ಗೋವಾ :ಇಂದಿನ ಹಿಂದೂ ಸಮಾಜದ ಎದುರು ಗೋರಕ್ಷಣೆ, ಲವ್ ಜಿಹಾದ್, ಮತಾಂತರ ಮುಂತಾದ ಅನೇಕ ಸಮಸ್ಯೆಗಳಿದ್ದು, ಅದಕ್ಕಾಗಿ ಪ್ರತಿಯೊಬ್ಬರೂ ಅವರವರ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸೀಮಿತವಾಗಿದ್ದು, ಈಗ ವ್ಯಾಪಕ ಸಂಘಟನೆಗಳ ಅವಶ್ಯಕತೆಯಿದೆ. ಇದಕ್ಕಾಗಿ ವಿಚಾರವಂತರು, ಸಂಪ್ರದಾಯದವರು, ನ್ಯಾಯವಾದಿಗಳು, ಹಿಂದೂ ಸಂಘಟನೆಗಳು ಮತ್ತು ಸಂತ ಸಂಘಟನೆಗಳು ಇಂದಿನ ಕಾಲದ ಅವಶ್ಯಕತೆಯಾಗಿದೆ. ಈ ಸಂಘಟನೆಗಳು ಇಂದಿನ ಭ್ರಷ್ಟ ಮತ್ತು ಅನೈತಿಕ ಸಮಾಜ ವ್ಯವಸ್ಥೆಯನ್ನು ನಿವಾರಿಸಿ ಸಮಾಜಹಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕ್ರಮ ಕೈಗೊಳ್ಳುವುದು ಎನ್ನುವ ಒಮ್ಮುಖ ನಿರ್ಧಾರವನ್ನು ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಕೈಗೊಳ್ಳಲಾಯಿತು. ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ರಾಮನಾಥಿ, ಗೋವಾದಲ್ಲಿನ ಶ್ರೀ ರಾಮನಾಥ ದೇವಸ್ಥಾನದಲ್ಲಿ ೧೪ ರಿಂದ ೧೭ ಜೂನ್‌ನ ಈ ಕಾಲಾವಧಿಯಲ್ಲಿ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನವು ಜರುಗಿತು. ಹಿಂದೂ ಜನಜಾಗೃತಿ ಸಮಿತಿಯ ಮುಖ್ಯ ನೇತೃತ್ವದಲ್ಲಿ ಆಯೋಜಿಸಲಾದ ಈ ಅಧಿವೇಶನದಲ್ಲಿ ಭಾರತದಲ್ಲಿನ ೨೨ ರಾಜ್ಯಗಳ ಸಹಿತ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ೧೩೨ ಕ್ಕಿಂತಲೂ ಹೆಚ್ಚಿನ ಹಿಂದುತ್ವನಿಷ್ಠ ಸಂಘಟನೆಗಳ ೩೪೨ ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ABHA2017_Udghatan

ಹಿಂದೂ ರಾಷ್ಟ್ರ ಸ್ಥಾಪಿಸುವುದರಿಂದ ಹಿಂದೂಗಳನ್ನು ಯಾರೂ ತಡೆಯಲಾರರು ! – ಪ.ಪೂ.ಸಾಧ್ವಿ ಸರಸ್ವತಿಜಿ
ಭಾರತದ ಮೇಲೆ ಇಂದು ಎಲ್ಲ ಕಡೆಯಿಂದಲೂ ಆಕ್ರಮಣಗಳಾಗುತ್ತಿವೆ. ಕಾಶ್ಮೀರವನ್ನು ವಿಭಜಿಸುವ ಪ್ರಯತ್ನ ನಡೆದಿದೆ. ಅಮರನಾಥಯಾತ್ರೆಯನ್ನು ಸ್ಥಗಿತಗೊಳಿಸುವ ಪ್ರಯತ್ನಗಳಾಗುತ್ತಿವೆ. ಇಂದು ಭಾರತಮಾತೆ-ಗೋಮಾತೆ ಇವರನ್ನು ದೂಷಿಸಲಾಗುತ್ತಿದೆ; ಆದರೆ ಈಗ ಹಿಂದೂಗಳು