ಕೈಕಂಬ: ಶ್ರೀ ಸುಬ್ರಹ್ಮಣೇಶ್ವರ ಯಕ್ಷಗಾನ ಕಲಾ ಮಂಡಳಿ ಶ್ರೀ ಸುಬ್ರಹ್ಮಣ್ಯ ಕಲಾ ಆಟ್ರ್ಸ ಇವರ ಜಂಟಿ ಆಶ್ರಯದಲ್ಲಿ “ಯಕ್ಷಗಾನ ನಾಟ್ಯ ತರಬೇತಿ” ಕಾರ್ಯಕ್ರಮದ ಉದ್ಘಾಟನೆಯು ಭಾನುವಾರ ಗುರುಪುರ ಕೈಕಂಬದ ವಿಶ್ವರೂಪ ಸೌದದಲ್ಲಿ ನೆರವೇರಿತು.
ಕೈಕಂಬ ಶ್ರೀರಾಮ್ ಹೋಟೇಲ್ ಮಾಲಕ ಹರಿರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುದರ್ಶನ ಶೆಟ್ಟಿ ಬಡಕಬೈಲ್, ಸುಬ್ರಹ್ಮಣ್ಯ ಭಟ್ , ರಾಜೀವ ಕೈಕಂಬ, ಉಮೇಶ್ ಭಂಡಾರಿ , ಗುರುಪುರ ಮಾಹಾಲಿಂಗ ಮಾಸ್ಟರ್, ರಕ್ಷಿತ್ ಶೆಟ್ಟಿ ಪಡ್ರೆ ,ಯಕ್ಷಗಾನ ಕಲಾವಿದ ರಮೇಶ್ ಕುಲಶೇಖರ ಮತ್ತು ಶ್ರೀ ಸುಬ್ರಹ್ಮಣ್ಯ ಕಲಾ ಆಟ್ರ್ಸ ಪುಷ್ಪರಾಜ್ ಉಪಸ್ಥಿತರಿದ್ದರು.ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.
ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿರ್ದೇಶನದಲ್ಲಿ ನಾಟ್ಯ ತರಬೇತಿಯು ಕಯಕಂಬ ಸ್ವಾಗತ್ ಹೋಟೆಲ್ ವಿಶ್ವರೂಪ ಸೌಧದಲ್ಲಿ ಪ್ರತಿ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿದೆ.




