ಬಂಟ್ವಾಳ: ಯಾವೋದೋ ಹೊರ ರಾಜ್ಯಗಳಲ್ಲಿ ನಡೆಯುತ್ತಿದ್ದ ದುಷ್ಕøತ್ಯಗಳು ಇಂದು ನಮ್ಮ ನೆರೆಹೊರೆಯಲ್ಲಿಯೇ ನಡೆಯುತ್ತಿದೆ, ಆದರೂ ನಾವೂ ನಿದ್ರಾ ಸ್ಥಿತಿಯಲ್ಲಿದ್ದೇವೆ. ಭಯೋತ್ಪಾದನೆ, ಡ್ರಗ್ಸ್ ಮಾಫಿಯಾ, ಗೋ ಕಳ್ಳತನ ಮೊದಲಾದ ಆಕ್ರಮಣಗಳಿಂದ ರಕ್ಷಿಸಿ ಕೊಳ್ಳಲು ಹಿಂದೂ ಮಾಜ ಜಾಗೃತಗೊಳ್ಳಬೇಕಾದ ಕಾಲ ಘಟ್ಟದಲ್ಲಿದೆ ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಹಿಂದೂ ಜಾಗರಣ ವೇದಿಕೆ ಶ್ರೀ ರಾಮ ಘಟಕ ಬೆಂಜನಪದವು ಇದರ ವತಿಯಿಂದ ಬೆಂಜನಪದವು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಬೃಹತ್ ಹಿಂದೂ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ನಮ್ಮ ರಕ್ಷಣೆ ನಾವು ಮಾಡಿಕೊಳ್ಳಬೆಕಾದರೆ ಮೊದಲು ಒಗ್ಗಟ್ಟಾಗಬೇಕು. ಈ ದೇಶದ ಅಂತಃ ಸತ್ವವನ್ನು ಕಾಯುವ ಅಧಿಕಾರಿಗಳು ಬೇಕು ಎಂದ ಅವರು ಇಂತಹ ಕಾರ್ಯಕ್ರಮಗಳು ಪ್ರತಿ ಮನೆಮನೆಯಲ್ಲೂ ನಡೆಯ ಬೇಕು ಎಂದು ತಿಳಿಸಿದರು.

BTW_MAY21_3
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಕೆ.ಟಿ. ಉಲ್ಲಾಸ್ ದಿಕ್ಸೂಚಿ ಭಾಷಣ ಮಾಡಿ ಭಯೋತ್ಪಾದನೆ ಜಗತ್ತಿನ ಬೆಳವಣಿಗೆಗೆ ಕಂಠಕವಾಗಿದೆ. ಜಿಹಾದಿ ಭಯೋತ್ಪಾದಕರಿಂದ ಈ ಸಮಾಜದಲ್ಲಿ ಭಯದ ವಾತವರಣ ನಿರ್ಮಾಣಗೊಂಡಿದೆ. ಇಲ್ಲಿನ ಮುಸಾಲ್ಮಾನರನ್ನು ದೇಶದ ವಿರುದ್ದ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎಂದರು. ಈ ದೇಶವನ್ನು ಇಸ್ಲಾಮೀಕರಣ ಗೊಳಿಸಲು ಹಿಂದೂ ನಾಯಕರ ಹತ್ಯೆ ನಡೆಸಲಾಗುತ್ತಿದೆ. ಈಹತ್ಯೆಯ ಹಿಂದೆ ಪಿಎಫ್‍ಐ ಸಂಘಟನೆ ಕೆಲಸ ಮಾಡುತ್ತಿರುವುದು ಬಹಿರಂಗ ಗೊಂಡಿದೆ. ಈ ಸಂಘಟನೆಗೆ ಭಯೋತ್ಪಾದಕ ಸಂಘಟನೆಗಳ ಸಂಪರ್ಕ ಇದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಹಿಂದೂ ಸಂಘಟನೆಗಳ ಪ್ರಮುಖರಾದ ಅರುಣ್ ಕುಮಾರ್ ಶೆಟ್ಟಿ ನುಳಿಯಾಲುಗುತ್ತು, ಕಿಶೋರ್ ಕುಮಾರ್, ಕೊಡ್ಮಾನ್ ಕಾಂತಪ್ಪ ಶೆಟ್ಟಿ, ರವಿರಾಜ್ ಬಿ.ಸಿ.ರೋಡು, ರತ್ನಾಕರ ಶೆಟ್ಟಿ ಕಲ್ಲಡ್ಕ, ಚಂದ್ರ ಕಲಾಯಿ, ಉಮೇಶ್ ಆಲ್ಯಾನ್, ಪ್ರಶಾಂತ್ ಕೆಂಪುಗುಡ್ಡೆ, ಜಯಪ್ರಕಾಶ್, ಪ್ರವೀಣ್ ಹಾಜರಿದ್ದರು.
ಶರತ್ ಬೆಂಜನಪದವು ಸ್ವಾಗತಿಸಿ, ರಾಧಕೃಷ್ಣ ಅಡ್ಯಂತ್ತಾಯ ಪ್ರಾಸತವಿಕವಾಗಿ ಮಾತನಾಡಿದರು. ಸುರೇಶ್ ನಾವೂರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *