ಬಂಟ್ವಾಳ: ಬೈಕ್ ನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಟ ಮಾಡುತ್ತಿರುವುದನ್ನು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳಕ್ಕೆ ಸಮೀಪದ ಸೊರ್ನಾಡ್ ಎಂಬಲ್ಲಿ ಶುಕ್ರವಾರ ನಡೆದಿದೆ.ಈಸಂದರ್ಭದಲ್ಲಿ ಸವಾರ ಬೈಕನ್ನು ಸ್ಧಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಬೈಕ್ ಹಾಗೂ ಗೋಮಾಂಸವನ್ನು ವಶಪಡಿಸಿದರು.ಬೆಳಿಗ್ಗೆ ಬೈಕ್ ಸವಾರನೊಬ್ಬ ತನ್ನ ಬೈಕ್ ನಲ್ಲಿ ಮಾಂಸ ಸಾಗಿಸುತ್ತಿದ್ದ ಬಗ್ಗೆ ಅನುಮಾನಗೊಂಡ ಸ್ಥಳೀಯ ಹಿ.ಜಾ.ವೇ.ಕಾರ್ಯಕರ್ತರು ಬೈಕ ನ್ನು ತಡೆಯುತ್ತಿದ್ದಂತೆ ಸವಾರ ಬೈಕ್ ನ್ನು ಸ್ಥಳದಲ್ಲೆ ಬಿಟ್ಟು ಕಾಲ್ಕಿತ್ತಿದ್ದಾನೆನ್ನಲಾಗಿದೆ.ಚೀಲವ
