ಬಂಟ್ವಾಳ:ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ರಾ.ಹೆ.ಪ್ರಾ.ನಡೆಸುವ ಕಾಂಕ್ರೇಟ್ ಚರಂಡಿ ಕಾಮಗಾರಿಯಿಂದಾಗಿ ಈಭಾಗದ ಅಂಗಡಿ ಮುಂಗಟ್ಟುದಾರರು,ಜನಸಾಮಾನ್ಯರು ನರಕಯಾತನೆ ಪಡುವಂತಾಗಿದ್ದು,ಬುಧವಾರ ರಾತ್ರಿಯಂತು  ನೀರಿನ ಪೈಪ್ ಒಡೆದು ನೀರು ಚರಂಡಿಪಾಲಾದ ಪ್ರಸಂಗವೂ ನಡೆಯಿತು. ಇಲ್ಲಿ ಕೊಳಚೆ ನೀರು ರಸ್ತೆಯಲ್ಲೆ ಹರಿಯುತ್ತಿದ್ದ ಹಿನ್ನಲೆಯಲ್ಲಿ ರಾ.ಹೆ.ಪ್ರಾ.ಕೊನೆಗೂ ಕಾಂಕ್ರೇಟ್ ಚರಂಡಿ ನಿರ್ಮಾಣಕ್ಕೆ ಮುಂದಾಗಿ ಕಾಮಗಾರಿಯನ್ನು ಆರಂಭಿಸಿತ್ತು. ಮೇಲ್ಸೇತುವೆಯಿಂದ ಮಾಒದಲೇ ಅಗಲ ಕಿರಿದಾದ ಹೆದ್ದಾರಿಯ ಪಕ್ಕದಲ್ಲೆ ಕಾಂಕ್ರೇಟ್ ಚರಂಡಿಗಾಗಿ ಅಗೆದ ಪರಿಣಾಮ ಅಡಿಯಲ್ಲಿದ್ದ ಪುರಸಭೆಯ ಕುಡಿಯುವ ನೀರಿನ ಪೈಪ್ ಒಡೆದು ನೀರು ಚರಂಡಿಪಾಲಾಗಿತ್ತು.P_20170518_150608

ಕಾಮಗಾರಿ ಸ್ಥಗಿತಕ್ಕೆ ಸೂಚನೆ ; ಸ್ಥಳಿಯರ ದೂರಿನಂತೆ ಗುರುವಾರ ಪರಸಭೆಯ ಮುಖ್ಯಾಧಿಕಾರಿ ಸುಧಾಕರ್,ಇಂಜಿನಿಯರ್ ಡೊಮೇನಿಕ್ ಡಿಮೆಲ್ಲೋ ,ಸದಸ್ಯರಾದ ಗೋವಿಂದಪ್ರಭು, ಭಾಸ್ಕರ ಟೈಲರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಹೆದ್ದಾರಿ ಪಕ್ಕವೇ ಅಗೆದು ಚರಂಡಿ ನಿಮಿ೮ಸಿರುವ ಕ್ರಮಕ್ಕೆ ಸದಸ್ಯ ಗೋವಿಂದಪ್ರಭು ರಾ.ಹೆ.ಪ್ರಾ.ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡರು.ಹಾಗೆಯೇ ಸ್ಥಳಕ್ಕೆ ಬಂದು ಚರ್ಚೆ ನಡೆಸಿದ ಬಳಿಕವಷ್ಟೆ ಕಾಮಗಾರಿ ಮುಂದುವರಿಸಬೇಕು ಅದುವರೆಗೆ ಸ್ಥಗಿತಗೊಳಿಸುವಂತೆ ಮುಖ್ಯಾಧಿಕಾರಿ ಸುಧಾಕರ್ ಸೂಚಸಿದರು.ಚತುಷ್ಪಥ ರಸ್ತೆ ಕಾಮಗಾರಿ ಆರಂಭಕ್ಕೆ ಮುನ್ನ ರಸ್ತೆಯ ಇಕ್ಕೆಲೆಗಳಲ್ಲಿ ಭೂಸ್ವಾಧೀನಪಡಿಸಿದ್ದ ರಾ.ಹೆ.ಪ್ರಾ.ಇಲಾಖೆ ಕೆಲ ಅಂಗಡಿ ಮುಂಗಟ್ಟುದಾರಿಗೆ ಪರಿಹಾರವನ್ನು ನೀಡಿತ್ತು.ಆದರೆ ಕೆಲ ಅಂಗಡಿ ಮುಂಗಟ್ಟುದಾರರು  ಇನ್ನೂತೆರವು ಗೊಳಿಸದಿದ್ದು,ಇಲಾಖೆ ಭೂಸ್ವಧೀನ ಪಡಿಸಿದಲ್ಲಿ ಚರಂಡಿಗಾಗಿ ಅಗೆಯಬೇಕಾದ ಬದಲು ನೇರ ಹೆದ್ದಾರಿ ಪಕ್ಕ ಕಾಂಕ್ರೇಟ್ ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಸಮಸ್ಯೆ ಉದ್ಬವಿಸಿದೆ.ಹಾಗಾಗಿ ಪೈಪ್ ಒಡೆದು ನೀರು ಪೋಲಾಗುತ್ತಿದೆಎಂಬ ಅಭಿಪ್ರಾಯ ಕೇಳಿಬಂದಿದೆ.ಇದೇ ಕಾರಣಕ್ಕಾಗಿ ಮುಖ್ಯಾಧಿಕಾರಿ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿ ರಾ.ಹೆ.ಪ್ರಾ.ಅಧಿಕಾರಿಯಲ್ಲಿ ಚರ್ಚಿಸಲು ತನ್ನ ಬಳಿ ಕರೆಸಿಕೊಂಡಿದ್ದಾರೆ.ಸಂಜೆಯವರೆಗೆ ಹೆದ್ದಾರಿ ಅಧಿಕಾರಿಗಳು ಭೇಟಿಯಾಗಿಲ್ಲ ಎಂದು ತಿಳಿದು ಬಂದಿದೆ.

By Suddi9

Leave a Reply

Your email address will not be published. Required fields are marked *