ಉಳ್ಳಾಲ:ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ಹಾಗು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಇದರ ಅಧೀನದಲ್ಲಿ ಕಛೇರಿ ಉದ್ಘಾಟನಾ ಸಮಾರಂಭ ಉಳ್ಳಾಲ ಮಾಸ್ತಿಕಟ್ಟೆಯ ಆಝಾದ್ ನಗರದಲ್ಲಿ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಉಲಮಾ ಉಮರಾ ಸಾದಾತುಗಳ ಸಾನಿಧ್ಯದಲ್ಲಿ ನೂತನ ಕಛೇರಿ ಕಟ್ಟಡವನ್ನು ಉದ್ಘಾಟಿಸಿ ಶುಭಾರಂಭ ಮಾಡಿದರು.ಬಳಿಕ ಮೌಲಿದ್ ಕಾರ್ಯಕ್ರಮಕ್ಕೆ ಎಸ್ ವೈ ಎಸ್ ದ.ಕ ಜಿಲ್ಲಾಧ್ಯಕ್ಷರಾದ ಉಸ್ಮಾನ್ ಸಅದಿ ಪಟ್ಟೋರಿ ನೇತ್ರತ್ವ ವಹಿಸಿ ದುವಾ ನೆರವೇರಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ ಸಿ ಎಫ್ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ ಪಿ ಯೂಸುಫ್ ಬೈತಾರ್ ಸಖಾಫಿ ಮುಸ್ಲಿಮನ ಪ್ರತಿಯೊಂದು ಕಾರ್ಯ ಚಟುವಟಿಕೆಗಳು ಇತರರಿಗೆ ಮಾದರಿಯಾಗುವಂತಿರಬೇಕು ಅಂದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ಮಾತನಾಡಿ ಉಮರಾ ನಾಯಕರು ವಿದ್ವಾಂಸರ ಮಾರ್ಗದರ್ಶನದೊಂದಿಗೆ ಕಾರ್ಯ ಪ್ರವ್ರತ್ತರಾದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ ಅಂದರು.
ದ.ಕ ಜಿಲ್ಲಾ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು, ಉಸ್ಮಾನ್ ಸಅದಿ ಪಟ್ಟೋರಿ ಕೆಸಿಎಫ್ ದುಬೈ ಅಲ್ ಅಯ್ನ್ ಅಸ್ಸುಫ್ಫ ಅಮೀರ್ ಹಾಫಿಲ್ ಸಫ್ವಾನ್ ಸಖಾಫಿ ಹಾಗು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಜಮಾಲುದ್ದೀನ್ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗಲ್ಫ್ ಇಶಾರದ ಅಂಗವಾಗಿ ಉಳ್ಳಾಲ ಮತ್ತು ತೊಕ್ಕೋಟು ಸೆಕ್ಟರಿನ ಎರಡು ಬಡ ಕುಟುಂಬಗಳಿಗೆ ವಿತರಿಸಲು ಧನ ಸಹಾಯದ ಮೊತ್ತವನ್ನು ಡಿಪಿ ಬೈತಾರ್ ಸಖಾಫಿ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಹಾಗು ತೊಕ್ಕೋಟು ಸೆಕ್ಟರ್ ರಿಲೀಫ್ ಸರ್ವಿಸ್ ಚೇರಮಾನ್ ಅಲ್ತಾಫ್ ಕುಂಪಲ ರವರಿಗೆ ಹಸ್ತಾಂತರಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಹಾಜಿ ಮುಕ್ಕಚ್ಚೇರಿ, ಕೋಶಾಧಿಕಾರಿ ಇಸಾಕ್ ಬಸ್ತಿಪಡ್ಪು, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಸೆಂಟರ್ ಉಪಾಧ್ಯಕ್ಷ ತ್ವಾಹಿರ್ ಹಾಜಿ, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಕರೀಂ ಹಾಜಿ, ಎಸ್ ವೈ ಎಸ್ ಕೋಡಿ ಬ್ರಾಂಚ್ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ, ಮೇಲಂಗಡಿ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಮೀಡಿಯ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಎಸ್ ವೈ ಎಸ್ ಸಾಂತ್ವನ ವಿಭಾಗ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಸಯ್ಯಿದ್ ಜವಾದ್ ತಂಗಳ್, ಮುಸ್ತಫ ಮಾಸ್ಟರ್, ಇಸ್ಮಾಯಿಲ್ ಮುಕ್ಕಚ್ಚೇರಿ, ಮುಹ್ಸಿನ್ ಬೊಟ್ಟು, ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಇಸ್ಮಾಯಿಲ್ ಮೇಲಂಗಡಿ, ಸೆಂಟರ್ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಸೆಂಟರ್ ಉಪಾಧ್ಯಕ್ಷ ಹೈದರ್ ಮುಕ್ಕಚ್ಚೇರಿ, ಸೆಕ್ಟರ್ ಉಪಾಧ್ಯಕ್ಷರುಗಳಾದ ಮಿಕ್ದಾದ್ ಮುಕ್ಕಚ್ಚೇರಿ, ಸೆಕ್ಟರ್ ಕಾರ್ಯದರ್ಶಿಗಳಾದ ಹಫೀಝ್ ಬೊಟ್ಟು, ಇಕ್ಬಾಲ್ ಒಂಭತ್ತುಕೆರೆ, ಹಂಝ ಸುಂದರಿಭಾಗ್, ಫಾರೂಕ್ ಬೊಟ್ಟು, ಮುಕ್ಕಚ್ಚೇರಿ ಶಾಖಾಧ್ಯಕ್ಷ ಅಹ್ಸನ್, ಹಾಫಿಝ್ ಸುಹೈಲ್, ಮುಝಫ್ಫರ್, ಹಾಶಿಂ ಆಝಾದ್ ನಗರ, ತಶ್ರೀಫ್ ಮೇಲಂಗಡಿ ಹಾಗು ಎಸ್ಸೆಸ್ಸೆಫ್ ಎಸ್ ವೈ ಎಸ್ ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಒಂಭತ್ತುಕೆರೆ ಶಾಖಾ ಉಪಾಧ್ಯಕ್ಷ ಜಾಬಿರ್ ಫಾಳಿಲಿ ನೇತ್ರತ್ವದಲ್ಲಿ ಆತ್ಮೀಯ ಸಂಗಮ ನಡೆಯಿತು. ಸೆಂಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಸ್ವಾಗತಿಸಿದರು. ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ಕಾರ್ಯಕ್ರಮ ನಿರೂಪಿಸಿದರು.
