ಒದಿಶಾ ಸರಕಾರವು ಮುಂದಿನ ಐದು ವರ್ಷಗಳಲ್ಲಿ ಮೀನುಗಾರಿಕಾ ರಪ್ತನ್ನು ಹತ್ತು ಪಟ್ಟು ಹೆಚ್ಚುಗೊಳಿಸಲು ರೂಪುರೇಷೆ ತಯಾರಿಸಲು ಮತ್ತು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಮ್ಮ ಒಂದು ಕೋಟಿ ರೂಪಾಯಿಗಳ ಸಲಹಾ ಒಪ್ಪಂದವನ್ನು ನಿಟ್ಟೆ ವಿಶ್ವವಿದ್ಯಾನಿಲಯಕ್ಕೆ ನೀಡಿದೆ. ಹಲವಾರು ದೇಶ ವಿದೇಶಗಳ ಹರಾಜುಗಾರರ ಪೈಕಿ ನಿಟ್ಟೆ ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡಿತ್ತು. ಈ ಬಗ್ಗೆ ಒಡಂಬಡಿಕೆ ಪತ್ರಕ್ಕೆ 20ನೇ ಜೂನ್ 2017ರಂದು ಒದಿಶಾ ಸರಕಾರದ ಮೀನುಗಾರಿಕಾ ಮತ್ತು ಪ್ರಾಣಿ ಸಂಪನ್ಮೂಲ ಖಾತೆಯ ಕಾರ್ಯಾಲಯದಲ್ಲಿ ಸಹಿ ಹಾಕುವ ಮೂಲಕ ಒಪ್ಪಂದಕ್ಕೆ ಚಾಲನೆ ನೀಡಲಾಯಿತು.Odisha contract-MoU exchange photo-1 (1)

ಒದಿಶಾ ಸರಕಾರದ ಕೃಷಿ, ರೈತ ಸಬಲೀಕರಣ, ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಮತ್ತು ಸಾರ್ವಜನಿಕ ಉದ್ಯಮಗಳ ಖಾತೆಯ ಸಚಿವರಾದ ಸನ್ಮಾನ್ಯ ಡಾ| ದಾಮೋದರ ರಾವುತ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು, ಒದಿಶಾ ಸರಕಾರದ ಮೀನುಗಾರಿಕಾ ನಿರ್ದೇಶಕರಾದ ಡಾ| ಬಿಜೋಯ್ ಉಪಾಧ್ಯಾಯ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಸಂಬಂಧಗಳ ಹಿರಿಯ ನಿರ್ದೇಶಕರಾದ ಡಾ| ಇಡ್ಡ್ಯಾ ಕರುಣಾಸಾಗರ್ ರವರು ಒದಿಶಾ ಸರಕಾರ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ನಡುವಿನ ಸಲಹಾ ಒಪ್ಪಂದಕ್ಕೆ ಸಹಿ ಹಾಕಿರುವ ಒಡಂಬಡಿಕೆ ಪತ್ರವನ್ನು ವಿನಿಮಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಒದಿಶಾದ ಮೀನುಗಾರಿಕಾ ಆಯುಕ್ತರಾದ ಶ್ರೀ ವಿಶಾಲ್ ಗಗನ್, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ| ಎಸ್. ರಮಾನಂದ ಶೆಟ್ಟಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ| ಇಡ್ಡ್ಯಾ ಕರುಣಾಸಾಗರ್ ರವರು ಅದರ ಕಾರ್ಯವೈಖರಿ, ವಿಧಾನಗಳು, ಸಮರ್ಥಿಸುವ ತತ್ವಗಳು, ಗುಣಮಟ್ಟ ಮತ್ತು ಭದ್ರತೆಗಳಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳಾದ ಕೋಡೆಕ್ಸ್ ಅಲಿಮೆಂಟೇರಿಯನ್ ಕಮಿಷನ್ (ಸಿ.ಎ.ಸಿ), ಆಹಾರ ಮತ್ತು ಕೃಷಿ ಸಂಸ್ಥೆ , ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು. ಎಚ್.ಒ) ಮತ್ತು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (ಒ.ಐ.ಇ) ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಬೇಡಿಕೆಗಳೊಂದಿಗೆ ಅನುಸರಣೆ ಮುಂತಾದ ವಿಷಯಗಳ ಬಗ್ಗೆ ಒಂದು ಪ್ರಸ್ತಾವವನ್ನು ಮಂಡಿಸಿದರು.

ಸಚಿವರು ಒದಿಶಾದ ಶ್ರೀಮಂತ ಜಲಸಂಪನ್ಮೂಲಗಳು ಸಾಗರೋತ್ಪನ್ನ ಕೈಗಾರಿಕೆಯನ್ನು ಅಬಿವೃದ್ಧಿಗೊಳಿಸಲು ಪೂರಕವಾಗಿವೆ ಆದರೆ ಅದಕ್ಕೆ ತಾಂತ್ರಿಕ ಅಡೆತಡೆಗಳಿವೆ ಎಂದು ಹೇಳಿದರು. ಅವರು ಈ ಅಡೆತಡೆಯನ್ನು ನಿವಾರಿಸಲು ಪರಿಣತ ತಜ್ಞರಾದ ಡಾ| ಇಡ್ಡ್ಯಾ ಕರುಣಾಸಾಗರ್ ರವರ ಜೊತೆ ಶ್ರೀ ವಿಷ್ಣು ಭಟ್, ನಿವೃತ್ತ ಮೀನುಗಾರಿಕಾ ಅಭಿವೃದ್ಧಿ ಆಯೊಕ್ತರು, ಡಾ| ಶ್ರೀಜಿತ್ ಮಿಶ್ರಾ, ನಭಕೃಷ್ಣ ಚೌಧರಿ ಶಿಕ್ಷಣಾಭಿವೃದ್ಧಿ ಸಂಸ್ಥೆ, ಭುವನೇಶ್ವರ್, ಡಾ| ಗಂಗೇಶ್ ವರ್ಮಾ, ವರ್ಮಾ ಸಾಗರ ಸಂಪನ್ಮೂಲಗಲ ನಿರ್ದೇಶಕರು ಮತ್ತು ಡಾ| ರಾಮಚಂದ್ರ ಭಟ್, ಎಮೆರಿಟಸ್ ಪ್ರೊಫೆಸರ್, ಐ. ಸಿ. ಎ. ಆರ್ ರವರನ್ನು ಒಳಗೊಂಡ ನಿಯೋಗವು ಈ ಒಪ್ಪಂದವನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ.

By suddi9

Leave a Reply

Your email address will not be published. Required fields are marked *