ಬಂಟ್ವಾಳ: ನೇತ್ರಾವತಿಯ ತಟದಲ್ಲಿರುವ ಬಂಟ್ವಾಳದಲ್ಲಿ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ಬಂಟ್ವಾಳ ಅಭಿಯಾನವನ್ನು ಆರಂಭಿಸಲಾಯಿತು. 
ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹರಾಜ್ ಹಾಗೂ ಬಂಟ್ವಾಳ ಪುರಸಭೆ ಅಧ್ಯಕ್ಷರಾದ ರಾಮಕೃಷ್ಣ ಆಳ್ವ ಅವರು ಬಿ. ಸಿ ರೋಡ್ ನ ರಕ್ತೇಶ್ವರಿ ಗುಡಿಯ ಮುಂಭಾಗದಲ್ಲಿ ನಿಶಾನೆ ತೋರುವುದರ ಮೂಲಕ ಉದ್ಘಾಟಿಸಿದರು.
