ಕೈಕಂಬ : ಕೊಚ್ಚಿನಿನಿಂದ ಬೆಂಗಳೂರಿಗೆ ಪ್ರಸ್ತಾವಿಸಲಾಗಿರುವ ಕೇಂದ್ರ ಸರ್ಕಾರ ಸ್ವಾಮ್ಯದ ಗೈಲ್(ಹಿಂದೆ ಗ್ಯಾಸ್ ಅಥಾರಿಟಿ ಇಂಡಿಯಾ ಲಿಮಿಟೆಡ್ ಆಗಿದ್ದ ಈಗಿನ `ಗ್ಯಾಸ್ ಇಂಡಿಯಾ ಲಿಮಿಟೆಡ್’-ಗೈಲ್) ಕಂಪೆನಿಯ ಎಲ್‍ಎನ್‍ಜಿ ಪೈಪ್‍ಲೈನ್ ಅಳವಡಿಕೆ ವಿಷಯದಲ್ಲಿ ಗುರುಪುರ ಗ್ರಾಮ ಪಂಚಾಯತ್ ಕಚೇರಿ ಸಭಾಗೃಹದಲ್ಲಿ ಕಂಪನಿ ಜೂನ್ 28ರಂದು ಕರೆದಿದ್ದ ಸಭೆಯಲ್ಲಿ ನೂರಾರು ಗ್ರಾಮಸ್ಥರು ಸೇರಿದ್ದರು.

g-6

ಹೆಚ್ಚುವರಿ ಆಯುಕ್ತ(ಏಸಿ) ರೇಣುಕಾ ಪ್ರಸಾದ್ ನಾಗರಿಕರಿಗೆ ಮಾಹಿತಿ ನೀಡಿದರು. ಗೈಲ್ ಕಂಪೆನಿಯ ತಹಶೀಲ್ದಾರ್ ಕೆ ಬಿ ಮರೋಲ್ ಮತ್ತು ಪ್ರಬಂಧಕ ಅಶೋಕ್ ಕುಮಾರ್ ಉಪಸ್ಥಿತರಿದ್ದರು.ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರ ವಿರೋಧವಿಲ್ಲ. ಆದರೆ ಇಂತಹ ಯೋಜನೆಗಳು ಪಾರದರ್ಶಕವಾಗಿದ್ದು, ಭವಿಷ್ಯದಲ್ಲಿ ನಾಗರಿಕರು ಪರಿತಪಿಸುವಂತಿರಬಾರದು. ಭೂಮಿ ಕಳೆದುಕೊಳ್ಳುವ ಅಥವಾ ಕೃಷಿ ಮಾಡಲಾರದೆ ಬಂಜರಾಗುವ ಭೂ-ಮಾಲಕರ ಕುಟುಂಬ ಸದಸ್ಯರಿಗೆ ಕಂಪೆನಿ ಕೆಲಸ ನೀಡಬೇಕು. ಪೈಪ್‍ಲೈನ್ ಯಥೇಚ್ಛ ಕೃಷಿ, ಜನವಸತಿ ಪ್ರದೇಶದ ಮೂಲಕ ಹಾದು ಹೋಗುವ ಬದಲಿಗೆ ಫಲ್ಗುಣಿ ಹೊಳೆ ಬದಿಯಲ್ಲಿ ಹಾದು ಹೋಗಬೇಕು. ಒಪ್ಪಂದದಲ್ಲಿ ನಕ್ಷೆ ನಮೂದಿಸಬೇಕು. ಎಲ್ಲ ಜಮೀನುದಾರರಿಗೆ ನೋಟಿಸು ಜಾರಿ ಮಾಡಬೇಕು. ಸ್ವಾಧೀನಪಡಿಸಲಾಗುವ ಜಮೀನಿನ ಪ್ರಮಾಣವನ್ನು ಆರ್‍ಟಿಸಿಯಲ್ಲಿ ನಮೂದಿಸಬೇಕು(ಅಂದರೆ, ಬ್ಯಾಂಕ್ ಸಾಲ ಪಡೆಯುವಲ್ಲಿ ಆರ್‍ಟಿಸಿ ತೊಡಕಾಗಬಾರದು) ಎಂದು ಸಭೆಯಲ್ಲಿ ಜಮೀನುದಾರರು ಆಗ್ರಹಿಸಿದರು.g-5

