ಹೆಸರುಕಿರಣ್ ಎಂ.ಮೆಸ್ಕೆ ಊರು ಗೋವಾ ಪೋಂಡಾಉದ್ಯೋಗ-ಅದ್ಯಯನ ವಯಸ್ಸು ಸುಮಾರು 52 ವರ್ಷ ಬುಡಕಟ್ಟುಜನಾಂಗದವರ ಬಗ್ಗೆ ಅದ್ಯಯನ ನಡೆಸಿ ಅವರ ಸಮಸ್ಯೆಗಳ ಬಗ್ಗೆ ಪರಿಹಾರ ಹಡುಕಲು ಕಳೆದ 24 ವರ್ಷ ನಿರಂತರವಾಗಿ ಬರೆಕಲ್ನಡಿಗೆಯಲ್ಲಿದೇಶ ಸುತ್ತುತ್ತಿರುವ ಈ ಅಪೂರ್ವ ಸಾಧಕ ಮನೆ ಬಿಟ್ಟು 24 ವರ್ಷ ಸಂದಿವೆ.ಜೂನ್ 5 .1992 ಮನೆ ಬಿಟ್ಟಿರುವ ಇವರು ದೇಶದಲ್ಲಿ ಬುಡಕಟ್ಟುಜನರು ವಾಸಿಸುವ ಹಳ್ಳಿ,ಕಾಡುಗಳಿಗೆ ಭೇಟಿ ನೀಡಿ ಜನರ ಮನೆಗಳಲ್ಲಿ ಅಥವಾಕಾಡಿನಲ್ಲಿ 15 ರಿಂದ 3 ತಿಂಗಳ ಕಾಲ ವಾಸ ಮಾಡಿಅವರಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ವರದಿ ತಯಾರಿ ಮಾಡಿಅದನ್ನುಅಯಾಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂಅಭಿನಂದನೀಯ.
ತನ್ನ 24 ವರ್ಷದಅದ್ಯಯನ ಈ ವರ್ಷ ಮುಗಿಯಲಿದ್ದುಅವರಕೊನೆಯಜಿಲ್ಲೆಯಾಗಿಉಡುಪಿಗೆ ಬಂದಿರುವಇವರುಇನ್ನು 3 ತಿಂಗಳು ಇಲ್ಲದ್ದು ನಂತರತನ್ನಊರು ಗೋವಾಕ್ಕೆ ತರಳಲಿದ್ದಾರೆ.ಆ ಬಳಿಕ ತನ್ನಅದ್ಯಯನದ ಬಗ್ಗೆ (ಇಂಡಿಯಾಇನ್ ಮೈ ಐಸ್)ಎಂಬ ಅದ್ಯಯನಗ್ರಂಥ ಬರಯಲಿದ್ದಾರೆ.ಈಗಾಗಲೇಕಲ್ನಡಿಗೆಯಲ್ಲಿ 1.84 ಲಕ್ಷ ಕಿ,ಮಿ ದೂರ ಕ್ರಮಿಸಿರುವ ಇವರುತನ್ನಖರ್ಚಿಗಾಗಿ ಸರ್ಕಾರಿ ಅಧಿಕಾರಿಗಳು ಮತ್ತುಗ್ರಾಮಸ್ಥರು ನೀಡಿದ ಹಣವನ್ನು ನಂಬಿದ್ದಾರೆ.ದೇಶ ಸುತ್ತಿ ನೋಡು ಕೋಶ ಓದಿ ನೋಡುಎಂಬಂತೆಅವರ ಮಾತಿನಲ್ಲಿ ಹೇಳುದಾದರೆ
ಅನೇಕ ರೀತಿಯ ಅನುಭವಗಳನ್ನು ನಾನು ಅನುಭವಿಸಿದ್ದೇನೆ.ಜಾರ್ಖಂಡ್ ನಲ್ಲಿ ನಕ್ಸಲಿಯರು ನನಗೆ ದಾಳಿ ಮಾಡಿದ್ದರುಅವರಿಂದ ಹೇಗೋ ತಪ್ಪಿಸಿ ಬಂದಿದ್ದೇನೆ.ಅದೇರೀತಿ ತಮಿಳುನಾಡಿನ ಕರ್ನೂಲ್ ನಲ್ಲಿರಾತ್ರಿಕಾಡಿನಲ್ಲಿ ಸಂಚರಿಸುವಾಗಕೆಸರು ಹೊಂಡಕ್ಕೆ ಬಿದ್ದು.2 ದಿನ ಕಾಡಿನಲ್ಲಿ ಊಟವಿಲ್ಲದೆ ಕಳೆದಿದ್ದೇನೆ ಅದೇರೀತಿಕಾಡಿನಲ್ಲಿ ಸಂಚರಿಸುವಾಗದೊಡ್ಡ ಪ್ರಪಾತಕ್ಕೆ ಬಿದ್ದು 5 ತಿಂಗಳು ಆಸ್ಪತ್ರೆಯಲ್ಲಿಚಿಕಿತ್ತೆ ಪಡೆದು ಬಂದ್ದೇನೆ ನಾನು ಬದುಕುದೇಇಲ್ಲ ಎಂಬ ಸಂದರ್ಭಒದಗಿ ಬಂದಾಗ ನನ್ನದೈರ್ಯ ನನಗೆ ಬದುಕಿಸಿದೆ ಎಂಬ ಮಾತು ನುಡಿಯುವಾಗಕಣಂಚಿನಲ್ಲಿ ನೀರಿನ ಹನಿಯಿತ್ತು.

