ವಿಟ್ಲ: “ಮನಸ್ಸು, ದೇಹ, ಉಸಿರಾಟದ ಸುಸ್ಥಿತಿ ಕಾಯ್ದುಕೊಳ್ಳುವುದೆ ಯೋಗದ ನೆಲೆಯಲ್ಲಿ ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಜೂ.21 ರಂದು ಬುಧವಾರ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಚಾಲನೆ ಪಡೆದ ಈ ಒಂದು ಶುಭ ಕಾರ್ಯಕ್ರಮದಲ್ಲಿ ಯೋಗ ಹಾಗೂ ಕರಾಟೆ ತರಬೇತುದಾರರಾದ ಸುರೇಶ್ ಹಾಗೂ ಧನುಷ್,ಜಾಸ್ಮಿನ್ ಉಪಸ್ಥಿತರಿದ್ದು  ಯೋಗದ ಕುರಿತಾದ ಉಪನ್ಯಾಸವನ್ನು  ಧನುಷ್ ನೀಡಿದರು. ಯೋಗ ತರಬೇತಿಯನ್ನು ಸುರೇಶ್ ಇವರು ನೆರವೇರಿಸಿದರು.

1 (1)ವಿದ್ಯಾರ್ಥಿಗಳೆಲ್ಲ ಬಹಳ ಆಸಕ್ತಿಯಿಂದ ಇದರಲ್ಲಿ ಭಾಗವಹಿಸಿ, ಹಲವು ಯೋಗಾಸನಗಳನ್ನು ಮಾಡಿ ಯೋಗದ ಮಹತ್ವವನ್ನು ಸ್ವಅನುಭವದೊಂದಿಗೆ ತಿಳಿದುಕೊಳ್ಳುವಲ್ಲಿ ಯಶಸ್ವಿಯಾದರು. ಶಾಲಾ ಸಹಶಿಕ್ಷಕಿಯಾದ ಶ್ರೀಮತಿ ಹೆಲನ್ ಪುಡ್ತಾದೊ ಕಾರ್ಯಕ್ರಮವನ್ನು ನಿರೂಪಿಸಿದಲ್ಲದೆ ಯೋಗಾಸನದ ಮಹತ್ವವನ್ನು ಸಾರಿ ಹೇಳಿದರು. ಶಾಲಾ ಮುಖ್ಯ ಶಿಕ್ಷಕರಾದ ಸಚಿನ್ ಎಮ್ ಇವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಹಾಗೆಯೇ ಶಾಲಾ ನಾಯಕಿ ಸಿಂಧೂರ ಇವರು ತನ್ನ ಅನಿಸಿಕೆಯನ್ನು ಹಂಚಿಕೊಂಡರು. ವಿದ್ಯಾರ್ಥಿ – ಶಿಕ್ಷಕರೆಲ್ಲರೂ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಇದರ ಯಶಸ್ವಿಗೆ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *