ಬಾಯಾರ್ : ಮುಜಮ್ಮಉ ಸಖಾಫತಿ ಸುನ್ನಿಯ್ಯಾದಲ್ಲಿ ವಿಶುದ್ದ ರಮಳಾನ್ 23 ನೇ ರಾತ್ರಿ ನಡೆಯುವ ಪ್ರಾರ್ಥನಾ ಸಮ್ಮೇಳನ ಜೂನ್ 17 ರಂದು ನಡೆಯಲಿದೆ. ಸಾವಿರಾರು ಮಂದಿ ಇಫ್ತಾರ್ ಕಾರ್ಯಕ್ರಮದಲ್ಲಿ ಪಾಲ್ಗೊಲ್ಲುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಯಾಗಲಿದೆ.ತದನಂತರ ತರಾವೀಹ್ , ತೌಬ ಮಜ್ಲಿಸ್ , ಪ್ರಾರ್ಥನಾ ಸಮ್ಮೇಳನ , ಸ್ವಲಾತ್ ಮಜ್ಲಿಸ್, ಕೂಟಪ್ರಾರ್ಥನೆ ಮುಂತಾದ ಸರಣಿ ಕಾರ್ಯಕ್ರಮಗಳು ಜರಗಲಿದೆ.bayar thangal

ಪ್ರಾರ್ಥನಾ ಸಮ್ಮೇಳನ ಹಾಗೂ ಸಾಮೂಹಿಕ ಪ್ರಾರ್ಥನೆಗೆ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕ್ಕೋಯ ತಂಙಳ್ ಅಲ್-ಬುಖಾರಿ ನೇತೃತ್ವ ವಹಿಸುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶರಫುಲ್ ಉಲಮ ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನರವರ ಅಧ್ಯಕ್ಷತೆಯಲ್ಲಿ ಸಮಸ್ತ ಕೇರಳ ಜಂಈಯ್ಯತುಲ್ ಉಲಮ ಉಪಾಧ್ಯಕ್ಷರಾದ ತಾಜು ಶರೀಅ: ಶೈಖುನಾ ಅಲಿಕುಞ ಉಸ್ತಾದ್ ಶಿರಿಯ ಕಾರ್ಯಕ್ರಮ ಉದ್ಘಾಟಿಸುವರು. ಅಲ್ ಹಾಜ್ ಹುಸೈನ್ ಸಅದಿ ಕೆಸಿ ರೋಡ್ ಮುಖ್ಯಪ್ರಭಾಷಣೆ ನಡೆಸುವರು. ಪ್ರಮುಖ ಸಾದಾತ್ತುಗಳೂ ಪಂಡಿತರೂ ವಿವಿಧ ಕಾರ್ಯಕ್ರಮಗಳಿಗೆ ನೇತೃತ್ವ ನೀಡುವರು.

ಅಸಯ್ಯಿದ್ ಮುಹ್ಸಿನ್ ಸಯ್ದಲವಿಕ್ಕೋಯ ತಂಙಳ್ ಅಲ್ ಬುಖಾರಿ ಕುಂಜಿಲಂ , ಅಸಯ್ಯಿದ್ ಆಟ್ಟಕ್ಕೋಯ ತಂಙಳ್ ಬಾಹಸನ್ , ಅಸಯ್ಯಿದ್ ಕೆ ಪಿ ಎಸ್ ತಂಙಳ್ ಅರ್ಲಡ್ಕ, ಬಿ ಎಸ್ ಅಬ್ದುಲ್ಲ ಕುಞ ಫೈಝಿ , ಸಿ ಅಬ್ದುಲ್ಲ ಮುಸ್ಲಿಯಾರ್ , ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ , ಬಾಯಾರ್ ಅಬ್ದುಲ್ಲ ಮುಸ್ಲಿಯಾರ್ , ಜಬ್ಬಾರ್ ಸಖಾಫಿ ಪಾತೂರ್, ಇಬ್ರಾಹಿಂ ಪೈಝಿ ಕನ್ಯಾನ, ಸಿದ್ದೀಖ್ ಹಾಜಿ ಮಂಗಳೂರು , ಸಿದ್ದೀಖ್ ಸಖಾಫಿ ಬಾಯಾರ್ , ಸಿದ್ದೀಖ್ ಲತ್ವೀಫಿ ಮುಂತಾದವರು ಭಾಗವಹಿಸುವರು.

By suddi9

Leave a Reply

Your email address will not be published. Required fields are marked *