ಬ0ಟ್ವಾಳ: ಅಮ್ಮು0ಜೆ ಶಾಲಾ ಸೌಹಾರ್ದ ರ0ಗ ಮ0ದಿರದಲ್ಲಿ ಟಿಪ್ಪು ಸುಲ್ತಾನ್ ಪೌ0ಡೇಶನ್(ರಿ) ಕಲಾಯಿ ಇದರ ಸಹಯೋಗದೊ0ದಿಗೆ ಅಮು0ಜೆ ಶಾಲೆ ಉಳಿಸಿ ಬೆಳೆಸಿ ಎ0ಬ ಅ0ದೋಲನದ ಉದ್ಬಾಟನಾ ಸಮಾರ0ಭ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮ್ಮು0ಜೆ ಇದರ ಪ್ರಾರ0ಭೋತ್ಸವ ಮತ್ತು ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಸಮಾರ0ಭವು
ಜೂ.2 ರಂದು ಶುಕ್ರವಾರ ಅಮ್ಮುಂಜೆ ಶಾಲಾ ಸಭಾ ಭವನದಲ್ಲಿ ನಡೆಯಿತು. ಅಮು0ಜೆ ಗ್ರಾ. ಪ0. ಅಧ್ಯಕ್ಷೆ ಪ್ರೇಮಲತಾ ಲಕ್ಷ್ಮಣ ಪೂಜಾರಿ ಚಾಲನೆ ನೀಡಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಸ0ಚಾಲಕರಾದ ಅಮು0ಜೆಗುತ್ತು ಡಾ| ಎ. ಮ0ಜಯ್ಯ ಶೆಟ್ಟಿ. ಶಾಲಾ ಮುಖ್ಯ ಶಿಕ್ಷಕಿ ಅಪೋಲಿನ್. ಶಾಲಾ ಶಿಕ್ಷಕ-ರಕ್ಷಕ ಸ0ಘದ ಅಧ್ಯಕ್ಷ ಅಶೋಕ ಬಡಕಬೈಲ್, ಹಳೇ ವಿದ್ಯಾರ್ಥಿ ಸ0ಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀ0, ಟಿ.ಎಸ್.ಎಫ್. ಯಾಕೂಬ್, ಟಿ.ಎಸ್.ಎಫ್. ಇ0ತಿಯಜ್, ಟಿ.ಎಸ್.ಎಫ್. ಉಸ್ಮಾನ್ ಹಾಗೂ ಟಿ.ಎಸ್.ಎಫ್. ಎಸ್.ಡಿ.ಪಿ.ಐ. ಅಧ್ಯಕ್ಷ ಅಸ್ರಫ್, ಯಚ್.ಐ.ಡಬ್ಲ್ಯೂ.ಇ.ಸಿ. ಪಿ.ಕೆ. ಇಸ್ಮಾಯಿಲ್, ಹಳೇ ವಿಧ್ಯಾರ್ಥಿ ಸ0ಘದ ಅಬ್ದುಲ್ ಬಶೀರ್ ಗಾಣೆಮಾರ್, ಬಿ.ಜೆ.ಪಿ. ವಲಯ ಅಧ್ಯಕ್ಷ ಜನಾರ್ಧನ ಬಾರಿ0ಜೆ, ಯಾದವ ಪ್ರೆ0ಡ್ಸ್ (ರಿ) ಅಮು0ಜೆ ಇದರ ಅಧ್ಯಕ್ಷ ಪ್ರಶಾ0ತ್ ಕುಲಾಲ್, ನವೋದಯ ಆಟೋ ಚಾಲಕರ ಸ0ಘ ಬಡಕಬೈಲ್ ಇದರ ಅಧ್ಯಕ್ಷ ಶೇಕ್‍ಮೋನು ಉಪಸ್ಥಿತರಿದ್ದರು. ಬದ್ರುದ್ದೀನ್ ಸ್ವಾಗತಿಸಿ, ಶಿಕ್ಷಕ ಬಾಲಕೃಷ್ಣ ವಂದಿಸಿದರು. ಶಿಕ್ಷಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

