ಮೂಡುಬಿದಿರೆ: ಸಮಾಜ ಕಲ್ಯಾಣ ಇಲಾಖೆಯಿಂದ ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮೀ ಸೇವಾ ಸಂಘದ ಸಮುದಾಯ ಭವನಕ್ಕೆ ಮಂಜೂರಾದ ರೂ.20 ಲಕ್ಷದ ಚೆಕ್ ಅನ್ನು ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಹಸ್ತಾಂತರಿಸಿದರು.

ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್, ಉಪಾಧ್ಯಕ್ಷ ವಾಸು ಪೂಜಾರಿ, ಕೋಶಾಧಿಕಾರಿ ನವೀನ್ ಚಂದ್ರ, ಜೊತೆ ಕಾರ್ಯದರ್ಶಿ ಶಂಕರ್ ಕೋಟ್ಯಾನ್ ಆಡಳಿತ ಮಂಡಳಿ ಸದಸ್ಯ ಸುರೇಶ್ ಕೋಟ್ಯಾನ್, ಚಂದ್ರಹಾಸ್ ಸನಿಲ್, ರವೀಂದ್ರ ಕರ್ಕೇರಾ, ಸುಂದರ್ ಪೂಜಾರಿ, ಸುಶಾಂತ್ ಕರ್ಕೇರಾ, ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಇದ್ದರು.
