ಉಡುಪಿ: ಕರ್ನಾಟಕ ರಾಜ್ಯ ಸಾಂಸ್ಕೃತಿಕ ಅಕಾಡೆಮಿ,ವಿಶ್ವ ವೀರ ಶೈವ ಪ್ರತಿಷ್ಟಾನ ಬೆಂಗಳೂರು ಇದರ ವತಿಯಿಂದ ಮೇ.18 ರಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಯನ ಸಭಾ ಭವನದಲ್ಲಿ ನಡೆದ ಜನಪದೋತ್ಸವ ಕಾರ್ಯಕ್ರಮದಲ್ಲಿ ಉಡುಪಿಯ ಯುವ ಸಮಾಜಿಕ ಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಸಮಾಜ ಸೇವಾ ವಿಭಾಗದಲ್ಲಿ ರಾಜ್ಯಮಟ್ಟದ ಬಸವ ಸೇವಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಚಿವ ರುದ್ರಪ್ಪ ಲಾಮಣಿ, ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿ,ಕೇಂದ್ರ ಮಾಜಿ ಸಚಿವ ಎಂ.ವಿ ರಾಜಶೇಖರನ್,ಚಲನಚಿತ್ರ ನಿದೇಶಕರಾದ ರಾಮಮೂರ್ತಿ,ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್,ಚಿತ್ರನಟಿ ಪವಿತ್ರಾ ಜೆ,ಎಂ ರಾಜು ಮುಂತಾದವರು ಭಾಗವಹಿಸಿದ್ದರು.
