ಬಂಟ್ವಾಳ : ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳು ಮತ್ತು ಶ್ರೀ ಮಹಾಮ್ಮಾಯಿ ಸೇವಾ ಟ್ರಸ್ಟ್ ಹಾಗೂ ಶ್ರೀ ಮಹಾಮ್ಮಾಯಿ ಸೇವಾ ಸಮಿತಿ ಬೋಳಂತೂರು ಇದರ ಆಶ್ರಯದಲ್ಲಿ ಶ್ರೀ ಮಹಾಮ್ಮಾಯಿ ಅಮ್ಮನ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮಾರಿ ಪೂಜೆ ಮೇ 11 ಮತ್ತು ಮೇ12ರಂದು ನಡೆಯಲಿದೆ.

ಮೇ 11ರಂದು ಗುರುವಾರ ಬೆಳಗ್ಗೆ 6 ಗಂಟೆಗೆ ಸಾಮೂಹಿಕ ಪ್ರಾರ್ಥನೆ,ಪುಣ್ಯಾಹವಾಚನ ,ಸಪ್ತಶುದ್ಧಿ, ಪ್ರಸಾದಶುದ್ಧಿ,ರಾಕ್ಷೋಘ್ನಹೋಮ,ವಾಸ್ತು ಹೋಮ, ವಾಸ್ತುಪೂಜೆ, ವಾಸ್ತುಬಲಿ, ಪ್ರಕಾರಬಲಿ, ಕಲಶಾಭಿವಾಸ, ಆದಿವಾಸಹೋಮ ಕಾರ್ಯಕ್ರಮಗಳು ನಡೆಯಲಿದೆ.

ಮೇ 12ರಂದು ಶುಕ್ರವಾರ ಬೆಳಗ್ಗೆ 9ಕ್ಕೆ ಗಣಪತಿ ಹೋಮ,ಬಳಿಕ ಪರಮಪೂಜ್ಯ ಶ್ರೀ  ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಇವರ ನೇತೃತ್ವದಲ್ಲಿ ಧಾರ್ಮೀಕ ಸಭೆ ನಡೆಯಲಿದ್ದು,ಬಿ.ಸಿ.ರೋಡು ನ್ಯಾಯವಾದಿ ಪ್ರಸಾದ್ ಕುಮಾರ್ ಬಿ., ಧಾರ್ಮಿಕ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆ,ವಿವಿಧ ಭಜನ ಮಂಡಳಿಗಳಿಂದ ಭಜನೆ, ಸಂಜೆ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಲೆ,ರಾತ್ರಿ 9ಕ್ಕೆ ವಾರ್ಷಿಕ ಮಹಾಪೂಜೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *