ಬಂಟ್ವಾಳ: ಮಾಣಿ ಸಮೀಪದ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮಗಳಿಗೆ ಸಂಬಂಧಿಸಿದ ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಾಲಯವು ಜೀರ್ಣೋದ್ಧಾರಗೊಂಡು ಪುನರ್‍ನಿರ್ಮಾಣಗೊಂಡಿದ್ದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ಮೇ 7ರಿಂದ ಮೇ 15ರವರೆಗೆ ಬ್ರಹ್ಮಕಲಶೋತ್ಸವವು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರ್ಷೇಂದ್ರ ದೇರಣ್ಣ ಶೆಟ್ಟಿ ಬಾಳಿಕೆ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇವಸ್ಥಾನವನ್ನು ನವೀಕರಣ ಮಾಡಬೇಕೆಂದು ಎಲ್ಲಾ ಭಕ್ತಜನರು ಸಂಕಲ್ಪಿಸಿದಂತೆ ಅಷ್ಠಮಂಗಲ ಪ್ರಶ್ನೆಯನ್ನಿಟ್ಟು ಅದರಲ್ಲಿ ಕಂಡು ಬಂದ ಎಲ್ಲಾ ಪರಿಹಾರ ಕಾರ್ಯವನ್ನು ಪೂರ್ಣಗೊಳಿಸಿ ದೇವಾಲಯದ ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ನಿಸರ್ಗ ರಮಣೀಯ ಪ್ರದೇಶದಲ್ಲಿರುವ ಈ ದೇವಸ್ಥಾನ ಹಲವು ಶತಮಾನಗಳ ಇತಿಹಾಸವನ್ನು ಹೊಂದಿದ್ದು ಈ ದೇವಸ್ಥಾನದಲ್ಲಿ ಮೂಲತಃ ಉದ್ಬವಲಿಂಗ ಸ್ವರೂಪಿಯಾಗಿದ್ದು ಶ್ರೀದೇವಿ ವಿಗ್ರಹವನ್ನು ಸ್ಥಾಪಿಸಲಾಗಿದೆ.

IMAG2324 Untitled-1

ದಕ್ಷಿಣ ಭಾರತ ವಾಸ್ತುಶಿಲ್ಪ ಶೈಲಿಯಂತೆ ಬರುವ ದೇವಸ್ಥಾನಗಳ ವಾಸ್ತುಶಿಲ್ಪ ಪ್ರಕಾರ ಕ್ಷೇತ್ರದ ಪ್ರಕಾರಗಳಿಗೆ ಅನುಗುಣವಾಗಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ನೂತನ ಎರಡಂತಸ್ತಿನ ಶಿಲಾಮಯ ಗರ್ಭಗುಡಿ,ನಮಸ್ಕಾರ ಮಂಟಪ,ಶ್ರೀ ಮಹಾಗಣಪತಿ ಗುಡಿ,ಶ್ರೀ ಪಿಲಿಚಾಮುಂಡಿ ದೈವದ ಗುಡಿ, ಒಳಪ್ರಾಂಗಣ, ಸುತ್ತುಪೌಳಿ, ಮುಖದ್ವಾರ, ಗೋಪುರ, ಹೊರಪ್ರಾಂಗಣ, ರಾಜಗೋಪುರ, ಪಾಕಶಾಲೆ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಪುನರ್‍ನಿರ್ಮಾಣ ಕಾರ್ಯಾ ನಡೆಯುತ್ತಿದೆ.
ಪ್ರತೀದಿನ ವಿವಿಧ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಮಠಾಧೀಶರುಗಳು, ಸಚಿವರು, ಸಂಸದರು ಹಾಗೂ ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಸ್ಥಳೀಯರೊಂದಿಗೆ ವಿವಿಧ ಉಪಸಮಿತಿಗಳ ಕ್ರಿಯಾಶೀ¯ತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ನರೇಂದ್ರ ರೈ ನೆಲ್ತೊಟ್ಟು, ನವೀಕರಣ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಎಸ್.ಸಂಕಪ್ಪ ರೈ ಕರಿಂಕ, ವಿವಿಧ ಸಮಿತಿಗಳ ಪ್ರಮುಖರಾದ ಹರೀಶ ಪೂಜಾರಿ ಬಾಕಿಲ, ಡಿ.ತನಿಯಪ್ಪ ಗೌಡ, ಸೇಸಪ್ಪ ಗೌಡ, ಗೋಪಾಲಕೃಷ್ಣ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *