ಮೂಡುಬಿದರೆ: ಸಿವಿಲ್ ಜಡ್ಜ್ ಮತ್ತು ಮೂಡುಬಿದರೆ ಜೆಎಂಎಫ್ಸಿ ನ್ಯಾಯ್ಜ್ಯ ಹಾಗೂ ಮೂಡುಬಿದರೆಯ ವಕೀಲ ಸಂಘದ ಆಶ್ರಯದಲ್ಲಿ ಹೊಸ ನ್ಯಾಯಾಲಯದ ಆವರಣದಲ್ಲಿ ಗುರುವಾರ ವನಮಹೋತ್ಸವ ನಡೆಯಿತು.
ಮೂಡುಬಿದರೆ ಹೊಸ ನ್ಯಾಯಾಲಯದಲ್ಲಿ ವನಮಹೋತ್ಸವ ನಡೆಯಿತು
ನ್ಯಾಯಾದೀಶ ಎಸ್.ಟಿ.ಸತೀಶ್ ವನಮಹೋತ್ಸವಕ್ಕೆ ಚಾಲನೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಆರ್ ಪಂಡಿತ್, ಸ್ಥಾಪಕಾಧ್ಯಕ್ಷ ಬಾಹುಬಲಿ ಪ್ರಸಾದ್, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಕೋಟ್ಯಾನ್, ಸಂಘದ ಪದಾಧಿಕಾರಿಗಳು, ವಲಯ ಅರಣ್ಯಧಿಕಾರಿ ದಿನೇಶ್, ರೋಟರಿ ಅಧ್ಯಕ್ಷ ಡಾ.ಮುರಳಿಕೃಷ್ಣ ಉಪಸ್ಥಿತರಿದ್ದರು.
ವನಮಹೋತ್ಸವಕ್ಕೆ ಅರಣ್ಯ ಇಲಾಖೆ ಸಸಿಗಳನ್ನು ನೀಡಿದ್ದು, ರೋಟರಿ ಕ್ಲಬ್ನವರು ರಕ್ಷಾ ಕವಚವನ್ನು ಒದಗಿಸಿದ್ದಾರೆ ಎಂದು ಸಂಘ ತಿಳಿಸಿದೆ.

