ಬಂಟ್ವಾಳ: ವಲಯ ಕಾಂಗ್ರೆಸ್ ಮಂಚಿ, ನವಯುಗ ಸ್ಪೋಟ್ರ್ಸ್ ಕ್ಲಬ್ ಕುಕ್ಕಾಜೆ, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಷನ್ ಹಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮಶತಾಬ್ದಿ ಪ್ರಯುಕ್ತ ಮಂಚಿ ಕುಕ್ಕಾಜೆಯ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಮಟ್ಟದ ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾಟದಲ್ಲಿ ಇಂಡಿಯನ್ ನೇವಿ ತಂಡ ಮೊದಲ ಬಹುಮಾನ ಗೆದ್ದುಕೊಂಡಿದೆ.
ಅಂತಿಮ ಹಂತದ ಹಣಾಹಣಿಯಲ್ಲಿ ಇಂಡಿಯನ್ ಆರ್ಮಿಯನ್ನು ಮಣಿಸಿ ಮೊದಲ ಸ್ಥಾನಕ್ಕೇರಿದೆ. ಇಂಡಿಯನ್ ಆರ್ಮಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿತು. ಜೃತೀಯ ಸ್ಥಾನವನ್ನು ವಿಜಯಬ್ಯಾಂಕ್ ಹಾಗೂ ಚತುರ್ತ ಸ್ಥಾನವನ್ನು ಜೆಕೆ ಅಕೆಡೆಮಿ ಕಾಸರಗೋಡು ತಂಡ ಪಡೆದುಕೊಂಡಿತು.
ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಯನ್ನು ಇಂಡಿಯನ್ ನೇವಿಯ ನಿತಿನ್ ಥೋಮರ್, ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ಜೆಕೆ ಅಕಾಡೆಮಿಯ ರಜನೀಶ್, ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಇಂಡಿಯನ್ ಆರ್ಮಿಯ ಮೋನು ಗೋಯಟ್ ಪಡೆದುಕೊಂಡರು. ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರನ್ನು ಸನ್ಮಾನಿಸಲಾಯಿತು.

