ಬಂಟ್ವಾಳ: ಅರ್ ಎಸ್ ಎಸ್ ಕಾರ್ಯಕರ್ತ ಶರತ್ ನ ಶವಯಾತ್ರೆಯ ಬಳಿಕ ಬಿ.ಸಿ.ರೋಡಿನಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ಸ್ಥಿತಿ ಭಾನುವಾರ ಸಂಪೂರ್ಣ ಸಹಜತೆಗೆ ಮರಳಿದೆ. ರಜಾದಿನವಾದರೂ ಬಿ.ಸಿ.ರೋಡ್,ಕೈಕಂಬ, ಬಂಟ್ವಾಳ,ಮೆಲ್ಕಾರ್ ಪರಿಸರದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದುಕೊಂಡು ವ್ಯವಹಾರವನ್ನು ನಡೆಸುತ್ತಿದೆ. ವಾಹನಗಳು ಓಡಾಟದಲ್ಲಿ ನಿರತವಾಗಿದೆ.ಜನಸಾಮಾನ್ಯರು ಕೂಡ ಇಲ್ಲಿ ಏನೇನು ನಡೆದೆ ಇಲ್ಲ ಎಂಬಂತೆ ನಡೆದಾಡುತ್ತಿದ್ದಾರೆ.
ಪೊಲೀಸ್ ಸರ್ಪಗಾವಲು ಕಂಡು ಬಂದಿದೆ.ಬಿ.ಸಿ.ರೋಡ್,ಕೈಕಂಬ,ಬಂಟ್ವಾಳ,ಮೆಲ್ಕಾರ್,ಸಜೀಪ,ಮಾರ್ನಬೈಲ್ ಮೊದಲಾದ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಭದ್ರತೆಯನ್ನ ಹಾಕಲಾಗಿದೆ .ಹಾಗೆಯೇ ಅಯಕಟ್ಟಿನ ಜಾಗಗಳಲ್ಲಿ ಸಿಸಿ ಟಿವಿ ಅಳವಡಿಸಲು ಪೊಲೀಸ್ ಇಲಾಖೆ ಸಿದ್ದತೆ ನಡೆಸುತ್ತಿದೆ ಮತ್ತು ಎಲ್ಲಡೆ ನಾಕಾಬಂಧಿ ಹಾಕಲಾಗಿದ್ದು,ವಾಹನಗಳ ತಪಾಸಣೆಗಳನ್ನು ನಡೆಸಲಾಗುತ್ತದ್ದು,ಸದ್ಯ ನಿಷೇದಾಜ್ನೆ ಮುಂದುವರಿದಿದೆ.

ಬೆಳಿಯಪ್ಪರೆಲ್ಲಿ ? ಬಂಟ್ವಾಳದಲ್ಲಿ ಎಸ್.ಐ.,ಸರ್ಕಲ್ ಇನ್ಸಪೆಕ್ಟರ್ ಆಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ,ಪ್ರಸ್ತುತ ಪಾಂಡೇಶ್ವರ ಠಾಣೆಯ ಇನ್ಸ್ ಪೆಕ್ಟರ್ ಅಗಿರುವ ಬೆಳಿಯಪ್ಪರನ್ನು ಈ ಬಾರಿ ಬಂಟ್ವಾಳಕ್ಕೆ ನಿಯೋಜಿಸದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳನ್ನುಂಟು ಮಾಡಿದೆ.ಬಂಟ್ವಾಳದ ಇಂಚು ,ಇಂಚು,ಕಿಡಿಗೇಡಿಗಳ ಮಾಹಿತಿಯುಳ್ಳ ಬೆಳಿಯಪ್ಪರನ್ನು ಇತ್ತೀಚೆಗೆ ಕಲ್ಲಡ್ಕ ದಲ್ಲಾದ ಗಲಭೆ ಹಾಗೂ ಬೆಂಜನಪದವಿನಲ್ಲ ನಡೆದ ರಿಕ್ಷಾ ಚಾಲಕ ಅಶ್ರಫ್ ಕೊಲೆಯಾದ ಸಂದರ್ಭದಲ್ಲಿ ಬೆಳಿಯಪ್‍ಒರನ್ನು ಕರ್ತವ್ಯದ ಮೇಲೆ ನಿಯೋಜಿಸಲಾಗಿತ್ತು.ವಿಶೇಷವೆಂದರೆ ಅಶ್ರಫ್ ಕೊಲೆ ಪ್ರಕರಣದ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲೂ ಇವರಪಾತ್ರ ಇತ್ತು ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಶರತ್ ಹತ್ಯೆ ಪ್ರಕರಣದ ಹಂತಕರ ಪತ್ತೆ ಕಾರ್ಯದಲ್ಲಿ ಬಳಸಿಕೊಳ್ಳಲಿಲ್ಲ ಎಂಬ ಪ್ರಶ್ನೆ ಕೂಡ ಕೇಳಿ ಬಂದಿದೆ.
