ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಲಾಂಡ್ರಿ ಅಂಗಡಿಗೆ ನುಗ್ಗಿ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಅವರ ಮೇಲೆ  ಮಂಗಳವಾರ ರಾತ್ರಿ ದುಷ್ಕರ್ಮಿಗಳು ತಲವಾರ ದಾಳಿ ನಡೆಸಿ ಕೊಲೆಗೆ ಯತ್ನಿಸಿದ   ಬಳಿಕ ಬಿ.ಸಿ.ರೋಡ್ ಪರಿಸರ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಸೆಕ್ಷನ್ ೧೪೪ ನಿಷೇದಾಜ್ಙೆ ಜಾರಿಯಲ್ಲಿರುವಾಗಲೇ ಈ ಕ್ರತ್ಯ ದ ಜನರಲ್ಲಿ ಆತಂಕ ಮನೆಮಾಡಿದೆ.ರಾತ್ರಿ ಸುಮಾರು ೯.೩೦ ರವೇಳೆಗೆ ಒಂದೇ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಈಕ್ರತ್ಯ ನಡೆಸಿ ಬಂದ ಹಾದಿಯಲ್ಲಿಯೇ ಪರಾರಿಯಾಗಿದ್ದರು. ಪಕ್ಕದ ಹಣ್ಣ ಹಂಪಲು ಅಂಗಡಿಯ ರವೂಫ್ ಅವರು ಅಂಗಡಿ ಬಂದ್ ಮಾಡಲೆಂದು ಶರತ್ ನನ್ನು ಕೂಗಿ ಕರೆದಾಗ ಯಾವುದೇ ಪ್ರತಿಕ್ರಿಯಿಸದಿದ್ದಾಗ    ರವೂಫ್ ಅಂಗಡಿ ಬಳಿಬಂದಾಗ ಶರತ್ ರಕ್ತದ ಮಡವಿನಲ್ಲಿ ಬಿದ್ದಿದ್ದನೆನ್ನಲಾಗಿದೆ.
ತಕ್ಷಣ ಪಕ್ಕದ ಅಂಗಡಿಯ ಪ್ರವೀಣನ ಜೊತೆ ಸೇರಿ ಆಟೋರಿಕ್ಷಾದಲ್ಲಿ ಆಸ್ಪತ್ರಗೆ ಸಾಗಿಸಿದರು.ತುಂಬೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದ್ದು,ಗಾಯಾಳು ಶರತ್  ಇನ್ನೂ ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ.ಶರತ್ ಆರ್ ಎಸ್ ಎಸ್ ಕಾರ್ಯಕರ್ತನಗಿದ್ದರೂ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ, ಸಜ್ಜನಿಕೆಯ ಯುವಕನಾಗಿದ್ದು,ಸ್ನೇಹಮಯಿಯೂ ಅಗಿದ್ದಾನೆ. ಸಜೀಪದ ಕಂದೂರು ನಿವಾಸಿ ತನಿಯಪ್ಪ ಎಂಬವರ ಏಕೈಕ ಪುತ್ರನಾಗಿದ್ದಾನೆ.ಬಿ.ಸಿ.ರೋಡಿನಲ್ಲಿರುವ ಉದಯ ಲಾಂಡ್ರಿಯನ್ನು ಶರತ್ತೇ ನೋಡಿಕೊಳ್ಳುತ್ತಿದ್ದ, ಯಾರ ರಗಳೆಗೂ ಇಲ್ಲದ ಇವರ ಮೇಲೆ ಏಕಾಏಕಿ ಅಂಗಡಿಗೆ ನುಗ್ಗಿ ದಾಳಿ ನಡೆಸಿರುವುದು ಸ್ಥಳೀಯವಾಗಿ ಎಲ್ಲರಲ್ಲೂ ದಿಗ್ಬ್ರಮೆ ಮೂಡಿಸಿದೆ.   ಘಟನೆ ಬಿ.ಸಿ.ರೋಡ್ ಪರಿಸರದಲ್ಲಿ ಆತಂಕಿತ ವಾತಾವರಣ ಸ್ರಷ್ಟಿಯಾಯಿತು.ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸಹೆಚ್ಚುವರಿ ಪೊಲೀಸರೊಂದಿಗೆ ದೌಡಾಯಿಸಿ ಪರಿಸ್ಥಿಯನ್ನು ಹತೋಟಿಗೆ ತಂದರು.