DSC00481
ಅವರ ಮಾತನ್ನು ಹೇಳುದಾದರೆ ನನ್ನಅನುಭವದ ಪ್ರಕಾರ ನಮ್ಮದೇಶದಲ್ಲಿಇರುವಷ್ಟು ಬುಡಕಟ್ಟುಜನಾಂಗದವರುಇತರಯಾವದೇಶದಲ್ಲಿಯೂಕಂಡುಬರುದಿಲ್ಲ.ಅವರ ಸಂಸ್ಕತಿಆಚಾರ,ವಿಚಾರ ನಿಜಕ್ಕೂಅಪೂರ್ವವಾದ್ದು,ಆದರೆಅವರ ಹಕ್ಕುಗಳ ಬಗ್ಗೆ ಅವರಿಗೆ ನೀಡಬೇಕಾದ ಸೌಲಭ್ಯಗಳ ಬಗ್ಗೆ ಯಾರೂಕೂಡ ಮಾತಾಡದಿರುವುದುದುರಂತ.ಅವರ ಸಮಸ್ಯೆಗಳ ಬಗ್ಗೆ ಹೇಳದಾದರೆ ಮೇಘಾಲಯದಲ್ಲಿಇರುವ ಬುಡಕ್ಕಟ್ಟುಜನರಾದಕಾಡುಕುರುಬರುಅವರುಇನ್ನೂಕೂಡ ನಗರವನ್ನು ನೋಡಿಲ್ಲ.ಯಾವುದೇರೀತಿಯ ಮೂಲಭೂತ ಸೌಕರ್ಯಅವರಿಗಿಲ್ಲಎಷ್ಟೆಂದರೆ ಪುರುಷರುತಮ್ಮಕ್ಷೌರಕ್ಕಾಗಿಯಾವುದೇ ಬ್ಲೆಡ್‍ಉಪಯೋಗಿಸುದಿಲ್ಲ ಬದಲಾಗಿ ನುಣುಪಾದಕಲ್ಲಿನಿಂದಕ್ಷೌg ಮಾಡುತ್ತಾರೆ.ಅದೇರೀತಿಅವರು ಈಗಲೂ ಕೂಡ ಗುಹೆಗಳಲ್ಲಿ ವಾಸ ಮಾಡುತ್ತಾರೆ.ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಿ ಮಾಂಸತಿನ್ನುತ್ತಾರೆ.ಹಿಮಾಲಯದ ಆಸು ಪಾಸಿನಲ್ಲಿ ವಾಸ ಮಾಡುತ್ತಿರುವಅಘೋರಿಜನಾಂಗದವರು ಹಸಿ ಮಾಂಸತಿಂದುಜೀವನ ಸಾಗಿಸುತ್ತಾರೆ.ಅಂಡಮಾನಿನ ಒಂದು ಧ್ವಿಪದಲ್ಲಿರುವಜನರು ಬಟ್ಟೆಯೇ ಹಾಕುದಿಲ್ಲ ಯಾರಾದರೂ ಬಟ್ಟೆ ಹಾಕಿದವರು ಬಂದರೆಕಲ್ಲಿನಿಂದಜಜ್ಜಿಕೊಲ್ಲುತ್ತಾರೆ.ನಾನು ಕೂಡಅಲ್ಲಿ ಹೋದಾಗ ನನ್ನ ಮೇಲೆ ಅವರು ದಾಳಿ ಮಾಡಿದ ಸಂದರ್ಭದಲ್ಲಿಅವರಿಂದ ತಪ್ಪಿಸಿ ಬಂದೆಎಂದುಅವರುತನ್ನಅನುಭವ ಹಂಚಿಕೊಂಡರು.’