ಸಂಘಟಿತರಾಗುತ್ತಿದ್ದು, ದೇಶದಲ್ಲಿರುವ ಯಾವುದೇ ಶಕ್ತಿ ಹಿಂದೂ ರಾಷ್ಟ್ರ ಸ್ಥಾಪನೆಗೊಳ್ಳುವುದರಿಂದ ತಡೆಯಲಾರದು. ಕೇಸರಿ ಎಂದರೆ ಭಯೋತ್ಪಾದನೆ ಎಂಬುದೇನಿಲ್ಲ, ಕೇಸರಿಯೆಂದರೆ ದೇಶ ಮತ್ತು ಧರ್ಮಕ್ಕಾಗಿ ಸಮರ್ಪಿತಗೊಂಡ ಜೀವನವಾಗಿದೆ ಎಂದು ಛಿಂದವಾಡಾ, ಮಧ್ಯಪ್ರದೇಶದ ಸನಾತನ ಧರ್ಮ ಪ್ರಚಾರ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷೆ ಪ.ಪೂ.ಸಾಧ್ವಿ ಸರಸ್ವತಿಜಿಯವರು ಜ್ವಲಂತ ಮಾರ್ಗದರ್ಶನವನ್ನು ಮಾಡಿದರು. ಅವರು ಅಧಿವೇಶನದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಸಂತ-ಮಹಂತರ ಉಪಸ್ಥಿತಿಯಲ್ಲಿ ಹಿಂದೂ ಅಧಿವೇಶನದ ಶುಭಾರಂಭವಾಯಿತು. ಈ ಸಮಯದಲ್ಲಿ ವೇದಿಕೆಯ ಮೇಲೆ ಉತ್ತರಪ್ರದೇಶದ ಹಿಂದೂ ಸ್ವಾಭಿಮಾನ ಮಠದ ರಾಷ್ಟ್ರೀಯ ಅಧ್ಯಕ್ಷೆ ಮಾಂ ಚೇತನಾನಂದ ಸರಸ್ವತಿಜೀ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಪೂ.ಡಾ.ಚಾರುದತ್ತ ಪಿಂಗಳೆ ಮತ್ತು ಸನಾತನ ಸಂಸ್ಥೆಯ ಧರ್ಮಪ್ರಸಾರಕ ಪೂ. ನಂದಕುಮಾರ ಜಾಧವ ಇವರು ಉಪಸ್ಥಿತರಿದ್ದರು.

ABHA2017_Sadhvi_Saraswatiji
ರಾಷ್ಟ್ರ ಮತ್ತು ಹಿಂದೂ ಧರ್ಮವನ್ನು ಕಾಡುವಂತಹ ಅನೇಕ ಸಮಸ್ಯೆಗಳ ಬಗ್ಗೆ ವಿಚಾರಮಂಥನ !
ಗೋರಕ್ಷಣೆಯ ಅವಶ್ಯಕತೆ, ದೇಶದಾದ್ಯಂತ ಗೋಮಾಂಸ ನಿಷೇಧ, ವೈಚಾರಿಕ ಆಕ್ರಮಣಗಳಿಂದ ಹಿಂದೂ ಧರ್ಮದ ರಕ್ಷಣೆ, ಜಿಹಾದಿ ಭಯೋತ್ಪಾದನೆ, ರಾಮಮಂದಿರ ಪುನರ್ನಿರ್ಮಾಣ, ದೇವಸ್ಥಾನಗಳ ಸರಕಾರೀಕರಣದ ಹಿಂದೂ ವಿರೋಧಿ ಧೋರಣೆ, ಹಿಂದೂಗಳ ಮತಾಂತರ, ಸರಕಾರದಿಂದ ಸಂತ, ಸಂಪ್ರದಾಯ ಮತ್ತು ಹಿಂದೂ ಸಂಘಟನೆಗಳ ದಮನ, ಕಾಶ್ಮೀರಿ ಹಿಂದೂಗಳ ಪುನರ್‌ವಸತಿ, ಬಾಂಗ್ಲಾದೇಶಿ ನುಸುಳುಕೋರರ ಸಮಸ್ಯೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿನ ಹಿಂದೂಗಳ ದುಃಸ್ಥಿತಿ ಮುಂತಾದ ರಾಷ್ಟ್ರ ಮತ್ತು ಧರ್ಮವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ದೇಶದಾದ್ಯಂತದ ಹಿಂದುತ್ವನಿಷ್ಠ ಪ್ರತಿನಿಧಿಗಳು ಅಧಿವೇಶನದ ಮಾಧ್ಯಮದಿಂದ ತಮ್ಮ ವಿಚಾರ ಮಂಡಿಸಿದರು.
