀಡಿ ಬರಮಾಡಿ ಶುಭಾರೈಸಿದರು. ಮತ್ತೋರ್ವ ಮಾಜಿ ಅಧ್ಯಕ್ಷ ರಿಚಾರ್ಡ್ ಕರ್ವಾಲೋ ಅವರು ನಿರ್ಗಮನ ಅಧ್ಯಕ್ಷ ಬೊನಿಫಸ್ ಸಿಕ್ವೇರಾ ಅವರಿಗೆ ಪುಷ್ಪಗುಪ್ಚವನ್ನಿತ್ತು ಅಭಿವಂದಿಸಿದರು.ಜನ ಸಂಪರ್ಕ ಅಧಿಕಾರಿ ಜೋಸೆಫ್ ಡಿ’ಅಲ್ಮೇಡಾ ಸಂತ ಪೀಟರ್‍ಗೆ ಭಕ್ತಿಗೀತೆಯನ್ನಾಡಿ ಆರಾಧನೆ ನಡೆಸಿದ ರು. ಸಭೆಯಲ್ಲಿ ಗತ ಸಾಲಿನಲ್ಲಿ ಅಗಲಿದ ಸಂಸ್ಥೆಯ ಸದಸ್ಯರು, ಹಿತೈಷಿಗಳು ಮತ್ತು ಸಮಾಜದ ಗಣ್ಯರಿಗೆ ವಿಶೇಷವಾಗಿ ಸಂಸ್ಥಾಪಕ ಸಿಂಫೆಲಿಯನ್ ಸಿಕ್ವೇರಾ ಹಾಗೂ ಮಾಜಿ ಅಧ್ಯಕ್ಷ ಹೆನ್ರಿ ರೋಚ್ ಅವರ ಸೇವೆ ಸ್ಮರಿಸಿ ಮೌನಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು. ಜೊೈಲನ್ ಫೆರ್ನಾಂಡಿಸ್ ಸಭಾ ಕಾರ್ಯಕ್ರಮ ನಿರ್ವಾಹಿಸಿದರು. ಯುವ ವಿಭಾಗದ ಎವಿಟಾ ಕರ್ವಾಲೋ, ಆನ್‍ವಿಲ್ ರೆಬೆಲ್ಲೋ, ವಿಯೋನಾ ಗೊನ್ಸಾಲ್ವಿಸ್ ಪ್ರಹಸನ ಇನ್ನಿತರ ಕಾರ್ಯಕ್ರಮ ನಿರ್ವಾಹಿಸಿದ್ದು ಓಝ್ವಿನ್ ರೆಬೆಲ್ಲೋ ಗೇಮ್ಸ್ ನಿರೂಪಿಸಿದರು. ಐವಾನ್ ಸುವಾರೆಸ್ ಅಭಾರ ಮನ್ನಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಗೊಂಡಿತು.

By suddi9

Leave a Reply

Your email address will not be published. Required fields are marked *