ಹೆಚ್ಚಿನ ಬುಡಕ್ಕಟ್ಟುಜನಾಂಗದಲ್ಲಿ ಹೆಣ್ನಿಗೆ ಹೆಚ್ಚಿನಅಧಿಕಾರಗಂಡಿಗೆಅಧಿಕಾರಇಲ್ಲ ಮದುವೆಯ ಬಳಿಕ ಗಂಡು ಹೆಣ್ನಿನ ಮನೆಯಲ್ಲಿ ವಾಸ ಮಾಡಬೇಕು.ಆದರೆಇವರಲ್ಲಿ ಹೆಣ್ನಿಗೆ ಶಿಕ್ಷಣ ನೀಡುತ್ತಿಲ್ಲ ಬರೇಗಂಡು ಮಕ್ಕಳು ಹೆಚ್ಚೆಂದರೆ 10 ನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಾರೆ.ಮುಖ್ಯವಾಗಿ ಹೆಣ್ನಿಗೂ ಶಿಕ್ಷಣ ನೀಡಬೇಕೆಂದುಅವರುಆಯಾಜಿಲ್ಲೆಯಜಿಲ್ಲಾಧಿಕಾರಿಯವರಿಗೆ ನೀಡುವ ವರದಿಯಲ್ಲಿ ತಿಳಿಸುತ್ತಾರೆ.
ಅವರ ಪ್ರಕಾರ ನಮ್ಮದೇಶದಲ್ಲಿ ಸುಂದರವಾದ ಹಳ್ಲಿಗಳು ಮತ್ತು ಬುಡಕಟ್ಟುಜನರುಕೂಡಉತ್ತಮವಾಗಿರುವರಾಜ್ಯ ಪಂಜಾಬ್,ಅದೇರೀತಿಅತ್ಯಂತಕ್ರೂರಿ ಬುಡಕಟ್ಟುಅಥವಾಕಾಡಜನರುಇರುವರಾಜ್ಯ ಅಸ್ಸಾಂ,ಮೇಘಾಲಯ.ಸಿಕ್ಕಿಂ ರಾಜ್ಯದಲ್ಲಿರುವಗ್ಯಾಂಗ್ಟಾಕ್ ಪ್ರದೇಶಕ್ಕೆ ಹೋದರೆಅಲ್ಲಿನ ಪರಿಸರ ಸ್ವರ್ಗದಅನುಭವ ನೀಡುತ್ತದೆ.ರಾಜಸ್ತಾನ್,ಅಂಡಮಾನ್ ನಲ್ಲಿ ಹೆಚ್ಚಿನ ಬುಡಕ್ಕಟುಜನರು ವಾಸಮಾಡುತ್ತಾರೆ. ಕರ್ನಾಟಕದಲ್ಲಿ ಉ.ಕ ಜಿಲ್ಲೆಯ ಹಕ್ಕಿ ಪಿಕ್ಕಿ ಜನಾಂಗ,ಗೊಲ್ಲರು,ಜೇನುಕರುಬರು ಮುಂತಾದವರುಉತ್ತಮ ಶಿಕ್ಷಣ ಪಡೆಯುತ್ತಿರುವುದುಕಂಡುಬಂದಿದೆ.ಚಮರಾಜ ನಗರದ ಕೆಲವು ಕಡೆಯಲ್ಲಿರುಜನರಲ್ಲಿಉತ್ತಮ ಶಿಕ್ಷಣ ಪಡೆದು ಅದಿಕಾರಿಗಳಾಗಿದ್ದಾರೆ.
