ಬಂಟ್ವಾಳ: ಬಿ.ಮೂಡ ಗ್ರಾಮದ ತಲಪಾಡಿಯಲ್ಲಿರುವ ವಿವಾದಿತ ಮಫತ್‌ಲಾಲ್ ಲೇಔಟ್ ಮಂಜೂರಾದ ನಕ್ಷೆಯಲ್ಲಿ ಕಾಣಿಸಿದಂತೆ ಪೂರ್ತಿ ೧೨ ಎಕ್ರೆ ಸ್ಥಳವನ್ನು  ಸರ್ವೆ ನಡೆಸಿ ಮುಂದಿನ ಸಾಮಾನ್ಯ ಸಭೆಗೆ ವರದಿ ಸಲ್ಲಿಸುವ ನಿರ್ಣಯವನ್ನು  ಮಂಗಳವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ಅಧ್ಯಕ್ಷ.ರಾಮಕೃಷ್ಣ ಆಳ್ವ ಅಧ್ಯಕ್ಷ ವಹಿಸಿದ್ದರು.ಅಜೆಂಡಾ ಮೇಲಿನ ಚರ್ಚೆಯಲ್ಲಿ  ಲೇಔಟ್ ನಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಸ್ಥಳದ ಅತಿಕ್ರಮಣ ವಿಚಾರದ ಕುರಿತು ಪ್ರಸ್ತಾಪಿಸಿದ ಸದಸ್ಯ ಮಹಮ್ಮದ್ ಶರೀಫ್, ಅತಿಕ್ರಮಣ ತೆರವುಗೊಳಿಸುವ ವಿಚಾರ ಎಲ್ಲಿಗೆ ಬಂತು ಎಂದು ಪ್ರಶ್ನಿಸಿದರು.ಈವಿಚಾರದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು.  ಒಂದು ಹಂತದಲ್ಲಿ ಮುಖ್ಯಾಧಿಕಾರಿ ಸುಧಾಕರ್ ಅವರು ಪುರಸಭೆಯಲ್ಲಿ ಈ ಸಂಬಂಧ ದಾಖಲೆಯೇ ಇಲ್ಲ ಎಂದು ಹೇಳಿದಾಗ ಆಕ್ರೋಶಗೊಂಡ ಸದಸ್ಯ ಗೋವಿಂದ ಪ್ರಭು ಒಮ್ಮೆಯಾದರೂ ದಾಖಲೆ ರೂಂ ಗೆ ಕಾಲಿಟ್ಟಿದ್ದೀರಾ ? ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ದೇವದಾಸ ಶೆಟ್ಟೆ ಮಂಗಳೂರು ನಗರ ಯೋಜನಾ ಪ್ರಾಧಿಕಾರದಿಂದಾದರೂ ತರಿಸಬಹುದಿತ್ತು.ಇಲ್ಲವೇ ಕಂದಾಯ ಇಲಾಖೆಯಿಂದ ಪಡೆಯಬಹುದಿತ್ತು ಹಾಗಾಗಿ ಈಅನುಮಾನ ಉಂಟಾಗಿದೆ ಎಂದರು.  ಅದರಲ್ಲಿ ಪುರಸಭೆಗೆ ಸಂಬಂಧಿಸಿದ ಜಾಗವೇ ಇಲ್ಲ ಎಂದರೆ ಏನರ್ಥ ಎಂದು  ಶರೀಫ್ ಪ್ರಶ್ನಿಸಿದರು.  ಒಟ್ಟಾರೆಯಾಗಿ ೧.೨೮ ಎಕ್ರೆ ಜಾಗವನ್ನು ಪರಂಬೋಕು ಎಂದು ವಂಚಿಸಿ ಪುರಸಭೆಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯಾಧಿಕಾರಿ ಸುಧಾಕರ್ ಸಮಜಾಯಿಸಿ ನೀಡಿದರು. ಇದು ಹೇಗೆ ಸಾಧ್ಯ ಎಂದು ಸದಾಶಿವ ಬಂಗೇರ ಪ್ರಶ್ನಿಸಿದರು.ಈ ಕುರಿತು ನಾನು ೨೦೧೬ರ ಜೂನ್ ೬ಕ್ಕೆ ಕೊಟ್ಟ ದೂರಿಗೆ ಇದುವರೆಗೂ ಉತ್ತರ ಲಭಿಸಿಲ್ಲ. ಸುಳ್ಲು ದಾಖಲೆ ನೀಡಿರುವ ಅಂದಿನ ಅಧಿಕಾರಿಗಳ ಬಗ್ಗೆ ತನಿಖಾ ಹಂತದಲ್ಲಿದೆ. ಅದಕ್ಕೂ ,ಇದಕ್ಕೂ ಸಂಬಂಧವಿಲ್ಲ ಹಾಗಾಗಿ ಪೂರ್ತಿ ಸ್ಥಳ ಸರ್ವೆ ನಡೆಸುವಂತೆ ದೇವದಾಸ ಶೆಟ್ಸಿ ಸಲಹೆ ನೀಡಿದರು. ಖಾಸಗಿಯಾಗಿ ಯಾರಾದರೂ ದೂರು ಕೊಟ್ಟರೆ ಕೂಡಲೇ ಪೊಲೀಸರೊಂದಿಗೆ ಅಧಿಕಾರಿಗಳು ಆಗಮಿಸಿ ತೆರವುಗೊಳಿಸುತ್ತಾರೆ. ಆದರೆ ಇಲ್ಲಿ ಜಾಗ ಅತಿಕ್ರಮಣ ಕುರಿತು ನೀಡಿದ ದೂರಿಗೂ ಬೆಲೆ ಇಲ್ಲದಂತಾಗುತ್ತದೆ ಎಂದು ಶರೀಫ್ ಅಸಮಾಧಾನ ವ್ಯಕ್ತಪಡಿಸಿದರು.30btl-Purasabhe
* ಆಡಳಿತ ಸದಸ್ಯ ಗರಂ:ಧರಣಿ ಎಚ್ಚರಿಕೆ
ಖಾಸಗಿ ಲೇಔಟ್ ನಲ್ಲಿ ಪುರಸಭೆ ಜಾಗ ಅತಿಕ್ರಮಣ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದ್ದಾಗಲೇ ಆಡಳಿತ ಪಕ್ಷದ ಸದಸ್ಯ ವಾಸು ಪೂಜಾರಿ ತಟ್ಟನೆ ಎದ್ದು ನಿಂತು, ಗರಂ ಆಗಿ ಪುರಸಭಾ ವ್ಯಾಪ್ತಿಯಲ್ಲಿ ಸರಕಾರಿ ಜಾಗ ಅತಿಕ್ರಮಣವಾಗುತ್ತಿದೆ ಈ ಬಗ್ಗೆ ಪುರಸಭೆ ಏನೂ ಕ್ರಮ ಕೈಗೊಂಡಿದ್ದೀರಿ ? ಮೂರುವರೇ ವರ್ಷದಲ್ಲಿ ನಿವೇಶನ ರಹಿತರಿಗೆ ಮೂರು ಸೆಂಟ್ಸ್ ನಿವೇಶನ ಕೊಡಲು ನಮಗೆ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಮುಂದಿನ ಒಂದು ತಿಂಗಳ ಒಳಗೆ ನಿವೇಶನ ಇಲ್ಲದವರಿಗೆ ನಿವೇಶನ ,ಹಕ್ಕುಪತ್ರ ಸಿಗದವರಿಗೆ ಹಕ್ಕುಪತ್ರ ಕೊಡದಿದ್ದರೆ ಫಲಾನುಭವಿಗಳನ್ನು ಸೇರಿಸಿ ಸಭೆಯಲ್ಲೆ ಧರಣಿ ನಡೆಸುವ ಎಚ್ಚರಿಕೆ ನೀಡಿದರು. ಈ ಬಗ್ಗೆ ಕ್ರಮಕೈಗೊಳ್ಳವ ಭರವಸೆ ಅಧಿಕಾರಿಗಳಿಂದ ವ್ಯಕ್ತವಾದರೆ ,ಮಫತ್ಲಾಲ್ ಲೇಔಟ್ ನ್ನು ಪೂರ್ತಿ ಸರ್ವೇ ನಡೆಸಲು ನಿರ್ಧರಿಸುವ ಮೂಲಕ ಚರ್ಚೆಗೆ ತೆರೆ ಎಳೆಯಲಾಯಿತು.
* ರೆಕಾರ್ಡ್ ಇಡಲು ಎಲ್ಲಿದೆ ಜಾಗ:
ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದ ಹತ್ತಿರ ಇರುವ ಪುರಸಭೆ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ೧ನೇ ಅಂತಸ್ತು ನಿರ್ಮಿಸಿಕೊಟ್ಟು, ಬಂಟ್ವಾಳ ಯೋಜನಾ ಪ್ರಾಧಿಕಾರ ಕಚೇರಿ ನಡೆಸಲು ಅವಕಾಶ ಕೋರಿ ಯೋಜನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಮನವಿ ಯನ್ನು ಸಭೆಯಲ್ಲಿ ಮಂಡಿಸಲಾಯಿತು. ಇದಕ್ಕೆ ಆಕ್ಷೇಪಿಸಿದ ಸದಸ್ಯ ಪ್ರವೀಣ್, ಮೊದಲು ರೆಕಾರ್ಡ್ ರೂಮ್‌ಗೆ ಸೌಲಭ್ಯ ಕಲ್ಪಿಸಿ, ಬಳಿಕ ಯೋಜನಾ ಪ್ರಾಧಿಕಾರ ಕುರಿತು ಗಮನಹರಿಸಿ ಎಂದು ಸಲಹೆ ನೀಡಿದರು. ೧೫೦ ವರ್ಷಗಳ ಹಿಂದಿನ ಇತಿಹಾಸ ಹೇಳುವ ದಾಖಲೆಗಳು ಇಲ್ಲಿವೆ. ಅವು ಹಾಳಾಗುತ್ತಿದೆ ಎಂದು ಸಭೆಯ ಗಮನ ಸೆಳೆದರು .ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ವಾಸು ಪೂಜಾರಿ,  ಶರೀಫ್ ಸಹಿತ ಹಲವು ಸದಸ್ಯರು ರೇಕಾಡ್೯ ರೂಂ ಬಗ್ಗೆ ಕ್ರಮಕ್ಕೆಆಗ್ರಹಿಸಿದರು.
ಈ ಹಂತದಲ್ಲಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮತ್ತು ಗೋವಿಂದ ಪ್ರಭು ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ನಕ್ಷೆ ಪ್ರಕಾರ ಈಗಿರುವ ಪ್ರಾಧಿಕಾರ ಕಚೇರಿಯೇ ರೆಕಾರ್ಡ್ ರೂಮ್ ಆಗಬೇಕಿತ್ತು ಎಂದು ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಸಮಜಾಯಿಷಿ ನೀಡಿದರು.
* ಒಂದು ಕಣ್ಣಿಗೆ ಬೆಣ್ಣೆ…
ಬಂಟ್ವಾಳ ಪುರಸಭೆಯಲ್ಲಿ ಹೊರರಗುತ್ತಿಗೆ ನೌಕರರು ಮತ್ತು ದಿನಗೂಲಿ ಆಧಾರದಲ್ಲಿ ಸೇರಿದವರ ವೇತನದಲ್ಲಿ ತಾರತಮ್ಯ ಇದೆ. ಇದು ಸರಿಯಲ್ಲ. ಎಂದು ಸದಸ್ಯ ಬಿ. ಪ್ರವೀಣ್ ಹೇಳಿದರು. ಇದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಪುರಸಭೆ ಆಡಳಿತ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಗೋವಿಂದ ಪ್ರಭು ಆಕ್ಷೇಪಿಸಿದರು. ದಿನಗೂಲಿ ನೌಕರರಿಗೂ ಸರಿಯಾದ ಹುದ್ದೆ ತೋರಿಸಿ ವೇತನ ಹೆಚ್ಚಿಸಬೇಕೇಂದು ಪ್ರವೀಣ್ ಸಲಹೆ ನೀಡಿದರೆ ,ಈ ತಿಂಗಳಿನಿಂದಲೇ ಎಸ್ಆರ್ ದರದಂತೆ ವೇತನ ಪಾವತಿಸಬೇಕೆಂದು ಸದಸ್ಯ ಗೋವಿಂದಪ್ರಭು ಪಟ್ಟು ಹಿಡಿದರು.ಸಭೆ ಇದಕ್ಕೆ ಸಮ್ಮತಿ ಸೂಚಿಸಿತು.