ಸಮಾಜಕ್ಕೆ ಪ್ರಜಾಪ್ರಭುತ್ವವು ನೀಡಿದ ಮಾರ್ಗವನ್ನು ಬಳಸಿ ಮುಂದಾಳತ್ವ ವಹಿಸಿ ಕೃತಿ ಮಾಡಬೇಕಾಗಬಹುದು ! – ರಮೇಶ ಶಿಂದೆ
ಪ್ರಜಾಪ್ರಭುತ್ವದಲ್ಲಿ ಹರಡಿರುವ ದುಷ್ಪ್ರವೃತ್ತಿ ಮತ್ತು ಅದರ ನಿರ್ಮೂಲನೆ ಬಗ್ಗೆಯೂ ವಿಚಾರಮಂಥನ ಮಾಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರ ವಿಚಾರವು ಅತ್ಯಂತ ಉದ್ಭೋದಕವಾಗಿ ಹೊಮ್ಮಿತು. ಅವರು, ‘ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡಕರರು ಹೀಗೆಂದಿದ್ದರು, “ಸಂವಿಧಾನವು ಎಷ್ಟೇ ಚೆನ್ನಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವ ರಾಜಕಾರಣಿಗಳು ಅಸಮರ್ಥರಾಗಿದ್ದರೆ ಪ್ರಜಾಪ್ರಭುತ್ವವು ವಿಫಲವಾಗುತ್ತದೆ”. ಇದನ್ನು ಪ್ರತ್ಯಕ್ಷವೂ ಸಂಸತ್ತಿನಲ್ಲಿ ಶೇ. ೩೪ ರಷ್ಟು ಸದಸ್ಯರ ಸದಸ್ಯರ ಮೇಲೆ ಗಂಭೀರ ಅಪರಾಧಗಳು ದಾಖಲಾಗಿವೆ. ಇಂತಹವರು ಸಂಸತ್ತಿನಲ್ಲಿ ದೇಶದ ಜನರಿಗಾಗಿ ಕಾನೂನು ರೂಪಿಸುವುದರಿಂದ ಒಂದರ್ತದಲ್ಲಿ ಪ್ರಜಾಪ್ರಭುತ್ವವು ಟೊಳ್ಳಾಗಿರುವುದು ೭೦ ವರ್ಷಗಳೊಳಗೇ ನಮ್ಮೆದುರು ಕಾಣಿಸುತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬದಲಾಯಿಸಲು ಪ್ರಜಾಪ್ರಭುತ್ವದ ಮಾರ್ಗವನ್ನೇ ಉಪಯೋಗಿಸಬೇಕಾಗಬಹುದು. ಪ್ರತಿಭಟನೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮಾಹಿತಿ ಹಕ್ಕು ಅಧಿಕಾರದ ಉಪಯೋಗ, ದೂರು, ನಿವೇದನೆ ಹಾಗೂ ಪ್ರತಿಯೊಂದು ನ್ಯಾಯ ಮಾರ್ಗವನ್ನು ಅವಲಂಬಿಸಿ ಪ್ರಜಾಪ್ರಭುತ್ವದಲ್ಲಿನ ಸಾಮಾಜಿಕ ಪಿಡುಗುಗಳ ವಿರುದ್ಧ ವ್ಯಾಪಕ ಹೋರಾಟವನ್ನು ನಡೆಸಬೇಕಾಗಬಹುದು” ಎಂದರು.
