ಮೂಡುಬಿದಿರೆ: ತಾಕೋಡೆ ಕರಿಂಜೆ ನಿವಾಸಿ ಲೂಯಿಸ್ ಲೋಬೋ ಅವರ ಪತ್ನಿ ಎಮಿಲ್ಡಾ ಲೋಬೋ(53) ಮಂಗಳವಾರ ಬೆಳಗ್ಗಿನಿಂದ ಕಾಣೆಯಾಗಿರುವುದಾಗಿ ಅವರ ಪುತ್ರ ಜೇಸನ್ ಕಿಶನ್ ಲೋಬೋ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.

ಜೇಸನ್ ಬೆಳಿಗ್ಗೆ 8 ಗಂಟೆ ವೇಳೆಗೆ ಡೈರಿಗೆ ಹಾಲು ಕೊಟ್ಟು ಮರಳಿ ಮನೆಗೆ ಬಂದಾಗ ತಾಯಿ ಮನೆಯಿಂದ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.ಐದು ಅಡಿ ಎತ್ತರ, ಗೋಧಿ ಮೈಬಣ್ಣದ ಎಮಿಲ್ಡಾ ಅವರು ಬಲಗಣ್ಣಿನ ಕೆಳಗಡೆ ಕಪ್ಪು ಮಚ್ಚೆ ಹೊಂದಿದ್ದು ಕನ್ನಡ, ಕೊಂಕಣಿ ತುಳು ಭಾಷೆ ಭಾಷೆ ಬಲ್ಲವರಾಗಿದ್ದಾರೆ. ಇವರ ಇರುವಿಕೆಯ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಅಥವಾ ಕಾಣೆಯಾದ ಮಹಿಳೆ ಪತ್ತೆಯಾದಲ್ಲಿ, ಮಂಗಳೂರು ಪೋಲೀಸ್ ಆಯುಕ್ತರ ಕಚೇರಿ ಅಥವಾ ಮೂಡುಬಿದಿರೆ ಠಾಣೆಗೆ ಮಾಹಿತಿ ನೀಡಿ ಸಹಕರಿಸುವಂತೆ ಕೋರಲಾಗಿದೆ.