* ಕಸ ;ವಿಶೇಷ ಸಭೆ
ತ್ಯಾಜ್ಯ ತೆಗೆದುಕೊಂಡು ಹೋಗಲು ಯಾರೂ ಗು ತ್ತಿಗೆದಾರರು ಬರುತ್ತಿಲ್ಲ. ಕೆಲ ವಾರ್ಡ್‌ಗಳಲ್ಲಷ್ಟೇ ವಿಲೇವಾರಿ ಆಗುತ್ತಿದೆ. ಟೆಂಡರ್ ಕರೆದರೂ ಗುತ್ತಿಗೆ ವಹಿಸಿಕೊಳ್ಳಲು ಬರುವುದಿಲ್ಲ ಎಂದು ಆರೋಗ್ಯಾಧಿಕಾರಿ ಪ್ರಸಾದ್ ಹೇಳಿದರೆ ಎರಡುಬಾರಿ ಟೆಂಡರ್ ಕರೆಯಲಾಗಿದೆ.ಯಾರೊಬ್ಬರೂ ಗುತ್ತಿಗೆದಾರರು ಮುಂದೆ ಬಂದಿಲ್ಲ ಎಂದು ಇಂಜಿನಿಯರ್ ಡಿಮೆಲ್ಲೊ ಸಭೆಯ ಗಮನ ಸೆಳೆದರು.  ತರಿಗೆಯಲ್ಲೆ ಕಸದ ಶುಲ್ಕ ವಿಧಿಸುವ ಸಹಿತ ವಿವಿಧ ಮಾರ್ಗೊಪಾಯಗಳ ಕುರಿತು ಚರ್ಚೆ ನಡೆಯಿತು.ಕೊನೆಗೆ ಈವಿಚಾರದಲ್ಲಿ ಶೀಘ್ರವೇ ವಿಶೇಷ ಸಭೆ ಕರೆಯಲು ನಿರ್ಧರಿಸಲಾಯಿತು.ಬೆಂಕಿ ಹಚ್ಚುವುದು ಬಾಕಿ ;  ಲಾರಿಯೊಂದು ತ್ಯಾಜ್ಯ ಹೇರಿಕೊಂಡೆ ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರ ಬಳಿ ಇರುತ್ತದೆ. ಅದರಿಂದ ಪರಿಸರದಲ್ಲಿ ದುರ್ವಾಸನೆ ಬರುತ್ತಿದೆ ಎಂದ ಸದಸ್ಯ ದೇವದಾಸ ಶೆಟ್ಟಿ ಇದಕ್ಕೇನು ವ್ಯವಸ್ಥೆ ಎಂದು ಸಭೆಯ ಗಮನಸೆಳೆದಾಗ ಧ್ವನಿಗೂಡಿಸಿದ ಸದಸ್ಯ ಮಹಮ್ಮದ್ ಇಕ್ಬಾಲ್ ತಾನು ಸಾಕಷ್ಟು ಬಾರಿ ಪುರಸಭೆಯಾದಿಕಾರಿಗಳು,ಆಡಳಿತ ವರ್ಗಕ್ಕೆ ದೂರು ಕೊಟ್ಟಿದ್ದೆನೆ ಈಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ ಇನ್ನು ಹಾಗೆ ಇದ್ದರೆ ಸ್ಥಳೀಯರು ಲಾರಿಗೆ ಬೆಂಕಿ ಹಚ್ಚಿದರೆ ನಾನು ಜವಬ್ದಾರನಲ್ಲ ಎಂದರು.  ಈ ಸಂದರ್ಭ ಕಂಚಿನಡ್ಕಪದವು ತ್ಯಾಜ್ಯ ವಿಲೇವಾರಿ ಘಟಕದ ಕತೆ ಏನಾಯಿತು ಎಂದು ಇಕ್ಬಾಲ್ ಪ್ರಶ್ನಿಸಿದರು. ಅದಿನ್ನೂ ಅಂತಿಮ ಹಂತದ ಪ್ರಕ್ರಿಯೆಯಲ್ಲಿದೆ ಎಂದು ಅಧ್ಯಕ್ಷ ಆಳ್ವ ತಿಳಿಸಿದರೆ.ಸ್ಥಳೀಯ ಶಾಸಕರ ಜೊತೆಯ ಚರ್ಚೆ ನಡೆಸಲಾಗಿದ್ದು,ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸದ್ದಾರೆ.ಎಂದು ಮಿಖ್ಯಾಧಿಕಾರಿ ತಿಳಿಸಿದರು.ಈಗಾಗಲೇ ಕೋಟ್ಯಾಂತರ ರೂ.ಖರ್ಚುಮಾಡಲಾಗಿದೆ.ಇದಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ ಸು.ಕೋ.ನ ಆದೇಶದಂತೆ ತ್ಯಾಜ್ಯ ವಿಲೇವಾರಿ ಘಟಕ ಅನಿವಾರ್ಯ ಎಂದು ಸದಾಶಿವ ಬಂಗೇರ ತಿಳಿಸಿದರು.
