ಮುಂಬಯಿ: ಶೈಕ್ಷಣಿಕ ಕಾರ್ಯಕ್ರಮವೊಂದರಲ್ಲಿ ರಾಯಾನ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಮೆರಿಕದ ಕೆನೆಡಿ ಬಾಹ್ಯಾಕಾಶ ಕೇಂದ್ರ ನಾಸಾ ಸಂದರ್ಶಿಸುವ ಸುವರ್ಣಾಶ ದೊರಕಿತು. ಇದೇ ವೇಳೆ ವಿದ್ಯಾರ್ಥಿಗಳು ಸೀ ವಲ್ರ್ಡ್, 3ಡಿ ಐಮ್ಯಾಕ್ಸ್ ಮೂವೀ, ಎಕ್ಸ್‍ಬಿಷನ್ಸ್ ವೀಕ್ಷಣೆ ಮತ್ತು ಬಾಹ್ಯಾಕಾಶ ನೌಕೆ ಉಡಾವಣೆ ಮೊದಲಾದ ಅನುಭವಗಳನ್ನು ಪಡೆದರು.
ನ್ಯೂಯಾರ್ಕ್‍ನಲ್ಲಿ ವಿದ್ಯಾರ್ಥಿಗಳು ಪ್ರಸಿದ್ದ ಮೇಡಮ್ ಟಸ್ಸಾಡ್ಸ್ ಮ್ಯೂಸಿಯಂಗೆ ಭೇಟಿ ನೀಡುವ ಅವಕಾಶ ಲಭ್ಯವಾಗಿದ್ದು ಅಲ್ಲಿ ಅನೇಕ ಪ್ರಸಿದ್ಧ ವ್ತಕ್ತಿಗಳ ಮತ್ತು ಪುರಾಣಗಳ ಶಿಲ್ಪಕಲೆಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳು ಬ್ರಾಡ್‍ವೇ ಥಿಯೇಟರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ಮಾತಿನ ಕೌಶಲ್ಯ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡರು. ನಂತರ ಒಬ್ಬ ಕಲಾಗಾರನಾಲು ಬೇಕಾದ ತಂತ್ರೋಪಾಯಗಳ ಬಗ್ಗೆ ಕಲಾಗಾರರಲ್ಲಿ ಮಾತುಕತೆ ನಡೆಸಿದರು.
ಮುಂದೆ ವಿದ್ಯಾರ್ಥಿಗಳು ಬೋಸ್ಟನ್‍ಗೆ ಪ್ರಯಾಣ ಬೆಳೆಸಿದರು. ಅಸಂಖ್ಯಾತ ವಿದ್ಯಾರ್ಥಿಗಳು ಗುರಿ ತಲುಪಲು ದಾರಿದೀಪ ಆಗಿರುವ ಜಗತ್ಪ್ರಸಿದ್ದ ಎಂಐಟಿ ವಿಶ್ವವಿದ್ಯಾನಿಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್ ಪ್ರವೇಶಿಸಿದರು. ನಂತರ ಯುಎನ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಅಲ್ಲಿ ಪ್ರಗತಿಯಲ್ಲಿದ್ದ ಸೆಕ್ಯುರಿಟಿ ಕೌನ್ಸಿಲ್ ಮತ್ತು ಇಸಿಒಎಸ್‍ಸಿ ಮೀಟಿಂಗನ್ನು ವೀಕ್ಷಿಸಿದರು.
“ನನಗೆ ಈ ಪ್ರಯಾಣ ಅದ್ಭುತವಾದ ಅನುಭವವನ್ನು ನೀಡಿದೆ, ನನ್ನ ಸಾಮಾಜಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಇದು ಸಹಕಾರಿಯಾಗಿದೆ?? ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಲಾಡ್ ರಯಾನ್ ಅಂತರಾಷ್ಟ್ರೀಯ ಶಾಲೆಯ ಪರ್ಚೆ ಪ್ರಾಣೇಶ್ ಹೇಳಿದ್ದಾರೆ.
“ಅದ್ಭುತವಾದ ಶೈಕ್ಷಣಿಕ ಕಾರ್ಯಕ್ರಮ ಇದಾಗಿದೆ, ಸ್ವತಂತ್ರ ನಿಲುವು, ಜವಾಬ್ದಾರಿ ನಿರ್ವಹಣೆಯಂತಹ ಹೊಸ ವಿಚಾರಗಳನ್ನು ಕಲಿತುಕೊಂಡೆ. ನಾಸಾ ವಿಜ್ಞಾನಿಗಳೊಂದಿಗಿನ ಸಂದರ್ಶನ ನಿಜಕ್ಕೂ ಅದ್ಭುತವಾಗಿ ತ್ತು. ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ| ಆಗಸ್ಟಿನ್ ಎಫ್. ಪಿಂಟೋ ಮತ್ತು ನಿರ್ವಹಣಾ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರು ಈ ಅಮೋಘವಾದ ಅವಕಾಶ ಒದಗಿಸಿ ಕೊಟ್ಟದ್ದಕ್ಕಾಗಿ ಮತ್ತು ಜಗತ್ಪ್ರಸಿದ್ದ ವಿಶ್ವವಿದ್ಯಾನಿಲಯಗಳ ಕಾರ್ಯಾಗಾರಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಟ್ಟದ್ದಕ್ಕಾಗಿ ನಾವು ಅಭಾರಿಯಾಗಿದ್ದೇವೆ. ಇಂತಹ ಪ್ರವಾಸ ವಿದ್ಯಾರ್ಥಿಗಳ ಜೀವನದ ಅಡಿಪಾಯ ಎಂದು ನಾನು ಭಾವಿಸಿದ್ದೇನೆ” ಎಂದು ಖಾರ್‍ಘರ್ ರಾಯಾನ್ ಗ್ಲೋಬಲ್ ಶಾಲೆಯ ವಿದ್ಯಾರ್ಥಿನಿ ಕ್ಷಿತಿ ಕಜಾಲೆ ತಿಳಿಸಿದ್ದಾರೆ.
