ಬಂಟ್ವಾಳ: ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ಪೈಪ್‍ಲೈನ್‍ಗಳು ಒಡೆದು ಹೋಗಿರುವ ಪರಿಣಾಮ ಬಿ.ಸಿ.ರೋಡ್ ಆಸುಪಾಸಿನಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ.
ಬಿ.ಸಿ.ರೋಡ್ ರಾಜ ರಸ್ತೆಯ ಬದಿಯಲ್ಲಿ ಹೊಸದಾಗಿ ಚರಂಡಿ ನಿರ್ಮಾಣಕ್ಕೆ ಜೆಸಿಬಿ ಯಂತ್ರದ ಮೂಲಕ ಹೊಂಡ ಅಗೆಯಲಾಗಿದ್ದು ಅಗೆದ ಜಾಗದಲ್ಲಿ ಹಾದು ಹೋಗಿದ್ದ ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಪೈಪ್‍ಲೈನ್‍ಗಳು ಒಡೆದು ಹೋಗಿದೆ. ಇದರ ಪರಿಣಾಮ ಬಿ.ಸಿ.ರೋಡಿನ ಕೆಲವು ಮಳಿಗೆಗಳಿಗೆ ಸಹಿತ ಆಸುಪಾಸಿನ ಸಚತಿ ಸಮುಚ್ಚಯ ಹಾಗೂ ಮನೆಗಳಿಗೆ ಒಂದು ವಾರದಿಂದ ಕುಡಿಯುವ ನೀರು ಪೂರೈಕೆಯಾಗುವುದು ನಿಂತು ಹೋಗಿದೆ.

DSC_2094
ಕುಡಿಯುವ ನೀರು ಸರಬರಾಜು ನಿಂತಿರುವ ಬಗ್ಗೆ ಇಲ್ಲಿನ ನಿವಾಸಿಗಳು ಬಂಟ್ವಾಳ ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಸುಧಾಕರ್ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು. ಕೂಡಲೇ ಪೈಪ್‍ಲೈನ್‍ಗಳನ್ನು ದುರಸ್ಥಿಗೊಳಿಸಿ ನೀರು ಸರಬರಾಜು ಪುನರಾರಂಭಿಸುದಾಗಿ ತೆರಳಿದ್ದ ನಾಗರಿಕರಿಗೆ ಮುಖ್ಯಾಧಿಕಾರಿ ಭರಸವೆ ನೀಡಿದ್ದಾರೆ. ಆದರೆ ವಾರ ಕಳೆದರೂ ಪೈಪ್‍ಗಳನ್ನು ದುರಸ್ಥಿಗೊಳಿಸದ ಹಿನ್ನೆಲೆಯಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಪೈಪ್‍ಲೈನ್ ನೀರನ್ನೇ ಅವಲಂಭಿಸಿರುವ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಪುರಸಭೆಗೆ ಮನವಿ ಮಾಡಿಯೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ. ಜಗದೀಶ್ ಅವರನ್ನು ಭೇಟಿ ಮೌಕಿಕ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪುರಸಭೆ ಮುಖ್ಯಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಕೇಳಿದ್ದು ಶೀರ್ಘವೇ ಪೈಪ್‍ಲೈನ್ ದುರಸ್ಥಿಗೊಳಿಸಿದ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಅವರು ಆದೇಶ ಮಾಡಿದ್ದಾರೆ ಎನ್ನಲಾಗಿದೆ.

By Suddi9

Leave a Reply

Your email address will not be published. Required fields are marked *