ಶ್ರೀರಾಮ ಪದವಿ ಪೂರ್ವ ಕಾಲೇಜಿನ ‘ಭರತ’ ವಿದ್ಯಾರ್ಥಿ ಸಂಘದ ಉದ್ಘಾಟನೆಯು ದಿನಾಂಕ 05-07-2017ನೇ ಬುಧವಾರ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷರಾದ ಶ್ರೀ ಜಗದೀಶ್ ಅಧಿಕಾರಿ ಇವರು ಅರ್ಪಣಾ-ಸಮರ್ಪಣಾ ಭಾವದಿಂದ ಜೀವನ ನಡೆಸಿ, ದೇಶದ ಪವಿತ್ರ ಮುತ್ತು ರತ್ನಗಳಾಗಿ ಭಾರತ ವಿಶ್ವ ಗುರುವಾಗುವಲ್ಲಿ ವಿದ್ಯಾರ್ಥಿ ಸಮೂಹ ಕೈ ಜೋಡಿಸಬೇಕಾಗಿ ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡಿದರು.
‘ದೇಶ ನನ್ನದು ರಾಷ್ಟ್ರ ನನ್ನದು’ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿಸುವುದೇ ವಿದ್ಯಾರ್ಥಿ ಸಂಘದ ರಚನೆಯ ಉದ್ದೇ±ವಾಗಬೇಕು ಎಂದು ಸಂಸ್ಥೆಯ ಸಂಚಾಲಕರಾದ ಶ್ರೀ ವಸಂತ ಮಾಧವ ಅಧ್ಯಕ್ಷೀಯ ನುಡಿ ನುಡಿದರು.ವೇದಿಕೆಯಲ್ಲಿ ಪ್ರಾಚಾರ್ಯರು ವಸಂತ್ ಬಲ್ಲಾಳ್ ಹಾಗೂ ವಿದ್ಯಾರ್ಥಿ ಸಂಘದ ಸಹನಿರ್ದೇಶಕಿ ಶ್ರೀಮತಿ ಶೋಭಾ ವಿ ಶೆಟ್ಟಿ ಉಪಸ್ಥಿತರಿದ್ದರು.ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಯಶಸ್, ಕಾರ್ಯದರ್ಶಿಯಾಗಿ ಚೇತನ್ ರಾಜ್, ಹಾಗೂ ಸಹಕಾರ್ಯದರ್ಶಿಯಾಗಿ ಕುಮಾರಿ ಅನುಪಮರವರು ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿ ನಾಯಕರು ಹಾಗೂ ಸಂಘದ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸುವುದರ ಮೂಲಕ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಲಾಯಿತು.