ಜಮೀನುದಾರರಿಗೆ ಯಾವುದೇ ರೀತಿಯ ಅನ್ಯಾಯವಾದರೆ ಹೋರಾಟಕ್ಕೂ ಸಿದ್ಧ. ಹಿಂದಿನ ಕೆಲವು ಯೋಜನೆಗಳಲ್ಲಿ ರೈತರಿಗಾದ ಅನ್ಯಾಯ ಮರುಕಳಿಸಬಾರದು ಎಂದರು.ಪರಿಹಾರ ಕಡಿಮೆ ಇದೆ. ಆ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಬಹುದು. ನಾಗರಿಕರ ಬೇಡಿಕೆ ಕುರಿತು ಜಿಲ್ಲಾಧಿಕಾರಿಗೆ ಶೀಘ್ರವೇ ವರದಿ ಸಲ್ಲಿಸುವೆ. ಸರ್ವೆ ಸಮಯದಲ್ಲಿ ಗ್ರಾಮ ಕರಣಿಕರ(ವೀಎ) ಉಪಸ್ಥಿತಿನೋಡಿಕೊಳ್ಳಲಾಗುವುದು ಎಂದು ಏಸಿ ಪ್ರಸಾದ್ ಭರವಸೆ ನೀಡಿದರು.g-4

* ಗೈಲ್ ಏನು ?

ಇದು ಸಿಟಿ ಗ್ಯಾಸ್ ವಿತರಣೆ ಯೋಜನೆಯಡಿ ಇದು ಗೃಹೋಪಯೋಗಿ, ವಾಣಿಜ್ಯ, ಉದ್ಯಮ ಮತ್ತು ಸಾರಿಗೆ ವಲಯಕ್ಕೆ ಧ್ರುವೀಕೃತ ನೈಸರ್ಗಿಕ ಅನಿಲ(ಎಲ್‍ಎನ್‍ಜಿ) ಪೂರೈಸುವ ಕೇಂದ್ರ ಸರ್ಕಾರ ವ್ಯಾಪ್ತಿಯ ಕಂಪೆನಿ. ಇದು ಧ್ರುವೀಕೃತ ಪೆಟ್ರೋಲಿಯಂ ಅನಿಲಕ್ಕಿಂತ ಸುರಕ್ಷಿತ ಹಾಗೂ ಎಲ್‍ಪಿಜಿಗೆ ಹೋಲಿಸಿದರೆ ಅಗ್ಗವಾಗಿದೆ. ಬೆಂಗಳೂರಿಗೆ ಎಲ್‍ಎನ್‍ಜಿ ಪೂರೈಸುವ ಬಿಡ್ ಈ ಕಂಪೆನಿಗೆ ಸಿಕ್ಕಿದೆ. ದಿಲ್ಲಿ ಮತ್ತು ಮುಂಬೈಯಲ್ಲಿ ಈ ಯೋಜನೆ ಕಾರ್ಯಗತಗೊಂಡಿದೆ. ಸಿಎನ್‍ಜಿ ಗಾಳಿಗಿಂತ ಹಗುರವಾಗಿದ್ದು, ಸೋರಿಕೆಯಾದರೂ ಬೆಂಕಿ ವಿಪತ್ತು ಸಾಧ್ಯತೆ ಕಡಿಮೆ ಇರುವುದು. ಎಲ್‍ಪಿಜಿ ಗಾಳಿಗಿಂತ ಭಾರವಾಗಿದೆ. ಸಿಟಿ ಗ್ಯಾಸ್ ವಿತರಣೆ ಪ್ರಾಜೆಕ್ಟಿನಲ್ಲಿ ಗೃಹೋಪಯೋಗಿ, ವಾಣಿಜ್ಯ ಮತ್ತು ಉದ್ಯಮ ಬಳಕೆದಾರರಿಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್‍ಜಿ) ಮತ್ತು ವಾಹನಗಳಿಗೆ ಧ್ರುವೀಕೃತ ನೈಸರ್ಗಿಕ ಅನಿಲ(ಸಿಎನ್‍ಜಿ) ಪೂರೈಸುತ್ತಿದೆ. ಬೆಂಗಳೂರಿಗೆ ಐದು ವರ್ಷದೊಳಗೆ ಐದು ಹಂತದಲ್ಲಿ ಎಲ್‍ಎನ್‍ಜಿ ಪೂರೈಕೆಯಾಗಲಿದೆ.

By Suddi9

Leave a Reply

Your email address will not be published. Required fields are marked *