ಬಂಟ್ವಾಳ: ಒರ್ವ ವ್ಯಕ್ತಿ ವಿದ್ಯಾಭ್ಯಾಸ ಪಡೆದು ಡಾಕ್ಟರ್ ಅಥವ ಕಲೆಕ್ಟರ್ ಆದರೂ ಮಾನವೀಯತೆ ಇಲ್ಲದೇ ಇದ್ದರೂ ಯಾವುದೇ ಪ್ರಯೋಜನವಿಲ್ಲ. ಸ್ವಾತಂತ್ರ್ಯಯುಕ್ತ ಹಾಗೂ ಮಾನವೀಯತೆಯ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಮಾತ್ರ ಪಡೆಯಲು ಸಾಧ್ಯ ಎಂದು ಕೇರಳ ಶಾಸಕ ಜಿ.ಎಸ್. ಜಯಲಾಲ್ ಹೇಳಿದರು.
ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ದತ್ತುಯೋಜನೆಯಡಿ ದಡ್ಡಲಕಾಡು ಸ.ಹಿ.ಪ್ರಾ. ಶಾಲೆಯಲ್ಲಿ ಶನಿವಾರ ಸ್ಮಾರ್ಟ್ ತರಗತಿ ಉದ್ಘಾಟಿಸಿ, ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದರು. ಕೇರಳದ ಚಾತನೂರಿನಲ್ಲಿನ ಸರಕಾರಿ ಶಾಲೆಗಳಿಂದ ಪ್ರೇರಣೆ ಪಡೆದು ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ಸ್ಮಾರ್ಟ್ ತರಗತಿ ಮತ್ತಿತರ ಅಭಿವೃದ್ದಿ ಕಾರ್ಯಗಳನ್ನು ನಡೆಸಲಾಗಿದೆ. ಆದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಕಾರ್ಯಗಳನ್ನು ನಡೆಸಿ ನಮ್ಮ ಶಾಲೆಗಳಿಗಿಂತಲೂ ದಡ್ಡಲಕಾಡು ಶಾಲೆ ಹೆಚ್ಚು ಅಭಿವೃದ್ದಿ ಹೊಂದಿರುವುದು ಶ್ಲಾಘನೀಯ. ಪ್ರಕಾಶ್ ಅಂಚನ್ ಅವರ ಈ ಪ್ರಯತ್ನ ನನಗೆ ಅಸೂಯೆ ಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೇರಳದಿಂದ ಇಲ್ಲಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಜೀವನದ ಮರೆಯಲಾಗದ ಕ್ಷಣ, ಇಲ್ಲಿನ ಜನರ ಸಹಭಾಗಿತ್ವ ಹಾಗೂ ಜನರು ಸರ್ಕಾರಿ ಶಾಲೆ ಉಳಿಸಲು ನಡೆಸುವ ಪ್ರಯತ್ನವನ್ನು ಕೇರಳದ ಜನರಿಗೆ ಮನವರಿಕೆ ಮಾಡುತ್ತೇನೆ ಎಂದರು.

BTW_JUNE17_2A BTW_JUNE17_2B

ಉದ್ಯಮಿ ನಾಗೇಶ್ ಸಾಲ್ಯಾನ್ ಶಾಲೆಗೆ ಎರಡು ಸ್ಟೀಲ್ ಕಪಾಟು ದೇಣಿಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರನ್ನು ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ರೈತ ಸಂಘದ ಎನ್.ಕೆ.ಇದಿನಬ್ಬ, ಸುದೇಶ್ ಮಯ್ಯ, ಪತ್ರಕರ್ತ ಮೋಹನದಾಸ ಮರಕಡ, ಉದ್ಯಮಿ ನಾಗೇಶ್ ಸಾಲ್ಯಾನ್, ಶಾಲಾಭಿವೃದ್ದಿ ಸಮಿತಿ ನೂತನ ಅಧ್ಯಕ್ಷ ರಾಮಚಂದ್ರ ಕರೆಂಕಿ, ನಿರ್ಗಮನ ಅಧ್ಯಕ್ಷ ಪೂವಪ್ಪ ಮೆಂಡನ್, ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ, ಕೇರಳದ ಉದ್ಯಮಿ ಶಾಮಣ್ಣ, ಪ್ರತಾಪ್ ವೇದಿಕೆಯಲ್ಲಿದ್ದರು. ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಸ್ವಾಗತಿಸಿದರು. ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಪ್ರಸ್ತಾವಿಸಿದರು. ಶಿಕ್ಷಕಿಯರಾದ ವೇದಾವತಿ ವಂದಿಸಿದರು. ಅನಿತಾ ನಿರೂಪಿಸಿದರು.

 

By Suddi9

Leave a Reply

Your email address will not be published. Required fields are marked *