ಶ್ರೀಲಂಕಾದಲ್ಲಿ ಹಿಂದೂಗಳ ರಕ್ಷಣೆಗಾಗಿ ಎಲ್ಲೆಡೆಯ ಹಿಂದೂಗಳು ಮುಂದೆಬರಬೇಕಾಗಿದೆ ! – ಶ್ರೀಲಂಕಾದ ಹಿಂದೂ ಮುಖಂಡರಾದ ಮರವನಪುಲಾವು ಸಚ್ಚಿದಾನಂದನ್
ಶ್ರೀಲಂಕಾದಲ್ಲಿ ಹಿಂದೂಗಳನ್ನು ಹೊರತುಪಡಿಸಿ ಇತರ ಧರ್ಮದವರ ಸಂಖ್ಯೆ ನಿರಂತರವಾಗಿ ವೃದ್ಧಿಸುತ್ತಿದೆ. ಸುಮಾರು ೩೦ ವರ್ಷಗಳ ಹಿಂದೆ ಶೇ. ೩೦ ರಷ್ಟಿದ್ದ ಹಿಂದೂಗಳ ಸಂಖ್ಯೆ ಇಂದು ಕೇವಲ ಶೇ.೧೫ ರಷ್ಟಿದೆ. ಶ್ರೀಲಂಕಾದಲ್ಲಿ ಇಂದು ಆಯೋಜನಾಬದ್ಧವಾಗಿ ಹಿಂದೂಗಳನ್ನು ಮತಾಂತರಗೊಳಿಸಲಾಗುತ್ತಿದೆ. ಆದುದರಿಂದ ಏಶಿಯಾ ಖಂಡದ ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಶ್ರೀಲಂಕಾಗೆ ಬಂದು ಅಲ್ಲಿಯ ಹಿಂದೂಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕೆಂದು ಶ್ರೀಲಂಕಾದ ಹಿಂದೂ ಮುಖಂಡರಾದ ಮರವನಪುಲಾವು ಸಚ್ಚಿದಾನಂದನ್ ಇವರು ಮನವಿ ಮಾಡಿದರು.

ಭಾರತವು ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಯಲು ಮುಂದಾಳತ್ವ ವಹಿಸಬೇಕು ! – ನ್ಯಾಯವಾದಿ ರವೀಂದ್ರ ಘೋಷ, ಅಧ್ಯಕ್ಷರು, ಬಾಂಗ್ಲಾದೇಶ ಮೈನಾರಿಟಿ ವಾಚ್, ಬಾಂಗ್ಲಾದೇಶ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಮುಗಿಸುವ ಷಡ್ಯಂತ್ರ ನಡೆದಿದೆ. ಬಾಂಗ್ಲಾದೇಶದ ‘ಸೆಕ್ಯೂಲರ್ ಸಂವಿಧಾನದಲ್ಲಿ ಬದಲಾವಣೆಯನ್ನು ಮಾಡಿ ಅದರಲ್ಲಿ ‘ಇಸ್ಲಾಂ ಸೇರ್ಪಡೆಗೊಳಿಸಿದ ಬಳಿಕ ಅಲ್ಲಿಯ ಹಿಂದೂಗಳ ಮೇಲೆ ಇಸ್ಲಾಂಗನುಸಾರ ಅಚರಣೆ ಮಾಡುವಂತೆ ಒತ್ತಡವನ್ನು ಹೇರಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಸ್ಥಾನಗಳನ್ನು ನಾಶಗೊಳಿಸುವುದು, ಭೂಮಿ ಅತಿಕ್ರಮಣ ಮಾಡುವುದು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವುದು ಮುಂತಾದವುಗಳು ಹೆಚ್ಚುತ್ತಿದೆ. ಆದಕಾರಣ ಬಾಂಗ್ಲಾದೇಶದ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು ಭಾರತ ಸರಕಾರವು ಮುಂದಾಗಬೇಕು ಎಂದು ಬಾಂಗ್ಲಾದೇಶದ ‘ಬಾಂಗ್ಲಾದೇಶ ಮೈನಾರಿಟಿ ವಾಚ್ ಸಂಸ್ಥೆಯ ಅಧ್ಯಕ್ಷರಾದ ನ್ಯಾಯವಾದಿ ರವೀಂದ್ರ ಘೋಷರವರು ಅಧಿವೇಶನದಲ್ಲಿ ಮನವಿ ಮಾಡಿದರು.
