ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಬಳಿ ಪಾಣೆಮಂಗಳೂರಿನಲ್ಲಿರುವ ಕಲ್ಲುರ್ಟಿ ದೈವಸ್ಥಾನಕ್ಕೆ ದುಷ್ಕರ್ಮಿಗಳು ಶನಿವಾರ‌ ಗೋ ಮಾಂಸ ಎಸೆದಿರುವುದನ್ನು ಖಂಡಿಸಿರುವ ಹಿ.ಜಾ.ವೇ.ಪ್ರಮುಖರು ಈ ಕ್ರತ್ಯಗೈದವರಿಗೆ ಶಿಕ್ಷೆ ನೀಡುವಂತೆ ದೈವಸ್ಥಾನದ ಮುಂದೆ ಸಾಮೂಹಿಕ ಪ್ರಾರ್ಥನೆಗೈದರು.

IMG-20170624-WA0009
ಬೆಳಗಿನ ಜಾವ ದಿನಪತ್ರಿಕೆ ಹಾಕುವ ವ್ಯಕ್ತಿಯೊರ್ವರು ಪತ್ರಿಕೆ ಹಾಕಲು ಬಂದಾಗ ದೈವಸ್ಥಾನದ ಮೆಟ್ಟಲಲ್ಲಿ ಕಟ್ಟೊಂದು ಕಂಡು ಬಂದಿತ್ತು.ತಕ್ಷಣ ಪರಿಶೀಲಿಸಿದಾಗ ಗೋಮಾಂಸವಾಗಿತ್ತು.ಕೂಡಲೇ ಅವರು ಸ್ಥಳೀಯರಿಗೆ ತಿಳಿಸಿದ್ದು ,ಅರ್ಚಕರು ಸ್ಥಳಕ್ಕೆ ಆಗಮಿಸಿ ದೈವಸ್ಥಾನದ ಶುಚಿತ್ವದ ದೃಷ್ಟಿಯಿಂದ ಕೂಡಲೇ ಸ್ಥಳ ಸ್ವಚ್ಚ ಗೊಳಿಸಿದರು.
ಸ್ಥಳೀಯರಿಂದ ಈ ವಿಚಾರ ಹರಡುತ್ತಿದ್ದಂತೆ ಕಲ್ಲುರ್ಟಿ ತಾಯಿಯ ಭಕ್ತರಿಂದ ಆಕ್ರೋಶ ವ್ಯಕ್ತವಾಗಿತ್ತು .

IMG-20170624-WA0006
ಈ ಕ್ರೂರ ಕೃತ್ಯವನ್ನು ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ತಾಯಿ ಕಲ್ಲುರ್ಟಿಯೇ ನೀಡಬೇಕೆಂದುಹಿಂದು ಜಾಗರಣಾ ವೇದಿಕೆ ಪ್ರಮುಖರು,ಕಾರ್ಯಕರ್ತರು,ಭಕ್ತರು ದೈವಸ್ಥಾನದ ಮುಂದೆ ಪ್ರಾರ್ಥನೆ ಸಲ್ಲಿಸಿದರು.ಹಿಂದು ಜಾಗರಣ ವೇದಿಕೆ ರಾಜ್ಯ ಕಾರ್ಯಕಾರಿಣ ಸದಸ್ಯ ರಾಧಾಕೃಷ್ಣ_ಅಡ್ಯಂತಾಯ,ವಿಭಾಗ ಸಂಚಾಲಕರಾದ ರವಿರಾಜ ಬಿ.ಸಿ.ರೋಡ್,ತಾಲೂಕು ಸಂಚಾಲಕರಾದ_ಗಣರಾಜ_ಭಟ್_ಕೆದಿಲ.ಮಧುರಾ_ಭಟ್.ಪುರುಷೋತ್ತಮ_ಕಲ್ಲಡ್ಕ.ಆತ್ರೇಯ. ಮೊದಲಾದವರಿದ್ದರು. ಕಳೆದ ಹಲವು ಸಮಯಗಳಿಂದ ಹಿಂದು ವಿರೋಧಿ ಕ್ರತ್ಯಗಳು ನಡೆಯತ್ತಿದ್ದು,ಇದೀಗ ದೈವಸ್ಥಾನಕ್ಕೆ ಗೋಮಾಂಸ ಎಸೆಯುವ ಮೂಲಕ ದುಷ್ಕರ್ಮಿಗಳು ಅಶಾಂತಿ ಸ್ರಷ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

IMG-20170624-WA0007

By suddi9

Leave a Reply

Your email address will not be published. Required fields are marked *