ಮಂಗಳೂರು :ಇತ್ತೀಚೆಗೆ ನಡೆದ ಹಲವಾರು ಕೊಲೆ ಪ್ರಕರಣಗಳಲ್ಲಿ ಸಂಘ ಪರಿವಾರದ ನಾಯಕರು ಮತ್ತು ಪ್ರಭಾಕರ ಭಟ್ಟರು ನೇರ ಭಾಗಿಯಾಗಿದ್ದು ಅವರನ್ನು ಜುಲೈ 15 ರ ಒಳಗಾಗಿ ಬಂಧಿಸದಿದ್ದರೆ ಕಲ್ಲಡ್ಕ ಚಲೋ ನಡೆಸಲಾಗುವುದು ಎಂದು ಎಸ್ಡಿಪಿಐ ಮುಖಂಡ ಇಕ್ಬಾಲ್ ಬೆಳ್ಳಾರೆ ಪೊಲೀಸ್ ಇಲಾಖೆಗೆ ನೇರ ಎಚ್ಚರಿಕೆ ನೀಡಿದ್ದಾರೆ. ಇತ್ತಿಚೆಗೆ ನಡೆದ ಹಲವು ಕೊಲೆ ಪ್ರಕರಣದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಕೈವಾಡವಿದ್ದು ಅವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