ಮೊದಲು ಹಿಂದೂ ಧರ್ಮ ಮತ್ತು ಬಳಿಕ ರಾಜಕಾರಣ ! – ಭಾಜಪದ ಶಾಸಕ ಟಿ. ರಾಜಾಸಿಂಗ್
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪಿಸುವುದು ಪ್ರತಿಯೊಬ್ಬ ಹಿಂದೂವಿನ ಇಚ್ಛೆಯಾಗಿದೆ. ರಾಜಕೀಯ ಪಕ್ಷಗಳು ಚುನಾವಣೆಯ ಪೂರ್ವದಲ್ಲಿ ರಾಮಮಂದಿರದ ವಿಷಯವನ್ನು ತೆಗೆದುಕೊಳ್ಳುತ್ತವೆ ಮತ್ತು ಚುನಾವಣೆಯ ಬಳಿಕ ಮರೆತು ಬಿಡುತ್ತವೆ. ಅದಕ್ಕಾಗಿ ದೇಶದಲ್ಲಿರುವ ಪ್ರತಿಯೊಬ್ಬ ಹಿಂದೂವು ಸಂಘಟಿತರಾಗಿ, ಶ್ರೀರಾಮ ಮಂದಿರ ಸ್ಥಾಪನೆಯ ಬಗ್ಗೆ ಒಮ್ಮುಖವಾಗಿ ಬೇಡಿಕೆಯನ್ನಿತ್ತರೆ, ಶ್ರೀರಾಮ ಮಂದಿರ ಸ್ಥಾಪನೆಯು ಸಹಜವಾಗಿಯೇ ಸಾಧ್ಯವಾಗಲಿದೆ. ಹಿಂದೂ ಯುವಕರು ಸಂಘಟಿತರಾಗಬೇಕು ಮತ್ತು ಶಕ್ತಿಯನ್ನು ಹೆಚ್ಚಿಸಬೇಕು. ಈ ಶಕ್ತಿ ಹೆಚ್ಚಾದರೆ ಹಿಂದುತ್ವದ ಕಾರ್ಯ ಕೈಕೊಳ್ಳುವುದರಿಂದ ಅವರನ್ನು ಯಾರೂ ತಡೆಯಲಾರರು. ಮೊದಲು ಹಿಂದೂ ಧರ್ಮ ಮತ್ತು ಬಳಿಕ ರಾಜಕಾರಣ, ಎಂದು ದೃಢವಾಗಿ ಹೇಳಬೇಕಾದ ಸಮಯ ಬಂದಿದೆಯೆಂದು ಭಾಗ್ಯನಗರ (ಹೈದರಾಬಾದ) ತೆಲಂಗಾಣದ ಭಾಜಪದ ಶಾಸಕ ಮತ್ತು ಶ್ರೀರಾಮ ಯುವ ಸೇನೆಯ ಸಂಸ್ಥಾಪಕರಾದ ಶ್ರೀ ಟಿ.ರಾಜಾಸಿಂಗ್ ಇವರು ಮಾರ್ಗದರ್ಶನ ಮಾಡಿದರು.
