ಬಂಟ್ವಾಳ: ಕಾರ್ಮಿಕ ವರ್ಗ ಸಾಮಾಜಿಕ ಹಾಗೂ ಆರ್ಥಿಕ ಸ್ವತಂತ್ರ ಹೊಂದಿದಾಗ ಮಾತ್ರ ದೇಶ ಸದೃಢವಾಗಲು ಸಾಧ್ಯ ಎಂದು ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ ಮಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ಕಾರ್ಮಿಕ ಶಿಕ್ಷಣಾಧಿಕಾರಿ ಎ. ಸತೀಶ್ ಕುಮಾರ್ ಹೇಳಿದರು.ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆ ಬಂಟ್ವಾಳ ತಾಲೂಕು, ಕೇಂದ್ರ ಸರಕಾರದ ದತ್ತೋಪಂತ್ ಥೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿಯ ಮಂಗಳೂರು ಪ್ರಾದೇಶಿಕ ನಿರ್ದೇಶನಾಲಯ ವತಿಯಿಂದ ನಡೆದ 2 ದಿನಗಳ ಅಸಂಘಟಿತ ಕಾರ್ಮಿಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

9FKakkepadavu1
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸ್ಥಳೀಯ ಘಟಕ ಸಮಿತಿ ಅಧ್ಯಕ್ಷ ರಾಜೇಶ್ ಕಕ್ಕೆಪದವು ಸಭಾಧ್ಯಕ್ಷತೆ ವಹಿಸಿದ್ದು, ಯೋಜನೆಯ ತಾಲೂಕು ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ಸಂಪನ್ಮೂಲ ವ್ಯಕ್ತಿ ವಿಶ್ವನಾಥ್ ಶೆಟ್ಟಿ, ಗ್ರಾ.ಪಂ. ಸದಸ್ಯ ಚಿದಾನಂದ ರೈ ಅವರು ಶುಭ ಹಾರೈಸಿದರು. ಯೋಜನೆಯ ವಲಯ ಸಮಿತಿಯ ಸೇವಾ ದೀಕ್ಷಿತೆ ಶ್ರೀಮತಿ ಬೇಬಿ ಸ್ವಾಗತಿಸಿ, ಸದಸ್ಯೆ ಶ್ರೀಮತಿ ಅಶ್ವಿನಿ ವಂದಿಸಿದರು. ಸಂಯೋಜಕ ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಮಾಹಿತಿ ಕಾರ್ಯಾಗಾರ:

2 ದಿನ ನಡೆದ ಮಾಹಿತಿ ಕಾರ್ಯಾಗಾರವನ್ನು ರಾಜ್ಯ ತರಬೇತುದಾರ ಮಂಜುವಿಟ್ಲ ಹಾಗೂ ಪತ್ರಕರ್ತ ಫಾರೂಕ್ ಬಂಟ್ವಾಳ ನಡೆಸಿಕೊಟ್ಟರು. ಸದಾಶಿವ ಅಳಿಕೆ, ವಿಶ್ವನಾಥ್ ಶೆಟ್ಟಿ, ರಾಜಕುಮಾರ್ ಸಂವಾದದಲ್ಲಿ ಪಾಲ್ಗೊಂಡು, ಚರ್ಚಿಸಿದರು. ಆರೋಗ್ಯ ಕವಚ 108 ಸಿಬ್ಬಂದಿಗಳು ಶಿಬಿರಾರ್ಥಿಗಳ ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ನಡೆಸಿದರು.

By Suddi9

Leave a Reply

Your email address will not be published. Required fields are marked *