ವಿಟ್ಲ : 2016-17 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಕೆ 621 ಅಂಕ ಗಳಿಸುವುದರ ಮೂಲಕ ಶಾಲೆಗೆ ಪ್ರಥಮ , ತಾಲೂಕಿಗೆ ದ್ವಿತೀಯ ಹಾಗೂ ರಾಜ್ಯದಲ್ಲಿ ಐದನೇ ಸ್ಥಾನ ಪಡೆದು ಗಮನ ಸೆಳೆದಿದ್ದಾಳೆ. ಪರೀಕ್ಷೆಗೆ ಹಾಜರಾಗಿದ್ದ 55 ವಿದ್ಯಾರ್ಥಿಗಳ ಪೈಕಿ 18 ಮಂದಿ ವಿಶಿಷ್ಟ ಶ್ರೇಣಿ , 32 ಮಂದಿ ಪ್ರಥಮ ಶ್ರೇಣಿ , ಹಾಗೂ 3 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಂಸ್ಥೆಯು ಉತ್ತಮ ಫಲಿತಾಂಶವನ್ನು ಸಾಧಿಸಿದೆ.