ಬುಡಕ್ಕಟುಜನಾಂಗದವರ ಬಗ್ಗೆ ಸರ್ಕಾರದವರತಪ್ಪಿನಿಂದ ಕೆಲವು ಜನರನ್ನು ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆಇದು ಸರಿಯಲ್ಲ ಬದಲಾಗಿಅವರಿಗೆ ಮೂಲಭೂತ ಸೌಕರ್ಯ ನೀಡಬೇಕಾದ್ದುಅಗತ್ಯ ವಿಚಾರ.ಅವರ ಮಾತಿನಂತೆ ನಾನು ಆಯಾ ಪ್ರದೇಶದ ಬುಡಕಟ್ಟುಜನಾಂಗದವರ ಬಗ್ಗೆ ತಿಳಿಯಬೇಕಾದರೆ ಅಲ್ಲಿಅರಣ್ಯಇಲಾಖೆಯನ್ನು ಭೇಟಿ ಮಾಡುತ್ತೇನೆ ನಂತರಅಲ್ಲಿಗೆ ತೆರಳಿ ಅವರ ಮುಖಂಡರ ಬಳಿ ಹೋಗುತ್ತೇನೆ.ಈ ಸಂದರ್ಭದಲ್ಲಿಅವರು ನನ್ನು ಅಷ್ಟು ಬೇಗನೇ ನಂಬುದಿಲ್ಲ ಬದಲಾಗಿ ನಾನು ಅಲ್ಲಿಯೇಇದ್ದುಅವರಲ್ಲಿ ನಾನು ಕಟುಂಬ ಸದಸ್ಯನಾಗಿ ಹೊಂದಿಕೊಂಡ ನಂತರಅವರಎಲ್ಲಾ ಸಮಸ್ಯೆಗಳ ಬಗ್ಗೆ ತಿಳಿಸುತ್ತಾರೆ,ಹೀಗಾಗಿ ನಾನು ಅವರ ಭಾಷೆಯನ್ನುಕಲಿಯುತ್ತೇನೆಎಂದುಅವರು ಹೇಳುತ್ತಾರೆ.
ಕಿರಣ್‍ರವರು 10 ಭಾóಷೆಗಳನ್ನು ಬಲ್ಲವರಾಗಿದ್ದಾರೆ.ನನ್ನ ಬಳಿ ಕೇವಲ ಬಟ್ಟೆ,ಆಹಾರಕ್ಕಾಗಿ ಅಕ್ಕಿ,ನೀರು ಮಾತ್ರಇರುತ್ತದೆ.ಕೆಲವೊಮ್ಮೆ ಹಣವಿಲ್ಲದಿದ್ದಾಗಿಉಪವಾಸದಿಂದ ಬರೇ ನೀರುಕುಡಿದು ಹಲÀವು ದಿನಗಳನ್ನು ಕಳೆದಿದ್ದೇನೆ ಎಂದುಅವರು ಹೇಳುತ್ತಾರೆ.ಅಘಾದವಾದ ಅನುಭವದ ವಿಚಾರಗಳನ್ನು ಹೊಂದಿರುವಅವರು ಅವಿವಾಹಿತರು.ಮನೆಯಲ್ಲಿಅಕ್ಕ,ಅಣ್ನಇದ್ದಾರೆ ವೃದ್ದಾಪ್ಯತಂದೆತಾಯಿ ಮನೆಯಲ್ಲಿದ್ದಾರೆ.ಜೀವನದಲ್ಲಿ ಬುಡಕಟ್ಟುಜನರ ಬಗ್ಗೆ ಅದ್ಯಯನ ಮಾಡಲು ಬದುಕನ್ನೆ ಪಾಣವಾಗಿಸಿ ಅದರಲ್ಲಿಜಯಶಾಲಿಯಾಗಿರುವಕಿರಣ್‍ರವರು ನಿಜ್ಜಕೂಅವರ ಪಾಲಿನ ದೈವವಾಗಿದ್ದಾರೆ.ಮೆಕಾನಿಕಲ್‍ಇಂಜಿನಿಯರಿಂಗ್ ನಲ್ಲಿಡಿಪ್ಲೊಮಾ ಪಡೆದಿರುವಇವರು ಮುಂದೆ ಬುಡಕಟ್ಟುಜನರಿಗಾಗಿ ನೂರಾರು ಯೋಜನೆಗಳನ್ನು ಜಾರಿಗೆತರುವ ಸಂಕಲ್ಪ ಮಾಡಿದ್ದಾರೆ.ಅವರ ಸಂಕಲ್ಪಜಾರಿಯಾಗಲಿ ಎಂಬುದು ನಮ್ಮ ಶುಭ ಹಾರೈಕೆಯಾಗಿದೆ.

By Suddi9

Leave a Reply

Your email address will not be published. Required fields are marked *