ವಿವಿಧ ಹಿಂದುತ್ವನಿಷ್ಠ ವಿಚಾರವಂತರ ಪ್ರಖರ ಮಾರ್ಗದರ್ಶನ !ABHA2017_Audience
ಅಧಿವೇಶನದ ನಾಲ್ಕು ದಿನಗಳ ವಿವಿಧ ಉದ್ಭೋಧಕ ಸತ್ರಗಳಲ್ಲಿ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಈ ಸಂಘಟನೆಯ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಘೋಷ, ಶ್ರೀಲಂಕಾದ ಹಿಂದೂ ನೇತಾರ ಮರವನಪುಲಾವೂ ಸಚ್ಚಿದಾನಂದನ್, ಭಾಗ್ಯನಗರ (ಹೈದರಾಬಾದ್) ತೆಲಂಗಾಣದ ಭಾಜಪದ ಶಾಸಕ ಮತ್ತು ಶ್ರೀರಾಮ ಯುವ ಸೇನೆಯ ಸಂಸ್ಥಾಪಕ ಶ್ರೀ.ಟಿ.ರಾಜಾ ಸಿಂಗ್, ತೆಲಂಗಾಣದ ಶಿವಸೇನೆಯ ರಾಜ್ಯಪ್ರಮುಖ ಶ್ರೀ.ಮುರಾರಿ, ಭಾರತ ರಕ್ಷಾ ಮಂಚ್‌ನ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಶ್ರೀ. ಅನಿಲ ಧೀರ, ‘ನ್ಯಾಶನಲ್ ಸೆಂಟರ್ ಫಾರ್ ಹಿಸ್ಟಾರಿಕಲ್ ರಿಸರ್ಚ್ ಅಂಡ್ ಕಂಪೇರಿಟಿವ್ ಸ್ಟಡಿ’ಯ ಅಧ್ಯಕ್ಷ ಚಂದೀಗಡದ ಶ್ರೀ.ನೀರಜ ಅತ್ರಿ, ‘ಪನೂನ್ ಕಾಶ್ಮೀರ’ದ ಡಾ. ಅಜಯ ಚ್ರೊಂಗೂ, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಶ್ರೀ. ಸಂಜೀವ ಪುನಾಳೆಕರ, ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರ ಸಹಿತ ಅನೇಕ ವಿಚಾರವಂತರು ಅಭಿಪ್ರಾಯ ವ್ಯಕ್ತಪಡಿಸಿದರು.
ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಅಂಗೀಕರಿಸಿದ ಕೆಲವು ಠರಾವುಗಳು!
೧. ಭಾರತ ಮತ್ತು ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು
೨. ಸಂಪೂರ್ಣ ದೇಶದಲ್ಲಿ ಗೋಹತ್ಯಾ ನಿಷೇಧ ಹೇರಿ ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು!
೩. ಕಾಶ್ಮೀರದಲ್ಲಿ ಹಿಂದೂಗಳಿಗಾಗಿ ‘ಪನೂನ್ (ನಮ್ಮ) ಕಾಶ್ಮೀರ’ ಹೆಸರಿನ ಸ್ವತಂತ್ರ ಕೇಂದ್ರಾಡಳಿತದ ಪ್ರದೇಶವನ್ನು ನಿರ್ಮಾಣ ಮಾಡಬೇಕು!
೪. ಕೇಂದ್ರ ಸರಕಾರವು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಕಟ್ಟಲು ಕಾನೂನು ಮಾಡಬೇಕು!
೫. ದೇಶದಲ್ಲಿ ನೆಲೆಸಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಕಳಿಸಲು ತಕ್ಷಣ ಕಾನೂನು ಮಾಡಬೇಕು.
೬. ಕೇಂದ್ರಸರಕಾರವು ಎಲ್ಲ ರಾಜ್ಯಗಳಿಗೆ ಅನ್ವಯವಾಗುವ ಮತಾಂತರ ನಿಷೇಧ ಕಾನೂನು ಮಾಡಬೇಕು.
ಈ ವರ್ಷ ಮೊದಲ ಬಾರಿಗೆ ‘ಫೇಸ್‌ಬುಕ್ ಲೈವ್’ ಮೂಲಕ ಮಾಡಲಾದ ಅಧಿವೇಶನದ ನೇರ ಪ್ರಸಾರದಿಂದ ಪ್ರತಿದಿನ ಸರಾಸರಿ ಐದುವರೆ ಲಕ್ಷ ಹಿಂದೂಗಳು ಲಾಭಪಡೆದರು.
