ಮೂಡುಬಿದಿರೆ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಇಲಾಖೆ ವತಿಯಿಂದ ದೆಹಲಿಯಲ್ಲಿ ಜೂನ್ 18ರಿಂದ 20ವರೆಗೆ ನಡೆಯಲಿರುವ ರಾಷ್ಟ್ರೀಯ ಯೋಗ ಒಲಿಂಪಿಯಡ್‍ಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಚೈತ್ರಾ ಬೆಳಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಉತ್ತಮ ಸಾಧನೆ ಮಾಡಿದರೆ, ಮುಂದೆ ನಡೆಯುವ ಏಷ್ಯನ್ ಯೋಗ ಒಲಿಂಪಿಯಡ್‍ಗೆ ಅರ್ಹತೆ ಪಡೆಯಲಿದ್ದಾರೆ.

mbd_june15_8 Chaitra
ಬೆಂಗಳೂರಿನಲ್ಲಿ ಆಯ್ಕೆ ಸಮಿತಿ ನಡೆಸಿದ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಚೈತ್ರಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, 14 ವರ್ಷದ ವಯೋಮಿತಿ ವಿಭಾಗದಲ್ಲಿ ರಾಜ್ಯದಿಂದ ಆಯ್ಕೆಯಾದ ಮೂವರು ಯೋಗಪಟುಗಳಲ್ಲಿ ಚೈತ್ರಾ ಕೂಡ ಒಬ್ಬಳು. ಈಕೆಯು ಕನ್ನಡ ಮಾಧ್ಯಮ ಹಾಗೂ ಯೋಗಕ್ಕೆ ನೀಡುವ ಆಳ್ವಾಸ್ ಉಚಿತ ಶಿಕ್ಷಣ ಯೋಜನೆಯಡಿ ವ್ಯಾಸಂಗ ಮಾಡುತ್ತಿದ್ದಾಳೆ. ವಿದ್ಯಾರ್ಥಿಯ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.
—

By Suddi9

Leave a Reply

Your email address will not be published. Required fields are marked *