ಕೈಕುಂಜೆಯ  ವಾರ್ಡ್‌ನಲ್ಲಿ ಪುರಸಭೆ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಅವರು ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸದಸ್ಯೆ ಸುಗುಣಾ ಕಿಣಿ ಆಕ್ಷೇಪಿಸಿದರು. ಈ ಸಂದರ್ಭ ಸುದೀರ್ಘ ವಾದ, ವಿವಾದಗಳು ನಡೆಯಿತು. ಹಣ ಇಲ್ಲ:   ಪುರಸಭೆ ನಿಧಿಯಿಂದ ಅಭಿವ್ರದ್ದಿ ಕಾಮಗಾರಿ ನಿರ್ವಹಿಸಲು ಪ್ರತಿ ಸದಸ್ಯರ ವಾರ್ಡಿಗೆ ೨ ಲ.ರೂ.ಅನುದಾನ ಮಂಜೂರುಗೊಳಿಸಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.ಈವೇಳೆ ಇಂಜಿನಿಯರ್ ಡಿಮೆಲ್ಲೊ ಅವರು ಅನುದಾನ ನೀಡಲು ಹಣ ಇಲ್ಲ ಎಂದು ಹೇಲಿದ್ದು ಸದಸ್ಯರನ್ನು ಕೆರಳಿಸಿತು.ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಏನು ಕ್ರಮಕೈಗೊಳ್ಳಲಾಗಿದೆ.ನಿಋಇನ ಕಟ್ಟಡ ಪರವಾನಿಗೆ ನವೀಕರಣ,ತರಿಗೆ ವಸೂಲಿಯಲ್ಲಿ ಎಷ್ಟು ಪ್ರಗತಿಯಾಗಿದೆ ಇನ್ನೂ ಕೂಡ ಹಲವು ಅಂಗಡಿದಾರರು ತೆರಿಗೆ ಪಾವತಿಸಿಲ್ಲ,ಪರವಾನಿಗೆ ನವೀಕರಣ ಗೊಳಿಸಿಲ್ಲ ಎಂದು ಸದಸ್ಯ ಸದಾಶಿವ ಬಂಗೇರ ಇಂಜಿನಿಯರನ್ನು ತರಾಟೆಗೆ ತೆಗೆದು ಕೊಂಡರೆ,ನೀವು ಇಂಜಿನಿಯರೋ ಅಲ್ಲ ಅಕೌಂಟೆಂಟಾ ಎಂದು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು.ಈವೇಳೆ ಡೊಮೆನಿಕ್ ಡಿಮೆಲ್ಲೊ ಅವರು 2003ರ ಹಳೆ‌ಕಥೆ‌ಯನ್ನು ಸಭೆಯಲ್ಲಿ ತೇಲಿ ಬಿಡುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.ನಿಮ್ಮ ಕಥೆ ಬೇರೆಯೇ ಇದೆ ಈಗ ಹೇಳಿದಾಗೆ ಅಲ್ಲ ಎಂದು ದೇವದಾಸ ಶೆಟ್ಟಿ ಕಿಚಾಯಿಸಿದರು.ಈಗಾಗಲೇ ಅಕ್ರಮ ನೀರಿನ ಸಂಪರ್ಕವನ್ನು ಸಕ್ರಮಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಆಮೂಲಕ ಆದಾಯ ಹೆಚ್ಚಿಸಲು ಮುಂದಾಗಿದೆ ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.ಪ್ರತಿಯೊಂದಕ್ಕೂ ಅನುದಾನ ಇಲ್ಲ ಎಂದು ಸಬೂಬು ಹೇಳುವುದು ಎಷ್ಟು ಸರಿ ಎಂದು ಸದಸ್ಯೆ ಚಂಚಲಾಕ್ಕಿ ಅಸಮಧಾನ ತೋಡಿಕೊಂಡರು.ಕೊನೆಗೆ ಎಲ್ಲಾ ಸದಸ್ಯರ ವಾರ್ಡಿನ ಅಭಿವ್ರದ್ದಿಗೆ ತಲಾ ೨ ಲ.ರೂ.ಹಂಚಿಕೆ ಮಾಡಲು ನಿರ್ಣಯಿಸಲಾಯಿತು.ಅಧ್ಯಕ್ಷ ರಾಮಕ್ರಷ್ಣ ಆಳ್ವ ಕಲಾಪ ನಡೆಸಿದರು.ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಉಪಸ್ಥಿತರಿದ್ದರು.ಸಿಬ್ಬಂದಿ ರಜಾಕ್ ಅಜೆಂಡಾವಚಿಸಿದರು.ಸದಸ್ಯರಾದ ಬಿ.ಮೋಹನ್,ಗಂಗಾಧರ,ಜಗದೀಶ ಕುಂದರ್, ವಸಂತಿ ಚಂದಪ್ಪ,ಯಾಸ್ಮೀನ್, ಮೊನೀಶ್ ಆಲಿ,ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

By Suddi9

Leave a Reply

Your email address will not be published. Required fields are marked *