ವಿಟ್ಲ: ಇಕೋ ಕ್ಲಬ್, ಇಕೋ ವಿಷನ್ ವಿಠಲ ಪ್ರೌಢ ಶಾಲೆ ವಿಟ್ಲ ಮತ್ತು ಜೆಸಿಐ ವಿಟ್ಲ ಇದರ ಸಹಯೋಗದೊಂದಿಗೆ ವಿಠಲ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅನಂತಾಡಿಯ `ಸೇವ್ ವೈಲ್ಡ್ ಲೈಫ್’ ಸಂಸ್ಥೆಯ ಉರಗ ತಜ್ಞರಾದ ಡಿಪಿನ್ ಪೂಜಾರಿ, ರಾಮ್ ಪ್ರಸಾದ್ ಮತ್ತು ಸುದರ್ಶನ್ ಇವರು ಹಾವುಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ಜೆಸಿಐ ಅಧ್ಯಕ್ಷ ರಮೇಶ್ ಬಿ ಕೆ, ಇಕೋ ಕ್ಲಬ್ ಸಂಚಾಲಕ ರಾಜಶೇಖರ್, ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