ನ್ಯಾಯವಾದಿಗಳ ಅಧಿವೇಶನ ಮತ್ತು ‘ಹಿಂದೂ ರಾಷ್ಟ್ರ ಸಂಘಟಕ ಪ್ರಶಿಕ್ಷಣ ಅಧಿವೇಶನ’ದ ಆಯೋಜನೆ!
ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನದ ಜೊತೆಗೆ ೧೭ ಮತ್ತು ೧೮ ಜೂನ್ ನ ಕಾಲಾವಧಿಯಲ್ಲಿ ಎರಡು ದಿನದ ನ್ಯಾಯವಾದಿಗಳ ಅಧಿವೇಶನ ಜರುಗಿತು. ಈ ಅಧಿವೇಶನದಲ್ಲಿ ವಿವಿಧ ರಾಜ್ಯಗಳಿಂದ ೫೦ ಕ್ಕಿಂತಲೂ ಹೆಚ್ಚಿನ ನ್ಯಾಯವಾದಿಗಳು ಭಾಗವಹಿಸಿದ್ದರು. ಹಿಂದುತ್ವಕ್ಕಾಗಿ ಹೋರಾಡುವ ಹಿಂದುತ್ವನಿಷ್ಠ ಕಾರ್ಯಕರ್ತರಿಗೆ ಕಾನೂನು ವಿಷಯದಲ್ಲಿ ಹೇಗೆ ಸಹಾಯ ಮಾಡಬಹುದು ಎಂಬುದರ ಧೋರಣೆಯನ್ನು ಈ ಅಧಿವೇಶನದಲ್ಲಿ ನಿರ್ಧರಿಸಲಾಯಿತು. ೧೯ ರಿಂದ ೨೧ ರ ಜೂನ್‌ನ ಕಾಲಾವಧಿಯಲ್ಲಿ ಮಹಾಲಕ್ಷ್ಮೀ ದೇವಸ್ಥಾನ, ಬಾಂದೋಡಾ, ಗೋವಾದಲ್ಲಿ ‘ಹಿಂದೂ ರಾಷ್ಟ್ರ ಸಂಘಟಕ ಪ್ರಶಿಕ್ಷಣ ಅಧಿವೇಶನ’ವನ್ನು ಆಯೋಜಿಸಲಾಯಿತು. ಇದರಲ್ಲಿ ಭಾರತದಲ್ಲಿನ ೧೭ ರಾಜ್ಯಗಳಿಂದ ೨೨೫ ಕ್ಕಿಂತಲೂ ಹೆಚ್ಚಿನ ಹಿಂದುತ್ವನಿಷ್ಠರು ಪಾಲ್ಗೊಂಡಿದ್ದರು. ಈ ರೀತಿಯಲ್ಲಿ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಈ ಮೂಲಮಂತ್ರವನ್ನು ಸತ್ಯವನ್ನಾಗಿಸುವ ದೃಷ್ಟಿಯಿಂದ ೧೩೨ ಹಿಂದುತ್ವನಿಷ್ಠ ಸಂಘಟನೆಗಳ ಮತ್ತು ೫೦೦ ಕ್ಕಿಂತಲೂ ಹೆಚ್ಚಿನ ಹಿಂದುತ್ವನಿಷ್ಠ ಪ್ರತಿನಿಧಿಗಳ ಅಭೇದ್ಯ ಸಂಘಟನೆಯು ನಿರ್ಮಾಣವಾಗಿದೆ. ೨೦೨೩ ರಲ್ಲಿ ಹಿಂದೂ ರಾಷ್ಟ್ರದ ಸುವರ್ಣ ಮುಂಜಾವಿನ ಉದಯವಾಗಲು ಈ ಹಿಂದೂ ಸಂಘಟನೆಗಳಿಂದ ಇತಿಹಾಸವು ಘಟಿಸಲಿದೆ ಎಂಬುದು ಖಚಿತ..

By suddi9

Leave a Reply

Your email address will not be published. Required fields are marked *