ಮಂಗಳೂರು; ದೀನ ದಲಿತರ ಬಂದು ಕುದ್ಮಲ್ ರಂಗರಾವ್‍ರ ಆದರ್ಶ ಕೆಲಸಗಳು ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ ಎಂದು ಗೋವಿಂದದಾಸ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಹೇಳಿದರು. ನಗರದ ನಂದಿಗುಡ್ಡೆ ಬಳಿಯಿರುವ ದಿ. ಕುದ್ಮಲ್ ರಂಗರಾವ್ ಸ್ಮಾರಕ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.2MNG58
ರಂಗರಾವ್ ಜಿಲ್ಲೆಯಲ್ಲಿನ ಆಸ್ಪøಶ್ಯತೆ ನಿವಾರಣೆ ಹಾಗೂ ದಲಿತರ ಏಳಿಗೆಗೆ ಶ್ರಮಿಸಿದರು. ಎಲ್ಲಿವರೆಗೆ ದಲಿತರು ಶಿಕ್ಷಣ ಪಡೆಯುವುದಿಲ್ಲವೋ ಅಲ್ಲಿವರೆಗೆ ಏಳಿಗೆ ಅಸಾಧ್ಯ ಎಂದು ನಂಬಿದ್ದರು. ತನ್ನ ಜೀವಿತಾವಧಿಯಲ್ಲಿ ಶೋಷಿತರ ಪರವಾಗಿ ಕೆಲಸ ಮಾಡಿರುವ ಕಾರಣ ಸದಾ ಕಾಲ ನೆನಪಲ್ಲಿರುತ್ತಾರೆ ಎಂದವರು ಅಭಿಪ್ರಾಯಪಟ್ಟರು.ಸಾಹಿತಿ ರಘು ಇಡ್ಕಿದು, ಸಂಕೇತ ಸಂಚಾಲಕ ಜಗನ್ ಪವಾರ್, ಕಾರ್ಯದರ್ಶಿ ಯೋಗೀಶ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಕೆ. ಶಕ್ತಿನಗರ, ವಿನೋದ್ ಶೆಟ್ಟಿ, ರಾಜಶೇಖರ್, ಉಜ್ವಲ್, ದಯಾನಂದ ಹಿರೇಮಠ ಇದ್ದರು.

By suddi9

Leave a Reply

Your email address will not be published. Required fields are marked *