ಈ ಘಟನೆ ನಗರ ಠಾಣೆಯ ಅನತಿ ದೂರದಲ್ಲಿ ನಡೆದಿದೆ.ದುಷ್ಕರ್ಮಿಗಳು ಕ್ರತ್ಯ ನಡೆಸಿ ಮೇಲ್ಸತುವೆ ರಸ್ತೆಯ ಮುಇಲಕವೇ ಪರಾರಿಯಾಗಿದ್ದಾರೆ.ತಕ್ಷಣ ಪೊಲೀಸರು ಎಲ್ಲೆಡೆ ನಾಕಾಬಂಧಿ ಹಾಕಿದರೂ ಅದಾಗಲೇ  ದುಷ್ಕಮಿ೯ಗಳು ಸೇಫ್ ಜಾಗಕ್ಕೆ ತಲುಪಿದ್ದಾರೆ.ಇಲ್ಲಿ  ಕ್ರತ್ಯದ ಬಳಿಕ ದುಷ್ಕರ್ಮಿಗಳು ಯಾ   ವುದೇ ಕ್ಲೂ ಬಿಟ್ಟು ಹೋಗದೆ ಇದ್ದು ಪೊಲೀಸರ ತನಿಖೆಗೂ ಈಪ್ರಕರಣ ಸವಾಲಾಗಿದೆ.ಘಟನೆ ಬಗ್ಗೆ ಬಂಟ್ವಾಳ ನಗರ ಠಾಣಡಯಲ್ಲಿ ದೂರು ದಾಖಲಾಗಿದ್ದು,ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.ಐಜಿ ಹರಿಶೇಖರನ್ ,ಎಸ್ಪಿ ಸುಧೀರ್ ಕುಮಾರ್ ರೆಡ್ಡಿ , ಪ್ರಭಾರಅಡಿಷನಲ್ ಎಸ್ಪಿ ವಿಷ್ಣವರ್ಧನ್,ಡಿವೈಎಸ್ಪಿ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈಘಟನೆಯ ಹಿನ್ನಲೆಯಲ್ಲಿ  ಹೆಚ್ಚುವರಿಯಾಗಿಇನ್ನಷ್ಟು ಪೊಲೀಸ್ ಪೋಸ್೯ ಕರೆಸಲಾಗಿದೆ. ಬಿ.ಸಿ.ರೋಡ್, ಬಂಟ್ವಾಲ ಸುತ್ತಮುತ್ತ ಪೊಲೀಸ್ ಪಡೆಯೇ ಕಾಣುತ್ತಿದೆ
ಖಂಡನೆ :ಬಂಟ್ವಾಳ : ಆರ್ ಎಸ್ ಎಸ್ ಕಾರ್ಯಕರ್ತ ಅಮಾಯಕ  ಶರತ್ ಅವರ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆಯನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ನಾಯಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತೀವ್ರವಾಗಿ ಖಂಡಿಸಿದ್ದಾರೆ.ಪೊಲೀಸ್ ಇಲಾಖೆ ಈ ಕ್ರತ್ಯವನ್ನು ಗಂಭೀರವಾಗಿ ಪರಿಗಣಿಸಿ
 ತಕ್ಷಣ ಆರೋಪಿಗಳನ್ಸು ಬಂಧಿಸಿ ಕಾನೂನಿನ ಕುಣಿಕೆಗೆ ಒಪ್ಪಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.ಸೆಕ್ಷನ್ ೧೪೪ ನಿಷೇದಾಜ್ಙೆ ಜಾರಿಯಲ್ಲಿದ್ದಾಗಲೇ ಇಂತಹ ಕ್ರತ್ಯಗಳು ನಡೆಯುತ್ತಿರುವುದು ಜನಸಾಮಾನ್ಯರಲ್ಲಿ ಆತಂಕವನ್ನುಂಟು ಮಾಡುತ್ರಿದೆ. ಇನ್ನು ಮುಂದಕ್ಕೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಪೋಲಿಸ್ ಇಲಾಖೆ ಕೈಗೊಳ್ಳುವಂತೆಯೂ ಅವರು ಒತ್ತಾಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *